ಪಿರಮಿಡ್ ವ್ಯಾಲಿಯಲ್ಲಿ 4 ದಿನಗಳ ಬುದ್ಧ ಪೂರ್ಣಿಮಾ
ಕನಕಪುರ: ತಾಲೂಕು ಕೆಬ್ಬೆದೊಡ್ಡಿ ಗ್ರಾಮದಲ್ಲಿರುವ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಆವರಣದಲ್ಲಿ ದಶಮಾನೋತ್ಸವದ ಅಂಗವಾಗಿ ಮೇ 23ರಿಂದ 26ರವರೆಗೆ ನಾಲ್ಕು ದಿನಗಳ ಬುದ್ಧ ಪೂರ್ಣಿಮಾ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಪ್ರತಿ ದಿನ ಪ್ರಾತಃಕಾಲ 5 ಗಂಟೆಗೆ ಬ್ರರ್ಹರ್ಷಿ ಸುಭಾಷ್ ಪತ್ರೀಜಿ ನೇತೃತ್ವದಲ್ಲಿ ಸಂಗೀತ ಧ್ಯಾನ, ಮಧ್ಯಾಹ್ನ 11 ಗಂಟೆಗೆ ಹಾಗೂ ಸಂಜೆ 3 ಗಂಟೆಗೆ ಆಧ್ಯಾತ್ಮಿಕ ತಜ್ಞರಿಂದ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಆಧ್ಯಾತ್ಮಿಕ ಉಪನ್ಯಾಸಗಳು, ಸಂಜೆ 6 ಗಂಟೆಗೆ ಹೆಸರಾಂತ ಚಿಂತಕರಿಂದ ಆಧ್ಯಾತ್ಮಿಕ ಸಂದೇಶಗಳು, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬುದ್ಧಪೂರ್ಣಿಮೆಯಂದು ರಾತ್ರಿ 9-30 ರಿಂದ 12-30 ರವರೆಗೆ ಅಖಂಡ ಹುಣ್ಣಿಮೆ ಧ್ಯಾನ ಕಾರ್ಯಕ್ರಮಗಳು ನಡೆಯುತ್ತವೆ ಎಂದು ವ್ಯವಸ್ಥಾಪಕ ಕೆಬ್ಬೆದೊಡ್ಡಿ ನಾಗರಾಜ್ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ: ಮೇ 23 ರಂದು ಸಂಜೆ 6 ಗಂಟೆಗೆ ಪಿರಮಿಡ್ ಚಳವಳಿ ಸಂಸ್ಥಾಪಕ ಬ್ರಹ್ಮರ್ಷಿ ಸುಭಾಷ್ಪತ್ರೀಜಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜೈನ್ ವಿವಿ ಉಪಕುಲಪತಿ ಡಾ.ಚೆನ್ರಾಜ್ರಾಯ್ ಚಂದ್ಜೈನ್, ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ನವದೆಹಲಿಯ ಮಹಾಯೋಗಿ ಪಿಲೋಟ್ಬಾಬಾಜಿ ಪಾಲ್ಗೊಂಡು ಆಧ್ಯಾತ್ಮಿಕ ಸಂದೇಶಗಳನ್ನು ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಪವನ್ ಮತ್ತು ಮಾನಸಾ ತಂಡದವರಿಂದ ಭರತನಾಟ್ಯ, ಡಾ.ಸುಪರ್ಣಾವೆಂಕಟೇಶ್ ತಂಡದವರಿಂದ ಕಥಕ್ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 24 ರಂದು ಸಂಜೆ 6 ಗಂಟೆಗೆ ಆಧ್ಯಾತ್ಮಿಕ ಸಂದೇಶಗಳು ಭಾರತೀಯ ಪರ್ಯಾಯ ಔಷಧ ಮಂಡಳಿ ನಿರ್ದೇಶಕ ಡಾ.ಎಸ್.ಕೆ.ಅಗರ್ವಾಲ್ ಹಾಗೂ ಶ್ವಾಸಗುರು ವಚನಾನಂದಸ್ವಾಮೀಜಿಯವರಿಂದ.
ಮೇ 25ರಂದು ಸಂಜೆ 6 ಗಂಟೆಗೆ ಆಧ್ಯಾತ್ಮಿಕ ಸಂದೇಶ ಸಿಬಿಐ ಮಾಜಿ ನಿರ್ದೇಶಕ ಪದ್ಮಶ್ರೀ ಡಾ.ಡಿ.ಆರ್. ಕಾರ್ತಿಕೇಯನ್, ಸಾಹಿತಿ ಸಾಯಿಬಿಂದು ಶ್ರೀನಿವಾಸ್ರವರಿಂದ ನಡೆಯಲಿದೆ. ಭುವನೇಶ್ವರದ ತಂಡದಿಂದ ಒಡೆಸ್ಸಿ ನರ್ತನ ಕಾರ್ಯಕ್ರಮ ನಡೆಯುತ್ತದೆ. ಮೇ 26 ರಂದು ಸಂಜೆ 6 ಗಂಟೆಗೆ ಆಧ್ಯಾತ್ಮಿಕ ಸಂದೇಶ ಬೇಲಿಮಠದ ಶಿವರುದ್ರಸ್ವಾಮೀಜಿ ಹಾಗೂ ಬೆಂವಿವಿ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ ರವರು ನೀಡಲಿದ್ದಾರೆ.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹುಲಿಬೆಲೆಯ ಮಹೇಶ್ತಂಡದವರಿಂದ ಪಟದ ಕುಣಿತ, ಅನಜವಾಡಿ ದೊಡ್ಡಿಯ ಹನುಮಂತ ನಾಯ್ಕ ತಂಡದವರಿಂದ ಪೂಜಾಕುಣಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ನಿರ್ದೇಶಕ ಪಿಎಸ್ಆರ್ಕೆ ಪ್ರಸಾದ್ ವಿವರಗಳನ್ನು ನೀಡಿದ್ದಾರೆ.
ಕರಗ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಕನಕಪುರ, ಮೇ 21: ಕನಕಪುರದ ವಹ್ನಿಕುಲ ತಿಗಳರ ಸಮಾಜದ ವತಿಯಿಂದ ನಡೆಯುವ ಶ್ರೀ ಧರ್ಮರಾಯಸ್ವಾಮಿ,ದ್ರೌಪತಮ್ಮನವರ ಕರಗ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಮೇ 25 ರಂದು ಬುದ್ಧಪೌರ್ಣಮಿಯಂದು ನಡೆಯಲಿರುವ ಕರಗ ಶಕ್ತ್ಯುತ್ಸವದ ಅಂಗವಾಗಿ ಪಟ್ಟಣದ ತಿಗಳ ಸಮುದಾಯದ ಮನೆಗಳಲ್ಲಿ ಶ್ರೀ ಧರ್ಮರಾಯ, ದ್ರೌಪತಮ್ಮ, ಶ್ರೀಕೃಷ್ಣ, ಭೀಮ, ಅರ್ಜುನ, ನಕುಲ, ಸಹದೇವರ ಉತ್ಸವ ಮೂರ್ತಿಗಳ ಪೂಜೆ ನಡೆಯಿತು. ಕರಗ ಮಹೋತ್ಸವದ ಅಂಗವಾಗಿ ಇಲ್ಲಿನ ಕುರೂಪೇಟೆಯ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಧ್ವಜಸ್ಥಂಭ ಸ್ಥಾಪನೆ, ಧ್ವಜಾರೋಹಣ ಕಾರ್ಯಕ್ರಮಗಳು ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

