ಬೆಂಗಳೂರು ಗ್ರಾಮಾಂತರ

ಕಾಂತ್ರಿಯೋಗಿ ಸಾಮಾಜಿಕ ಪ್ರಜ್ಞೆ ಅನಂತ ಪ್ರಸ್ತುತ

Published On :

ಕ.ಪ್ರ.ವಾರ್ತೆ  ಮೈಸೂರು  ಮೇ 11
ಕಾಂತ್ರಿಯೋಗಿ ಬಸವಣ್ಣ ಅವರ ಧಾರ್ಮಿಕ ಹಾಗೂ ಸಾಮಾಜಿಕ ಪ್ರಜ್ಞೆ ಎಂದೆಂದಿಗೂ ಪ್ರಸ್ತುತ ಎಂದು ಸಾಹಿತಿ ಡಾ. ಸಿಪಿಕೆ ಹೇಳಿದರು.
ಮೈಸೂರು ಆರ್ಟ್ ಗ್ಯಾಲರಿ ವತಿಯಿಂದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಬಸವಣ್ಣನವರ ರೂಪಚಿತ್ರ ಲೋಕಾರ್ಪಣೆ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟನೆಯಲ್ಲಿ ಅವರು ಶನಿವಾರ ಮಾತನಾಡಿದರು. ಬಸವಣ್ಣ ವೃತ್ತಿಯಿಂದ ಮಂತ್ರಿಯಾಗಿದ್ದರೂ ವ್ಯಕ್ತಿತ್ವದಲ್ಲಿ ಸಂತ. ಅಂತಹ ಸರಳತೆಯುಳ್ಳ ಶರಣನನ್ನು ಕಿರೀಟಧಾರಿಯಾಗಿ ಹಾಗೂ ಅಶ್ವಾರೋಹಿಯಾಗಿ ವೈಭವೀಕರಿಸುವುದು ಅವರಿಗೆ ಮಾಡುವ ಅಪಚಾರ. ಸಾಹಿತ್ಯಕ್ಕೂ ಚಿತ್ರಕಲೆಗೂ ನಿಕಟ ನಂಟಿದೆ ಎಂದ ಅವರು, ಕಲಾವಿದ ಶಿವಲಿಂಗಪ್ಪ ಅವರು ಕಿರೀಟವಿಲ್ಲದ ಬಸವಣ್ಣನನ್ನು ಚಿತ್ರಿಸಿ ತಮ್ಮ ಸಾಧನೆಗೆ ಕಿರೀಟ ಇಟ್ಟುಕೊಂಡಿದ್ದಾರೆ ಎಂದು ಅವರು ಪ್ರಶಂಸಿಸಿದರು.   
ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ. ಎಸ್.ಸಿ. ಪಾಟೀಲ್ ಬಸವಣ್ಣನವರ ಚಿತ್ರಕಲಾ ಪ್ರದರ್ಶನ ಹಾಗೂ ಡಾ.ಸಿಪಿಕೆ ರೂಪಚಿತ್ರವನ್ನು ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಕಸಾಪಅಧ್ಯಕ್ಷ ಎಂ. ಚಂದ್ರಶೇಖರ್, ಪಿ. ಗುರುಸ್ವಾಮಿ, ಸಂಸ್ಥೆ ಅಧ್ಯಕ್ಷ ಎಲ್. ಶಿವಲಿಂಗಪ್ಪ, ಕಲಾವಿದ ಬಸವಣ್ಣಚಾರ್, ಗೊ.ರು. ಪರಮೇಶ್ವರಪ್ಪ ಮತ್ತಿತರರಿದ್ದರು. ಕಲಾವಿದ ಎಲ್. ಶಿವಲಿಂಗಪ್ಪ ರಚಿಸಿರುವ ಸುಮಾರು 30 ಕ್ಕೂ ಅಧಿಕ ಚಿತ್ರ ಕಲಾಕೃತಿಗಳನ್ನು ಪ್ರದರ್ಶಿಸಿದ್ದು, ಮೇ 14 ರವರೆಗೆ ವೀಕ್ಷಿಸಬಹುದಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.