ಬೆಂಗಳೂರು ಗ್ರಾಮಾಂತರ

ಜನಸಾಗರದ ನಡುವೆ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

Published On :

ಮಾಗಡಿ:  ಜನಸಾಗರದ ನಡುವೆ ಪುರಾಣ ಪ್ರಸಿದ್ಧ ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ತಹಸೀಲ್ದಾರ್  ಡಾ. ಹರೀಶ್  ನಾಯಕ್  ಭಕ್ತಿಭಾವದಿಂದ  ಪ್ರಥಮವಾಗಿ ವಿಶೇಷ  ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು.
ಗೋವಿಂದ.. ಗೋವಿಂದ..ಎಂಬ ನಾಮಸ್ಮರಣೆಯೊಂದಿಗೆ  ಭಕ್ತಿಭಾವದಿಂದ  ಭಕ್ತಜನಸಾಗರ ರಥೋತ್ಸವಕ್ಕೆ   ಪೂಜೆ ಸಲ್ಲಿಸಿ ಬಾಳೆಹಣ್ಣು ಧವನ ಎಸೆದರು.
ಇದೇ ಸಂದರ್ಭದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಶ್ರೀಲಕ್ಷ್ಮೀನರಸಿಂಹಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.  ತಾಲೂಕಿಗೆ ಹೇಮಾವತಿ ನೀರು ಹರಿಸುವ ಮಹತ್ಕಾರ್ಯಕ್ಕೆ ಅವಕಾಶ ಕಲ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾಗಿ ಕೆಪಿಸಿಸಿ ಸದಸ್ಯ ಎ.ಮಂಜು ತಿಳಿಸಿದರು.
  ಮಾಜಿ ಧರ್ಮದರ್ಶಿ ಹಾಗು ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ, ಬಮೂಲ್ ನರಸಿಂಹಮೂರ್ತಿ, ಜಿ.ಪಂ. ಸದಸ್ಯೆ ಹಂಸಕುಮಾರಿ, ಮಾಜಿ ಸದಸ್ಯ ವೀರಪ್ಪ, ಸೋಮಶೇಖರ್  ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್,  ನಾರಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಎಂ.ಎಚ್. ಸುರೇಶ್, ರವಿಕುಮಾರ್, ಮರೀಗೌಡ, ಕುದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಶಿವಪ್ರಸಾದ್, ದೇವೇಂದ್ರ, ರೆವಿನ್ಯೂ ಅಧಿಕಾರಿಗಳಾದ ಮಹಾಲಿಂಗಪ್ಪ, ವಿಜಯಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಅರ್ಚಕ ನರಸಿಂಹಭಟ್ಟ, ರಂಗನಾಥ್, ಭೋಜಣ್ಣ, ಪ್ರಕಾಶ್, ಸಾರಂಗಪಾಣಿ, ಶಾನುಭೋಗ ನಾಗಭೂಷಣ್,  ಪಾರುಪತ್ತೆಗಾರ ಸಂಪತಕುಮಾರ್ಸೇರಿದಂತೆ ಸಹಸ್ರಾರು ಭಕ್ತಸಾಗರ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.