'ಸಾಹಿತ್ಯ, ಸಂಗೀತ, ಕಲೆ ಜನಸಾಮಾನ್ಯರಿಗೆ ತಲುಪಲಿ'
ಚನ್ನಪಟ್ಟಣ: ಸಾಹಿತ್ಯ, ಸಂಗೀತ, ಕಲೆ ಜನಸಾಮಾನ್ಯರಿಗೆ ತಲುಪವಂತಾಗಬೇಕು ಎಂದು ಪ್ರಗತಿಪರ ಚಿಂತಕ, ಕವಿ ಸುಬ್ಬು ಹೊಲೆಯಾರ್ ಹೇಳಿದರು.
ಬುದ್ಧ-ಬಸವ-ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಗಾನಗಂಗಾ ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ನಗರದ ಬಾಲು ಪಬ್ಲಿಕ್ ಶಾಲೆಯಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಲಯನ್ ವೆಂಕಟಸುಬ್ಬಯ್ಯಚೆಟ್ಟಿ ಹಾಗೂ ಡಾ.ಕೆ.ಪಿ.ಶೈಲಜಾ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಸಾಹಿತಿ, ಅಧ್ಯಾಪಕ ಸಿಸಿರಾರವರ ತಾಯಿನಾಡು ಕವನಸಂಕಲನ ಮತ್ತು ಸೃಜನ ಶೀಲ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.ಬುದ್ಧ-ಬಸವ-ಗಾಂಧಿ ಅಂಬೇಡ್ಕರ್ ಅವರ ಕಾಯಕ ಪ್ರಾಮಾಣಿಕತೆ, ಆದರ್ಶದ ಬದುಕಿನ ಕೆಲ ಅಂಶಗಳ ಬಗ್ಗೆ ಬೆಳಕು ಚೆಲ್ಲಿ ಅವರ ವಿಚಾರಧಾರೆ ಆದರ್ಶ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತ್ಯ, ಕಲೆ ಪಂಡಿತರಿಗಾಗಿ ಅಲ್ಲ, ಜನಸಾಮಾನ್ಯರಿಗೆ ತಲುಪವಂತಾಗಬೇಕು ಎಂದು ಪುನರುಚ್ಚರಿಸಿದ ಅವರು ಇಂದು ಎಷ್ಟೋ ಕೃತಿಗಳು ಹೊರಬರುತ್ತಿದ್ದರೂ ಅವು ಜನಸಾಮಾನ್ಯರನ್ನು ಮುಟ್ಟುವಲ್ಲಿ ವಿಫಲವಾಗುತ್ತಿವೆ. ಜನಸಾಮಾನ್ಯರ ನೋವು-ನಲಿವು ಕೃತಿಗಳಲ್ಲಿ ಪ್ರಕಟಗೊಂಡು ಸಮಾಜದ ಪರಿವರ್ತನೆಗೆ ಮುಂದಾಗುವಂತಾಗಬೇಕು ಎಂದು ಹೇಳಿ ಸಿಸಿರಾರವರ ಎರಡು ಕೃತಿಗಳು ಅಮೂಲ್ಯವಾದ ಕೃತಿಗಳಾಗಿದ್ದು ಜನತೆ ಅವುಗಳನ್ನು ಖರೀದಿಸಿ ಓದುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಸಿಸಿರಾ(ಎಸ್.ರಾಮಲಿಂಗೇಶ್ವರ)ಅವರ ವ್ಯಕ್ತಿತ್ವದ ಬಗ್ಗೆ ಪ್ರಶಂಸಾ ನುಡಿಗಳನ್ನು ಆಡಿ ಕನ್ನಡ ನಾಡಿನ ಕವಿಯಾಗಿ ಕಥೆಗಾರರಾಗಿ ವಿಮರ್ಶಕರಾಗಿ ಗಾಯಕರಾಗಿ ಸಮಾಜ ಮತ್ತು ಚಿಂತಕರಾಗಿ ಸಾಂಸ್ಕೃತಿಕ ಸಂಘಟಕರಾಗಿ ಯುವ ಬರಹಗಾರರ ಹಲವು ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುವುದು ಕಲಾವಿದರು ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವುದು ಕನ್ನಡ ಸೇವೆ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅವರದು ಅನಿಕೇತನದ ಮನಸ್ಸು ಎಂದು ಶ್ಲಾಘಿಸಿ ಸಿಸಿರಾರವರಿಂದ ಮುಂದೆ ಉತ್ತಮ ಕೃತಿಗಳು ಹೊರ ಬರಲಿ, ಸಮಾಜದಲ್ಲಿ ಮತ್ತುಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

