ಬೆಂಗಳೂರು ಗ್ರಾಮಾಂತರ

ಕಲಬೆರಕೆ ಗೊಬ್ಬರ: ಕ್ರಮಕ್ಕೆ ರೈತರ ಆಗ್ರಹ

Published On :

ಕನ್ನಡಪ್ರಭ ವಾರ್ತೆ ಹಾಸನ ಮೇ 21
ಉಪ್ಪು ಮಿಶ್ರಿತ ಕಲಬೆರಕೆ ಪ್ಯೊಟ್ಯಾಶ್ ಗೊಬ್ಬರ ವಿತರಿಸಿದ ಸಹಕಾರಿ ಸಂಘದ ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಗೊಬ್ಬರ ಖರೀದಿಸಿದ ರೈತರಿಗೆ ಪರಿಹಾರ ನೀಡುವಂತೆ ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಬಿ. ಭಾಸ್ಕರ್ ಒತ್ತಾಯಿಸಿದ್ದಾರೆ.  ಸಕಲೇಶಪುರ ತಾ. ಹಾನುಬಾಳು ಹೋಬಳಿ ಪಶ್ಚಿಮ ಘಟ್ಟದ ಅಂಚಿನಲ್ಲಿದ್ದು, ಸತತ ಮಳೆಯಿಂದ ಕೂಡಿದ ಪ್ರದೇಶವಾಗಿದೆ.
 ಪ್ರಾಕೃತಿಕ ಸಂಪನ್ಮೂಲ ಎಷ್ಟೆ ಇದ್ದರೂ ಕಾಡಾನೆ ಹಾವಳಿ, ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಮೂರು ಪಟ್ಟು ಬೆಲೆ ಹೆಚ್ಚು ಆಗಿದೆ. ಅದರಲ್ಲೂ ಕಲಬೆರಕೆ ಗೊಬ್ಬರದಿಂದ ರೈತರು ತೀವ್ರ ಆಘಾತ ಅನುಭವಿಸುತ್ತಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಹೆಚ್ಚಿನ ರೈತರು ಕಲಬೆರಕೆ ಪ್ಯೊಟ್ಯಾಶ್ ಗೊಬ್ಬರ ಬಳಸಿದ್ದು, ಭೂಮಿಯ ಫಲವತ್ತತೆ ಹಾಗೂ ಗಿಡಗಳು ನಶಿಸಿ ಹೋಗುತ್ತಿವೆ ಎಂದರು.   ಇಂತಹ ಗೊಬ್ಬರ ವಿತರಿಸಿರುವ ಸಹಕಾರಿ ಸಂಸ್ಥೆ, ಖಾಸಗಿ ಮಾಲೀಕರ ಗೋಡನ್ ಪರಿಶೀಲಿಸಿ ಕಲಬೆರಕೆ ಗೊಬ್ಬರ ಮುಟ್ಟುಗೋಲು ಹಾಕಿಕೊಳ್ಳಬೇಕು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.