ಸರ್ ಎಂ. ವಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾಹಿವಾಟು ರು. 28.73 ಕೋಟಿ
ಕ.ಪ್ರ. ವಾರ್ತೆ ಕನಕಪುರ ಮಾ.25
ಸರ್ಎಂ. ವಿಶ್ವೇಶ್ವರಯ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 13ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಕನಕಪುರದ ರೋಟರಿ ಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಕೈಲಾಸ ಶಂಕರ್ವಹಿಸಿದ್ದರು. ಕಾರ್ಯದರ್ಶಿ ಆರ್. ಶ್ರೀಕಂಠೇಶ್ವರ ಕಲಾಪಗಳನ್ನು ನಿರ್ವಹಿಸಿದರು. ಸಂಘದ ಹಿರಿಯ ಸದಸ್ಯರು ಉದ್ಘಾಟನೆ ನೆರವೇರಿಸಿದರು.
ಸಂಸ್ಥೆಯ ಅಧ್ಯಕ್ಷ ಕೈಲಾಸ ಶಂಕರ್ ಮಾತನಾಡಿ, ಪರಸ್ಪರ ಬೆಳವಣಿಗೆ, ಏಳಿಗೆಗೆ ಪೂರಕವಾದ ಸಹಕಾರ ಚಳವಳಿಯ ಅಂಶಗಳನ್ನು ಸಂಸ್ಥೆಯು ಪ್ರಾಂಜಲ ಮನಸ್ಸಿನಿಂದ ಅನುಸರಿಸುತ್ತಿದ್ದು ಸೊಸೈಟಿ ನಿರಂತರವಾದ ಏರುಗತಿಯ ಬೆಳವಣಿಗೆಯನ್ನು ಸದಸ್ಯರ ಸಹಕಾರದಿಂದ ಸಾಧಿಸಿದೆ. ಪ್ರಸಕ್ತ ಸಾಲಿನಲ್ಲಿ 28.73 ಕೋಟಿ ವಾಹಿವಾಟು ನಡೆಸಿ 15.72 ಲಕ್ಷ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ.20 ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ. ಸಂಸ್ಥೆಯು ಸ್ವಂತಕಟ್ಟಡ ಹೊಂದುವ ಸಲುವಾಗಿ ಇಲ್ಲಿನ ಬೂದಿಕೇರಿ ಕೆಬಿಸಿ ಕಾಂಪ್ಲೆಕ್ಸ್ ಸಮೀಪ 50 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿಸಿದೆ. ಮುಂಬರುವ ವರ್ಷದಲ್ಲಿ ಸ್ವಂತ ಕಟ್ಟಡದ ಕನಸು ನನಸಾಗಲಿದೆ ಎಂದರು.
ಉಪಾಧ್ಯಕ್ಷ ಮೋಹನದಾಸ್ ಮಾತನಾಡಿ, ಸಂಘವು ಸದಸ್ಯರ ಅನುಕೂಲಕ್ಕಾಗಿ ಅನೇಕ ಸವಲತ್ತುಗಳನ್ನು ಒದಗಿಸಿದೆ. ಎಲ್ಲರಿಗೂ ತಲಾ ಒಂದು ಲಕ್ಷದ ಅಪಘಾತವಿಮೆ, ಆಸ್ತಿಆಧಾರಿತ ಓವರ್ ಡ್ರಾಫ್ಟ್ ಸಾಲಸೌಲಭ್ಯ, ಮಲ್ಟಿಸಿಟಿ ಚೆಕ್ ಸೌಲಭ್ಯ, ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ, ಐದುಸಾವಿರ ರು. ಮರಣೋತ್ತರ ಪರಿಹಾರಗಳನ್ನು ನೀಡಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

