ರೇಷ್ಮೆ ಮಾರಾಟ ಮಂಡಳಿಗೆ ನೇಮಕ
ಸೂಲಿಬೆಲೆ: ಇಲ್ಲಿಗೆ ಸಮೀಪದ ಗಿಡ್ಡಪ್ಪನಹಳ್ಳಿ ಗ್ರಾಮದ ಅಕ್ಬರ್ ಅಲಿಖಾನ್ ಅವರನ್ನು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.ಸೂಲಿಬೆಲೆ ಹೋಬಳಿ ಗಿಡ್ಡಪ್ಪನಹಳ್ಳಿ ಗ್ರಾಮದ ಇವರು ಯುವ ಮುಖಂಡರಾಗಿದ್ದು, ಜನ ಮತ್ತು ರೈತಪರವಾದ ಕಾರ್ಯಗಳಲ್ಲಿ ಸಕ್ರಿಯವಾಗಿದ್ದರು. ಇವರ ಸೇವೆಗೆ ಅನುಗುಣವಾಗಿ ಕೂಡಲೇ ಜಾರಿಗೆ ಬರುವಂತೆ ರಾಜ್ಯಪಾಲರ ಆದೇಶಾನುಸಾರ ತೋಟಗಾರಿಕೆ ಇಲಾಖೆ ಪೀಠಾಧಿಕಾರಿ ಬಿ.ಎಸ್. ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ನಿರ್ದೇಶಕರಾಗಿ ನೇಮಕ ಮಾಡಲು ಕಾರಣರಾದ ಸಚಿವ ಬಿ.ಎನ್. ಬಚ್ಚೇಗೌಡ, ಬಿ.ಎನ್. ಗೋಪಾಲಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್ ಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ವಿ. ರಾಜಶೇಖರ್ ಗೌಡ ಅಕ್ಬರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಯುವ ಜೆಡಿಎಸ್‌ಗೆ ಸಂತೋಷ್ ನೇಮಕ
ಚನ್ನಪಟ್ಟಣ: ನಗರ ಯುವ ಜನತಾದಳದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಮಂಗಳವಾರಪೇಟೆ ಸಂತೋಷ್‌ಕುಮಾರ್ ಅವರನ್ನು ನೇಮಿಸಿ ನಗರ ಅಧ್ಯಕ್ಷ ವಿ.ಸತೀಶ್ ಬಾಬು ಆದೇಶ ಹೊರಡಿಸಿದ್ದಾರೆ.
ಪಟ್ಟಣದಲ್ಲಿ ಯುವಸಂಘಟನೆಯೊಂದಿಗೆ ಪಕ್ಷವನ್ನು ಬೆಳೆಸುವ ಜತೆಗೆ, ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಮುಂದಿನ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಶ್ರಮಿಸುವಂತೆ ಸಂತೋಷ್ ಅವರಿಗೆ ಸತೀಶ್ ಸೂಚಿಸಿದ್ದಾರೆ.
'ಕುಡಿವ ನೀರಿಲ್ಲ'
ಮಾಗಡಿ: ಮಾಗಡಿ ಪಟ್ಟಣದ 20 ನೇ ವಾರ್ಡ್‌ನಲ್ಲಿ ಕಳೆದ ತಿಂಗಳಿನಿಂದಲೂ ಕುಡಿಯುವ ನೀರಿಲ್ಲ ಎಂದು ಪುರಸಭೆ ಸದಸ್ಯೆ ನಿರ್ಮಲಾ ಸೀತಾರಾಂ ದೂರಿದ್ದಾರೆ. ಪಟ್ಟಣದ ಬಹುತೇಕ ಎಲ್ಲಾ ವಾರ್ಡ್‌ಗಳಿಗೂ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ 20ನೇ ವಾರ್ಡ್‌ಗೆ ಕೊಳವೆ ಬಾವಿ ಕೊರೆಸದೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇಲ್ಲಿಯವರೆವಿಗೂ ಕೊಳವೆ ಬಾವಿ ಕೊರೆಸಿಲ್ಲ, ಅಗತ್ಯ ಕುಡಿಯುವ ನೀರು ಪೂರೈಕ ಮಾಡುತ್ತಿಲ್ಲ, ನೀರು ಪೂರೈಕೆಗೆ ಮಾಡುವಂತೆ ಹಲವಾರು ಬಾರಿ ಪುರಸಭೆ ಮುಖ್ಯಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಖ್ಯಧಿಕಾರಿಗಳು 20ನೇ ವಾರ್ಡ್‌ಗೆ ತುರ್ತಾಗಿ ಕೊಳವೆ ಬಾವಿ ಕೊರಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ 20ನೇ ವಾರ್ಡ್‌ನ ಎಲ್ಲಾ ಜನತೆಯೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯುವುದಾಗಿ ನಿರ್ಮಲಾ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

