ಬೆಂಗಳೂರು ಗ್ರಾಮಾಂತರ

ದೇಶಕ್ಕೆ ಜನಪರ ಯೋಜನೆ ಅಗತ್ಯ: ಡಾ. ಶೈಲೇಶ್‌ನಾಯಕ

Published On :

ಕ.ಪ್ರ.ವಾರ್ತೆ ಬೆಂಗಳೂರು ಮಾ.23
ಮುಂದಿನ ಮೂರು ವರ್ಷಗಳಲ್ಲಿ ಸೂಕ್ತ ಆಡಳಿತ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ(ಕೆಜಿಐಎಸ್) ಸಹಾಯ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಭೂ ವಿಜ್ಞಾನಗಳ ಇಲಾಖೆ ಕಾರ್ಯದರ್ಶಿ ಡಾ. ಶೈಲೇಶ್ ನಾಯಕ್ ಹೇಳಿದರು.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ, ಕರ್ನಾಟಕ ಜ್ಞಾನ ಆಯೋಗದ ಸಹಯೋಗದೊಂದಿಗೆ
ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 'ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ' ಮುನ್ನೋಟ ಮತ್ತು ಬಳಕೆದಾರರ ಅವಶ್ಯಕತೆಗಳ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತ ವೇಗವಾಗಿ ಬೆಳೆಯುತ್ತಿದೆ. ಜನಪರ ಯೋಜನೆ ರೂಪಿಸಬೇಕಾದ ಅಗತ್ಯವಿದೆ. ವಿವಿಧ ಇಲಾಖೆಗಳಲ್ಲಿ
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಾಹಿತಿ ಕಲೆ ಹಾಕಿ ಸಮಾಜ ಮತ್ತು ಮಾನವ ಪರಸ್ಪರ ಬಾಂಧ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡಲು ಕೆಜಿಐಎಸ್ ಅನುಕೂಲವಾಗಲಿದೆ ಎಂದರು.
ಇಂದು ಭೌಗೋಳಿಕ ಪ್ರದೇಶ ಗುರುತಿಸಲು ಗೂಗಲ್ ಮ್ಯಾಪಿಂಗ್ ಬಳಸುತ್ತಿದ್ದೇವೆ. ಕೆಜಿಐಎಸ್ ಬಳಕೆ ಮಾಡುವುದರ ಮೂಲಕ ಇಡೀ ಭಾರತದಲ್ಲಿ ಎಲ್ಲಿ ಏನಾಗುತ್ತದೆ? ಎಂಬ ಸಂಪೂರ್ಣ ಚಿತ್ರಣ ಸಿಗಲಿದೆ. ಈ ತಂತ್ರಜ್ಞಾನ ಕಾರ್ಯ ಪ್ರಗತಿಯಲ್ಲಿದ್ದು, ಮೂರು ವರ್ಷಗಳಿಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮಾತನಾಡಿ, ಜ್ಞಾನ ಆಯೋಗ ಶಿಫಾರಸು  ಮಾಡಿರುವ 87 ಅಂಶಗಳನ್ನು ಶೇ.80 ಅನುಷ್ಠಾನಗೊಳಿಸಲಿದ್ದೇವೆ. ಬೆಂಗಳೂರು ಜ್ಞಾನ ಭಂಡಾರದ ಬೀಡು.
ಕೆಜಿಐಎಸ್ ಅಳವಡಿಸಿಕೊಳ್ಳುವುದರಿಂದ ಆಡಳಿದಲ್ಲಿ ಸುಧಾರಣೆ, ಅಭಿವೃದ್ಧಿ, ನಾಗರಿಕ ಬಲವರ್ಧನೆಗೊಳಿಸಲು ಈ ಕಾರ್ಯಾಗಾರದಲ್ಲಿ ಕರ್ನಾಟಕ ಜ್ಞಾನ ಆೈಯೋಗ ಸದಸ್ಯರು ಡಾ. ಮುಕುಂದ ಕೆ. ರಾವ್, ಕಾರ್ಯದರ್ಶಿ ಡಾ.ಎಂ.ಕೆ. ಶ್ರೀಧರ್, ಡಾ.ಡಿ.ಕೆ. ಪ್ರಭುರಾಜ್, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.