ನ್ಯಾಯ ಸಮ್ಮತ ಚುನಾವಣೆಗೆ ಅಧಿಕಾರಿಗಳ ತಂಡ
ಕ.ಪ್ರ.ವಾರ್ತೆ ರಾಮನಗರ ಮಾ.26
ಪ್ರಸಕ್ತ ವಿಧಾನಸಭಾ ಚುನಾವಣೆಗೆ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆಯ ಪಾಲನೆ, ಅಕ್ರಮಗಳನ್ನು ತಡೆಗಟ್ಟಿ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ಕ್ಷೇತ್ರವಾರು ಅಧಿಕಾರಿಗಳ ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ನಗರಸಭೆ ವ್ಯಾಪ್ತಿ, ಗ್ರಾಮಾಂತರ ಪ್ರದೇಶಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಕನಕಪುರ ಹಾಗೂ ಮಾಗಡಿ ಕ್ಷೇತ್ರಗಳಲ್ಲಿ ತಲಾ 1 ತಂಡ ಕಾರ್ಯ ನಿರ್ವಹಿಸಲಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ರಾಮನಗರ ಕ್ಷೇತ್ರ
ನಗರಸಭೆ ವ್ಯಾಪ್ತಿಗೆ ರೇಷ್ಮೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಕಾಂತ್ರೆಡ್ಡಿ (9845571739) ಮುಖ್ಯಸ್ಥರು. ಸಹಾಯಕರಾಗಿ ಸಿಎಂಸಿ ಆಯುಕ್ತ, ಯಶವಂತ್(9448166978), ಸಿಪಿಐ ಪುರುಷೋತ್ತಮ್ (9480802830),ಶ್ರೀನಿವಾ ಸ್(9164847272) ನೇಮಕಗೊಂಡಿದ್ದಾರೆ. ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಸ್.ಟಿ.ರಾಥೋಡ್ (916 4622999) ನೇತೃತ್ವದಲ್ಲಿ ತಾ. ಪಂ. ಇಒ ಕೆ.ಸಿ.ನಾರಾಯಣಸ್ವಾಮಿ (9845838211), ಸಿಪಿಐ ಭಾಸ್ಕರ್(9480802831), ಅಬಕಾರಿ ಇಲಾಖೆ ಉಪ ನಿರೀಕ್ಷಕ ಆರ್.ಚಂದ್ರಶೇಖರ್ (9901074805), ಪರಮೇಶ್ (9741917226) ಅವರನ್ನೊಳಗೊಂಡ ತಂಡ ಕಾರ್ಯ ನಿರ್ವಹಿಸಲಿದೆ.
ಚನ್ನಪಟ್ಟಣ ಕ್ಷೇತ್ರ
ನಗರಸಭೆ ವ್ಯಾಪ್ತಿಯ ತಂಡಕ್ಕೆ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಹಫೀಜ್ (9886180299) ಮುಖ್ಯಸ್ಥರಾಗಿದ್ದು, ಸಿಪಿಐ ರಾಜಣ್ಣ(9480802834), ಸಿಎಂಸಿ ಆಯುಕ್ತ ಪದ್ಮ ನಾ ಭ್(9901 757109), ಅಬಕಾರಿ ಉಪ ನಿರೀಕ್ಷಕ ಲೋ ಹಿತ್ (9994266147), ರಾಕೇಶ್ (8884266147) ಸಹಾಯಕರಾಗಿದ್ದಾರೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ. ಕೃಷ್ಣ(9448999241) ಮುಖ್ಯಸ್ಥರು. ತಾ.ಪಂ. ಇಒ ರವಿಕುಮಾರ್(9480875100), ಸಿಪಿಐ ಸಿದ್ದಯ್ಯ(9480802835), ಅಬಕಾರಿ ಉಪನಿರೀಕ್ಷ ಸುನಿಲ್ (9141263785), ಸಾಗರ್(9448 048585) ಸಹಾಯಕರು.
ಮಾಗಡಿ ಕ್ಷೇತ್ರ
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬಾಲ್ಯನಾಯಕ್ ಮೊ.9880092391) ನೇತೃತ್ವದ ತಂಡದಲ್ಲಿ ಮಾಗಡಿ ಸಿಪಿಐ ಕೃಷ್ಣಕುಮಾರ್(9480802833), ತಾ.ಪಂ. ಇಒ ಹಕ್ಕೂಜಿ, ಅಬಕಾರಿ ಉಪ ನಿರೀಕ್ಷಕ ಬಿ.ನಾರಾಯಣ(9449597274), ಎ.ಬಿ.ಮಹೇಶ್(9448241493) ಸಹಾಯಕರಾಗಿದ್ದಾರೆ.
ಕನಕಪುರ ಕ್ಷೇತ್ರ
ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗರಾಜು (9900992499)ಈ ಕ್ಷೇತ್ರದ ಮುಖ್ಯಸ್ಥರಾಗಿದ್ದಾರೆ. ಸಿಪಿಐಧನಂಜಯ (9480802836), ತಾ.ಪಂ.ಇಒ ಜಿ.ಜೆ.ನಾಯಕ್, ಅಬಕಾರಿ ಉಪ ನಿರೀಕ್ಷಕ ಕೆ.ಕೇಶವಮೂರ್ತಿ(9844157027), ಪ್ರವೀಣ್(9738961494) ತಂಡದಲ್ಲಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

