ತೀವ್ರಗತಿ ವಿಲೇವಾರಿ ನ್ಯಾಯಾಲಯ ಸ್ಥಾಪನೆ
ಕ.ಪ್ರ ವಾರ್ತೆ ಕನಕಪುರ ಮಾ.31-
ಸಾರ್ವಜನಿಕರ ತಗಾದೆಗಳನ್ನು, ವ್ಯಾಜ್ಯಗಳನ್ನು ತೀವ್ರಗತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ತಾಲೂಕುಗಳಲ್ಲಿಯೂ ಜಿಲ್ಲಾ ಮಟ್ಟದ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ ಜನರು ನೂರಾರು ಕಿಮೀ ದೂರ ಅಲೆದಾಡುವ ಪರಿಸ್ಥಿತಿ ತಪ್ಪುತ್ತದೆ ಎಂದು ಹೈಕೋರ್ಟ್ ನ್ಯಾ.ಕೇಶವನಾರಾಯಣ ಹೇಳಿದ್ದಾರೆ.
ಅವರು ಕನಕಪುರದ ಜೆಎಂಎಫ್ಸಿ ನ್ಯಾಯಾಲಯ ಸಂಕೀರ್ಣದಲ್ಲಿ ಅಪರಜಿಲ್ಲಾ ಮತ್ತು ಸತ್ರನ್ಯಾಯಾಲಯ, ಸಿವಿಲ್ ಜಡ್ಜ್, ಜೆಎಂಎಫ್ಸಿ ನ್ಯಾಯಾಲಯಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ವಕೀಲರ ಸಂಘದ ಅಧ್ಯಕ್ಷ ಮುತ್ತೇಗೌಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಲಯದ ಕೊಠಡಿಗಳು ಹಾಗೂ ಪೀಠೋಪಕರಣಗಳಲ್ಲಿ ವಿವಾದಗಳು ಇತ್ಯರ್ಥವಾಗುವುದಿಲ್ಲ, ಪರಸ್ಪರ ಅರಿತುಕೊಂಡು ರಾಜಿಸಂಧಾನದ ಮೂಲಕ, ಲೋಕಅದಾಲತ್ ವ್ಯವಸ್ಥೆಯನ್ನು ಬಳಸಿಕೊಂಡು ಜನರು ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಲು ಮುಂದಾಗಬೇಕು, ರಾಜಿಸಂಧಾನಗಳೇ ಅತ್ಯುತ್ತಮ ಮಾರ್ಗ ಎಂದು ನ್ಯಾ.ಕೇಶವನಾರಾಯಣ ನುಡಿದರು.
ಸಮಸ್ಯೆಗೆ ಸ್ಪಂದಿಸಿ: ಹೈಕೋರ್ಟ್ ನ್ಯಾಯಮೂರ್ತಿ ಹುಲವಾಡಿ ರಮೇಶ್ ಮಾತನಾಡುತ್ತಾ, ನ್ಯಾಯವಾದಿಗಳು ತಮ್ಮ ವೃತ್ತಿಯ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೂ ಸ್ಪಂದಿಸಬೇಕು, ಜನರ ವಿವಾದಗಳನ್ನು ಬಗೆಹರಿಸಿಕೊಡುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬಾಳಲು ಶ್ರಮಿಸಬೇಕು ಎಂದರು.
ಬೆಂಗಳೂರಿನ ಅಂಚಿನಲ್ಲಿದ್ದರೂ ಅಭಿವೃದ್ಧಿಯಿಂದ ದೂರವೇ ಉಳಿದಿರುವ ಕನಕಪುರ ತಾಲೂಕಿನಲ್ಲಿ ದಾವೆಗಳ ಸಂಖ್ಯೆಯು ಹೆಚ್ಚಾಗಿರುವುದು, ನ್ಯಾಯದಾನಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಕಂಡುಬಂದಿದೆ. ತಮಿಳುನಾಡಿನ ಗಡಿಯಿಂದ ನೂರು ಕಿಮೀ ದೂರದ ಜಿಲ್ಲಾಕೇಂದ್ರಕ್ಕೆ ನ್ಯಾಯಕ್ಕಾಗಿ ಪರದಾಡುವುದು ಈಗ ತಪ್ಪಿದಂತಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ನ್ಯಾಯಾಧೀಶ ಎಂ.ಕೆ. ಪ್ರಹ್ಲಾದ್, ನ್ಯಾಯಾಧೀಶರಾದ ನಾರಾಯಣ ಹೆಗಡೆ, ಬಿ.ದಶರಥ, ಜಿ.ವಿ.ಲತಾದೇವಿ, ವಕೀಲರಸಂಘದ ಅಧ್ಯಕ್ಷ ಮುತ್ತೇಗೌಡ, ಕಾರ್ಯದರ್ಶಿ ವೀರಪ್ಪ, ಅಭಿಯೋಜಕ ರವೀಂದ್ರಪ್ಪ, ಹಿರಿಯ ವಕೀಲರಾದ ರಾಮಚಂದ್ರ, ಮಹೇಶ್ಚಂದ್ರಗುರು, ಸಂಪಂಗಿರಾಮಯ್ಯ, ಸಂಪತ್ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

