ಬೆಂಗಳೂರು ಗ್ರಾಮಾಂತರ

ಮತದಾರರಿಗೆ ಆಮಿಷಗಳ ಹೊಳೆ

Published On :

ಚನ್ನಪಟ್ಟಣ: ಚುನಾವಣೆಯ ಮುನ್ನಾದಿನವಾದ ಶನಿವಾರ ರಾತ್ರಿ ಮತದಾರರಿಗೆ ಆಮಿಷಗಳ ಹೊಳೆಯೇ ಹರಿದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಮತದಾರರಿಗೆ ಹಣ ಹಂಚಿಕೆ ಮಾಡಿದ್ದು ಕಂಡು ಬಂದಿತು. ಇತ್ತ ರಾತ್ರಿ ಪೂರಾ ಕಣ್ಗಾವಲಿರಿಸಿದ್ದ ಚುನಾವಣಾಧಿಕಾರಿಗಳ ತಂಡ ಕೆಲವೆಡೆ ದಾಳಿ ನಡೆಸಿ ಮತದಾರರಿಗೆ ಹಂಚಿಕೆ ಮಾಡಲು ಸಾಗಿಸುತ್ತಿದ್ದ ಹಣವನ್ನು ವಶಪಡಿಸಿ ಕೊಂಡ ಘಟನೆ ಸಹ ನಡೆಯಿತು.
ಪಟ್ಟಣದ ಎಲೇಕೇರಿ, ಅಪ್ಪರ್‌ಡೇರಾ, ತಾಲೂಕಿನ ಲಾಳಾಘಟ್ಟ, ಅವ್ವೇರಹಳ್ಳಿ ಗ್ರಾಮಗಳಲ್ಲಿ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಪ್ರತ್ಯೇಕವಾಗಿ ದಾಳಿ ನಡೆಸಿ  ಹಣ ವಶ ಪಡಿಸಿ ಕೊಂಡಿದ್ದಾರೆ. ಎಲೇಕೇರಿ ಸಮೀಪ ರಾತ್ರಿ 12ರ ಸುಮಾರಿನಲ್ಲಿ ದಾಳಿ ನಡೆಸಿದ ಪೊಲೀಸರು 1.94 ಲಕ್ಷ ರು. ಹಣವನ್ನು ವಶಪಡಿಸಿ ಕೊಂಡಿದ್ದು, ಅಪ್ಪರ್ ಡೇರಾಬಳಿ ಭಾನುವಾರ ಬೆಳಿಗ್ಗೆ 5ಗಂಟೆಯ ಸುಮಾರಿನಲ್ಲಿ ದಾಳಿ ನಡೆಸಿ 1.97 ಲಕ್ಷ ರು. ಹಣವನ್ನು ವಶಪಡಿಸಿ ಕೊಂಡಿದ್ದಾರೆ.ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿ ದ್ವಿಚಕ್ರವಾಹನದಲ್ಲಿ ಹಣ  ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿರೂಪಾಕ್ಷಿ ಪುರ ಎಂಸಿಸಿ ತಂಡ ರಾಜು ಎಂಬುರನ್ನು ಬಂಧಿಸಿ ಹೀರೋಹೋಂಡಾ ದ್ವಿಚಕ್ರವಾಹನ ಮತ್ತು 89 ಸಾವಿರ ರು. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಾಲೂಕಿನ ಲಾಳಾಘಟ್ಟ ಗ್ರಾಮದಲ್ಲಿ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ವೆಂಕಟೇಶ್ ಶ್ರೀಕಂಠಯ್ಯ ಮತ್ತ ಸ್ವಾಮಿ ಎಂಬುವರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ರಾತ್ರಿ ಪೂರಾ ಪೊಲೀಸ್ ಅಧಿಕಾರಿಗಳು, ಚುನಾವಣಾ ಜಾಗೃತದಳ ಮತ್ತು ಇತರ ಅಧಿಕಾರಿಗಳ ತಂಡ ತಾಲೂಕಿನಾದ್ಯಂತ ಗಸ್ತು ತಿರುಗುತ್ತಿದ್ದು ಕಂಡು ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.