ಬೆಂಗಳೂರು ಗ್ರಾಮಾಂತರ

ಶಿವಕುಮಾರ್ ತಾಲೂಕಿನ ಚಿತ್ರಣ ಬದಲಿಸಿದ್ದಾರೆ

Published On :

ಕ.ಪ್ರ.ವಾರ್ತೆ    ಕನಕಪುರ    ಮೇ 2
ಕನಕಪುರ ತಾಪಂ ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಶಾಸಕ ಡಿ.ಕೆ.ಶಿವಕುಮಾರ್ ಪರವಾಗಿ ತುಂಗಣಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಮುಖಂಡರಾದ ರಂಗಸ್ವಾಮಿ, ಸವಿತಾ ಶಿವರಾಜು, ಮಂಗಳ, ಸಾಕಮ್ಮ, ಚಿಕ್ಕರಸಮ್ಮ, ಭಾಗ್ಯಮ್ಮ, ಶಾಂತಮ್ಮ, ಜಯಮ್ಮ, ತೇಜಾವತಿ, ಮಹದೇವಮ್ಮ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಶಾಸಕ ಡಿ.ಕೆ. ಶಿವಕುಮಾರ್ ಐದು ವರ್ಷಗಳ ಅಲ್ಪಾವಧಿಯಲ್ಲಿಯೇ ತಾಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದಾರೆ. ರಸ್ತೆ ಅಗಲೀಕರಣ, ಬತ್ತಿ ಹೋಗಿದ್ದ ಕೆರೆಗಳಿಗೆ ನೀರು ಪೂರಣ, ಪರಿಶುದ್ಧ ಕುಡಿಯುವ ನೀರಿನ ವಿತರಣೆ, ಸಾವಿರಾರು ಮನೆಗಳ ನೀಡಿಕೆ, ಹತ್ತಾರು ಸಾವಿರ ಜನರಿಗೆ ನಿವೇಶನಗಳು, ರಸ್ತೆ ಅಗಲೀಕರಣ, ಕನಕನಗರ ನಿರ್ಮಾಣ ಮೊದಲಾದವುಗಳಿಂದ ತಾಲೂಕಿನ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಅವರ ಸಮರ್ಥ ನಾಯಕತ್ವ ತಾಲೂಕಿಗೆ ಅಗತ್ಯವಿದ್ದು ಜನರೆಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.