ನಾಳೆಯಿಂದ ಶ್ರೀಬಿಸಲಮ್ಮ ದೇವಿ ಜಾತ್ರೆ
ಕ.ಪ್ರ.ವಾರ್ತೆ ಚನ್ನಪಟ್ಟಣ ಮಾ.26
ತಾಲೂಕಿನ ಹುಣಸನಹಳ್ಳಿಯ ಶ್ರೀಬಿಸಲಮ್ಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ದೇವತಾ ಕಾರ್ಯಗಳು ಮಾ.28 ರಿಂದ ಏ.4 ರವರೆಗೆ ಗ್ರಾಮದಲ್ಲಿ ನಡೆಯಲಿವೆ.
ಮಾ.28ರಂದು ಹೂವಿನ ತೇರು, 29 ರಂದು ಉತ್ಸವಗಳು, 30ರಂದು ಹುಲಿವಾಹನ ಉತ್ಸವ, 31 ರಂದು ಬೆಳಗ್ಗೆ ಯಳವಾರ, ರಾತ್ರಿ ರಸಮಂಜರಿ ಕಾರ್ಯಕ್ರಮ, ಏ.1ರಂದು ಬೆಳಗ್ಗೆ ಕೊಂಡ ನಡೆಯಲಿದ್ದು, ಕೊಂಡ ಉತ್ಸವಕ್ಕೆ ಹುಣಸನಹಳ್ಳಿ, ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ನಾಗಾಪುರ, ಅಕ್ಕೂರು ಸೇರಿದಂತೆ ಹಲವಾರು ಗ್ರಾಮಗಳಿಂದ ಕೊಂಡದ ಸೌದೆ ತರುವ ಕಾರ್ಯಕ್ರಮ ನಡೆಯಲಿದೆ. ಅಂದು ಮಧ್ಯಾಹ್ನ ರಥೋತ್ಸವ, ರಾತ್ರಿ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಏ.2ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಇದರ ಅಂಗವಾಗಿ ಸಿಡಿ, ಪಾನಕ ಬಂಡಿ ನಡೆಯಲಿದೆ. ಸಿಡಿ ಉತ್ಸವದಲ್ಲಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಭಕ್ತರು, ಬಿಸಲಮ್ಮ ದೇವಿಯ ಒಕ್ಕಲಿನವರು ಪಾಲ್ಗೊಳ್ಳುವುದು ಇಲ್ಲಿಯ ವಿಶೇಷ. ಭಕ್ತರು ಸಿಡಿ ಆಡುವುದು, ಹಣ್ಣು ಜವನ ಎಸೆಯುವುದು, ಹೆಬ್ಬಾರೆ ಕಾರ್ಯ ಈ ಸಂದರ್ಭದ ವಿಶೇಷ ಪೂಜಾ ಕೈಂಕರ್ಯವಾಗಿದೆ. ಅಂದು ರಾತ್ರಿ ಉಯ್ಯಾಲೆ ಉತ್ಸವ ನಡೆಯಲಿದೆ. ಏ.3ರಂದು ವಸಂತೋತ್ಸವ, ಏ.4ರಂದು ಕರಗ ಮನೆ ಪ್ರವೇಶ ಮುಂತಾದ ದೇವತಾಕಾರ್ಯಗಳು ನಡೆಯಲಿವೆ. ಇಲ್ಲಿನ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ಏ.2ರಂದು ಸಿಡಿ ಉತ್ಸವದ ಅಂಗವಾಗಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದೆ. ಅನ್ನ ಸಂತರ್ಪಣೆಗೆ ಸಹಾಯ ಮಾಡುವ ಭಕ್ತರು ದೂ.ಸಂ. 9986385654, 9141589385,990126152ನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

