ನೀರಿನ ವಿಚಾರದಲ್ಲಿ ಸದಾ ಎಚ್ಚರವಹಿಸಿ
ಕ.ಪ್ರ.ವಾರ್ತೆಮಾಗಡಿ ಮೇ 22
ಕುಡಿಯುವ ನೀರಿನ ವಿಚಾರದಲ್ಲಿ ಎಂಜಿನಿಯರ್‌ಗಳು ಸದಾ ಜಾಗೃತರಾಗಿರಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಎಚ್ಚರಿಸಿದರು.
ಅವರು ಮಾಗಡಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಪಂಚಾಯ್ತಿ ಪಿಡಿಓಗಳ ಸಭೆ ಕರೆದು ಮಾತನಾಡಿ, ಉತ್ತಮ ಕೆಲಸ ಮಾಡದ ಅಧಿಕಾರಿಗಳ ಹಾಗೂ ಎಂಜಿನಿಯರ್‌ಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.
ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವೆಡೆ ಕೊಳವೆ ಬಾವಿ ಕೊರಸಬೇಕು. ಕೂಡಲೆ ಮೋಟರ್‌ಪಂಪ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ ಎಂದು ದೂರುಗಳೇನಾದರೂ ಬಂದರೆ ನೇರವಾಗಿ ನಿಮ್ಮನ್ನೇ ಜವಾಬ್ದಾರಿಯಾನ್ನಾಗಿಸುತ್ತೇನೆ. ಈಗಾಗಲೇ ಕೊರೆದಿರುವ ಕೊಳವೆ ಬಾವಿಯಲ್ಲಿ ನೀರಿದ್ದರೆ ಅವುಗಳಿಗೆ ಮೋಟರ್ ಪಂಪ್ ಹಾಗೂ ಕೇಬಲ್ ಖರೀದಿಸಲು ಸಂಬಂಧಪಟ್ಟ ಎಂಜಿನಿಯರ್‌ಗಳು ಯೋಜನೆ ಸಿದ್ಧಪಡಿಸಬೇಕು. ಕಳಪೆ ಮೋಟರ್ ಪಂಪ್ ಖರೀದಿ ಮಾಡಿ, ಆಗಾಗ್ಗೆ ದುರಸ್ಥಿ ಕಾರ್ಯವಿದೆ ಎಂದು ಸಬೂಬು ಹೇಳಿದರೆ ನಿರ್ದಾಕ್ಷಣ್ಯವಾಗಿ ಅಂತಹ ಪಿಡಿಓಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ ಕೊರಸಲಾಗಿರುವ ಕೊಳವೆ ಬಾವಿಗಳಿಗೆ ಕೂಡಲೆ ಗುಣಮಟ್ಟದ ಮೋಟರ್, ಪಂಪ್ ಮತ್ತು ಕೇಬಲ್ ಅಳವಡಿಸಲು ಅಗತ್ಯ ಕ್ರಮಮ ವಹಿಸಬೇಕು. ಕಳಪೆ ಮೋಟರ್ ಮತ್ತು ಪಂಪ್ ಕೇಬಲ್ ಖರೀದಿ ಮಾಡಿದ್ದು ಕಂಡು ಬಂದರೆ ಅಂತಹ ಕೊಳವೆ ಬಾವಿ ಮೋಟರ್‌ಗಳನ್ನು ತೆಗೆಸುವ ಮೂಲಕ ಪರಿಶೀಲನೆ ನಡೆಸಲಾಗುವುದು. ಅಂತಹ ವಿರುದ್ಧ ಸಹ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅಧಿಕಾರಿಗಳು ಕಟಾಚಾರಕ್ಕೆ ನೀರಿನ ಮಾಪನ ಗುರುತುಪಡಿಸುತ್ತಿದ್ದು, ಖಾಸಗಿಯವರಿಂದ ನೀರಿನ ಮಾಪನ ಪರೀಕ್ಷಕರಿಂದ ಗುರುತು ಮಾಡಿಸಿ ಕೊಳವೆ ಬಾವಿ ಕೊರೆಸುವಂತೆ ಸಲಹೆ ನೀಡಿದರು.
ಕಡಿಮೆ ದರದಲ್ಲಿ ಟೆಂಡರ್ ಹಾಕಿಕೊಳ್ಳುವ ಮೂಲಕ ಗುತ್ತಿಗೆದಾರರು ಕಳಪೆ ಕಾಮಗಾರಿ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹೆಸರು ನಮೂದಿಸಿ: ಜಿಲ್ಲಾ ಪಂಚಾಯ್ತಿ ವತಿಯಿಂದ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಕಟ್ಟಡದ ನಾಮಫಲಕದಲ್ಲಿ ಶಾಸಕರ ಹಾಗೂ ತಾ.ಪಂ. ಅಧ್ಯಕ್ಷ ಹಾಗೂ ಸದಸ್ಯರ ಹೆಸರನ್ನು ನಮೂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಆಶ್ರಯ ಪಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಲಾಟರಿ ಮೂಲಕ ಆಶ್ರಯ ಪಲಾನುಭವಿಗಳನ್ನು ಆಯ್ಕೆ ಮಾಡಿದರೆ ಅರ್ಹರಿಗೆ ಸೌಲತ್ತು ಸಿಗುತ್ತದೆ ಎಂದರು. ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಅಗತ್ಯ ವಿದ್ಯುತ್ ಸಂಪರ್ಕಕ ಕಲ್ಪಿಸುವಂತೆ ಬೆಸ್ಕಾಂ ಎಇಇ ಪ್ರಭಾಕರ್ ಅವರಿಗೆ ಶಾಸಕರು ಸೂಚಿಸಿದರು. ಜಿ.ಪಂ. ಅಧ್ಯಕ್ಷ ಮುದ್ದುರಾಜ ಯಾದವ್, ಸದಸ್ಯೆ ಹಂಸಕುಮಾರಿ, ವಿಜಯಕುಮಾರ್, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ಉಪಾಧ್ಯಕ್ಷೆ ಅನಿಸಾಖಾನಂ, ಜಿ.ಕೃಷ್ಣ, ಅರುಂಧತಿ ಚಿಕ್ಕಣ್ಣ, ಮಹದೇವ್, ತಾ.ಪಂ.ಇಓ ಅಕ್ಕೋಜಿ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

