ಬೆಂಗಳೂರು ಗ್ರಾಮಾಂತರ

ಆನೇಕಲ್ ಪುರಸಭೆ ಶೇ. 76 ಮತದಾನ

Published On :

ಕ.ಪ್ರ.ವಾರ್ತೆ  ಆನೇಕಲ್ಲು  ಮಾ.7
ಆನೇಕಲ್ ಪುರಸಭೆಯ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಸರಾಸರಿ ಶೇ. 76.14 ಮತದಾನ ನಡೆದಿದ್ದು 24319 ಮತಗಳು ಚಲಾವಣೆಯಾಗಿದೆ. ಒಟ್ಟು ಪುರುಷರು 12570 ಹಾಗೂ 11749 ಮಹಿಳೆಯರು ಮತದಾನದಲ್ಲಿ ಭಾಗವಹಿಸಿದ್ದರು. 13ನೇ ವಾರ್ಡ್ ನಲ್ಲಿ ಗರಿಷ್ಠ - ಶೇ. 85.52  (992 ಕ್ಕೆ 825 ಮತಗಳು)  21ನೇ ವಾರ್ಡ್‌ನಲ್ಲಿ  ಕನಿಷ್ಠ ಶೇ. 64.78  (2014ಕ್ಕೆ 1347 ಮತಗಳು) ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಶಿವೇಗೌಡ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ  ಸರ್ಕಾರಿ ಶಾಲಾ ಆವರಣದಲ್ಲಿ ಮತ ಎಣಿಕೆ ನಡೆಯಲಿದೆ. ಶಾಂತಿಯುತ ಮತದಾನಕ್ಕೆ ಸಹಕರಿಸಿದ ಎಲ್ಲ ನಾಗರೀಕ ಬಂಧುಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
19ನೇ ವಾರ್ಡಿನಲ್ಲಿ ಮಾತಿನ ಚಕಮಕಿ ಹಲ್ಲೆ: ಗುರುವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಶಾಂತಿಯುತವಾಗಿ ನಡೆದಿತ್ತು. 9 ಗಂಟೆ ಸುಮಾರಿಗೆ ಬಿಜೆಪಿ ಅಬ್ಯರ್ಥಿ ನಾಗರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಸುರೇಶ್ ನಡುವೆ ಮತದಾರ ಗುರುತಿನ ಚೀಟಿ ಸಂಬಂಧ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರಿ ತಳ್ಳಾಟ ಹಾಗೂ ಪರಸ್ಪರ ಹಲ್ಲೆ ನಡೆಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಲಭೆ ತಡೆಯುವ ಪ್ರಯತ್ನ ಮಾಡಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದರು. ವೃತ್ತ ನಿರೀಕ್ಷಕ ಕಿಶೋರ್ ಕುಮಾರ್ ಮಾಹಿತಿ ನೀಡಿ ನಾಗರಾಜ್ ಹಾಗೂ ಮಲ್ಲಿಕಾರ್ಜುನ್ ಮೇಲೆ ದೂರು ದಾಖಲಾಗಿದ್ದು ಕ್ರಮ ವಹಿಸುವುದಾಗಿ ತಿಳಿಸಿದರು. ಸಂಜೆ 4-30ರ ಸಮಯದಲ್ಲಿ ಹೊಸ ಮಾದ್ಯಮಿಕ ಶಾಲಾ ಮೈದಾನದಲ್ಲಿ ಗುಂಪು ಕೂಡಿಕೊಂಡಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಕಾಯಕರ್ತರು ಹೆಗಲ ಮೇಲಿದ್ದ ನಿಶಾನೆಯನ್ನು ಕಿತ್ತೆಸೆದು ದಿಕ್ಕಾ ಪಾಲಾಗಿ ಓಡಿದರು.
ಕಾರು ದುರುಪಯೋಗ ಸಚ್ಚಿ ಮೇಲೆ ಕೇಸು: ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಚ್ಚಿದಾನಂದ ಅವರು ಆನೇಕಲ್ ಪುರಸಭೆಯ ಚುನಾವಣೆಯನ್ನು ವೀಕ್ಷಿಸಲು ನಿಗಮದ ಕಾರಿನಲ್ಲಿ ತಾಲೂಕು ಕಚೇರಿ ಬಳಿ ಬಂದಿಳಿದರು.  ಛಾಯಾ ಚಿತ್ರ ತೆಗೆಯಲು ಮುಂದಾದಾಗ ಸಂದಿಗೊಂದಿಯಲ್ಲಿ ನುಗ್ಗಿದ  ಮತ್ತೆ ರಸ್ತೆಯಲ್ಲಿ ಕಾಣಿಸಿಕೊಂಡಿತು. ಚುನಾವಣಾ ನೀತಿ ಸಂಹಿತೆ ಹಾಗೂ ನಿಗಮದ ಕಾರು ದುರುಪಯೋಗ ಕಾರಣ ಚುನಾವಣಾಧಿಕಾರಿ ದೂರು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.