ಬೆಂಗಳೂರು ಗ್ರಾಮಾಂತರ

ಡಿಕೆಶಿ ಪರ ಪ್ರಚಾರ

Published On :

ಕನಕಪುರ: ಅಖಿಲ ಕರ್ನಾಟಕ ಡಿಕೆಶಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಮಲ್ಲಪ್ಪ ಎಸ್.ಅಂಗಡಿ ನೇತೃತ್ವದಲ್ಲಿ ಕನಕಪುರ ವಿಧಾನಸಭಾ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಸಕ ಶಿವಕುಮಾರ್ ಅವರಿಗೆ ಮತ ನೀಡಬೇಕೆಂದು ಕೋರಿ ಪ್ರಚಾರ ನಡೆಸಿದರು.  ಕನಕಪುರ ಕ್ಷೇತ್ರದಲ್ಲಿ ಪ್ರಶ್ನಾತೀತ ನಾಯಕರಾಗಿರುವ ಶಿವಕುಮಾರ್ ಅವರು ತಮ್ಮ ಕಾರ್ಯಕ್ಷಮತೆ, ದಕ್ಷತೆ ಹಾಗೂ ಸಂಘಟನಾ ಮನೋಭಾವದಿಂದ ರಾಜ್ಯಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನಕಪುರದ ಅಪೂರ್ವ ಅಭಿವೃದ್ಧಿಗೂ ತಮ್ಮದೇ ಆದ ಶೈಲಿಯಲ್ಲಿ ಕೊಡುಗೆ ನೀಡಿರುವ ಶಿವಕುಮಾರ್ ರಾಜ್ಯ ಭವಿಷ್ಯದ ರಾಜಕಾರಣದ ಆಶಾಕಿರಣವಾಗಿದ್ದಾರೆ. ಅವರ ಗೆಲವು ರಾಜ್ಯದ ಅಭಿವೃದ್ಧಿಯ ಮುನ್ಸೂಚನೆಯಾಗಲಿದೆ ಎಂದು ಅಂಗಡಿ ತಿಳಿಸಿದ್ದಾರೆ.
ಮರಳಿದ ಗುರಪ್ಪ
ದೇವನಹಳ್ಳಿ: ಬಿಜೆಪಿ ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷರಾಗಿದ್ದ ಎಸ್.ಗುರಪ್ಪರವರು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ತಾವು ಬಿಜೆಪಿಯಲ್ಲಿದ್ದಾಗ ತಮ್ಮ ಮಾತಿಗೆ ವರಿಷ್ಠರು ಗೌರವ ನೀಡದೆ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಆಕಾಂಕ್ಷಿಗಳಾಗಿದ್ದ ಎಸ್.ಜಿ.ನಾರಾಯಣಸ್ವಾಮಿ ಹಾಗೂ ಡಿ.ಆರ್.ನಾರಾಯಣಸ್ವಾಮಿ ಇವರುಗಳಿಗೆ ಟಿಕೆಟ್ ನೀಡದೆ ಅಧಿಕಾರದ ಆಸೆಗಾಗಿ ಬಿಜೆಪಿಗೆ ಪಕ್ಷಾಂತರ ಮಾಡಿ ಬಂದ ಜಿ.ಚಂದ್ರಣ್ಣರವರಿಗೆ ಟಿಕೆಟ್ ನೀಡಿದ್ದಕ್ಕೆ ತಮಗೆ ಬೇಸರವಾಗಿ ಸಿ.ನಾರಾಯಣಸ್ವಾಮಿರವರ ಮಾರ್ಗದರ್ಶನದಲ್ಲಿ ಬೆಳೆದ ನಾವು ಮತ್ತೆ ಜೆಡಿಎಸ್‌ಗೆ ಸೇರಿರುವುದಾಗಿ ತಿಳಿಸಿದರು. ಜೆಡಿಎಸ್ ಅಭ್ಯರ್ಥಿಯಾಗಿರುವ ಪಿಳ್ಳಮುನಿಶಾಮಪ್ಪರವರ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.