'ಶಿಕ್ಷಣ ಸಂಸ್ಥೆ ವ್ಯಾಪಾರಿ ಕೇಂದ್ರವಲ್ಲ'
ಆನೇಕಲ್ಲು: ಶಿಕ್ಷಣ ಸಂಸ್ಥೆಗಳು ಆರೋಗ್ಯವಂತ ಸಮಾಜ ಕಟ್ಟುವ ಹಾಗೂ ದೇಶ ಕಾಯುವ ಯೋಧರನ್ನು ತಯಾರು ಮಾಡುವ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ವಿಪರ್ಯಾಸವೆಂದರೆ, ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರವಾಗಿ ಪ್ರತಿಯೊಂದರಲ್ಲೂ ಹಣ ಮಾಡುವ ದಂಧೆಯನ್ನಾಗಿ ರೂಢಿಸಿಕೊಂಡಿರುವುದು ನಾಡಿನ ದೌರ್ಭಾಗ್ಯ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಅಧ್ಯಕ್ಷ ಎಂ.ಎಸ್. ದಿನೇಶ್ ವಿಷಾದ ವ್ಯಕ್ತಪಡಿಸಿದರು. ಶಿಕ್ಷಣ ಸಾಮಗ್ರಿ ಮಾರಾಟ ಮಾಡಲು ಪುರಸಭೆಯಿಂದ ಲೈಸೆನ್ಸ್ ಪಡೆದ ಅಂಗಡಿಗಳು ವರ್ಷ ಪೂರ್ತಿ ಸೇವೆ ನೀಡುತ್ತಿದ್ದರೆ ಬಾಡಿಗೆ, ಬಂಡವಾಳ, ಆಯ್ಕೆಗೆ ಅವಕಾಶವಿಲ್ಲದೇ ಅಧಿಕ ಬೆಲೆ ನೀಡಿ ಅನಿವಾರ್ಯವಾಗಿ ಕೊಳ್ಳುವಂತಹ ಪರಿಸ್ಥಿತಿ ತಪ್ಪಬೇಕೆಂದು ತಿಳಿಸಿದರು.
ಪದಾಧಿಕಾರಿಗಳು: ಎಂ.ಎಸ್. ದಿನೇಶ್-ಅಧ್ಯಕ್ಷರು, ಸಿ.ಎನ್. ರವೀಂದ್ರನಾಥ್-ಉಪಾಧ್ಯಕ್ಷರು, ಎಂ. ರಾಮಕೃಷ್ಣ- ಪ್ರ.ಕಾರ್ಯದರ್ಶಿ. ಕೆ. ಚಂದ್ರಶೇಖರ್ ಕಾರ್ಯದರ್ಶಿ, ನವೀನ್ಚಂದ್ರಶೆಟ್ಟಿ-ಉಪ ಕಾರ್ಯದರ್ಶಿ, ಪ್ರಸಾದ್-ಉಪ ಕಾರ್ಯದರ್ಶಿ, ಮಹೇಶ್ ಊಗಿನಹಳ್ರಿ-ಉಪ ಕಾರ್ಯದರ್ಶಿ, ರವಿ ಎಸ್. ರೆಡ್ಡಿ-ಖಜಾಂಚಿ, ವೆಂಕಟೇಶ ಮೂರ್ತಿ-ಸಾರ್ವಜನಿಕ ಸಂಪರ್ಕಾಧಿಕಾರಿ, ಸದಸ್ಯರಾಗಿ ಡಿ.ಸಿ. ನರಸಿಂಹಮೂರ್ತಿ, ಎನ್. ಚಂದ್ರಶೇಖರ್, ನೇತ್ರಾವತಿ ಅನರೇಷ್, ಸಿ. ಮೂರ್ತಿ, ಮಹಮ್ಮದ್ ಇಮ್ತಿಯಾಜ್ ಅಲಿ, ರಾಜಾರಾಂ ಅವರನ್ನು ನೇಮಕ ಮಾಡಲಾಗಿದೆ.
ಸಬ್ಸಿಡಿ ಯೋಜನೆ:ಅರ್ಜಿ ಆಹ್ವಾನ
ರಾಮನಗರ: ಇಲ್ಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಿಲ್ಲೆಯ ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಮುಸ್ಲಿಂ, ಜೈನ್, ಬೌದ್ಧರು, ಸಿಖ್ಖರು ಹಾಗೂ ಪಾರ್ಸಿ ಜನರ ಸ್ವಯಂ ಉದ್ಯೋಗಕ್ಕಾಗಿ 2013-14ರ ಸಾಲಿಗೆ ವಿವಿಧ ಯೋಜನೆಗಳಾದ ಸ್ವಾವಲಂಬನ ಸಬ್ಸಿಡಿ ಮತ್ತು ಮಾರ್ಜಿನ್ ಹಣ ಸಾಲ ಯೋಜನೆ, ಅರಿವು ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಮೈಕ್ರೋಸಾಲ ಯೋಜನೆಗಳು, ಅಲ್ಪಸಂಖ್ಯಾತ ಕ್ರಿಶ್ಚಿಯನ್ರಿಗೆ ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ, ಮನೆ ಕಟ್ಟಡ ಬಡ್ಡಿ ಸಹಾಯ ಧನ ಯೋಜನೆಗೆ ಅರ್ಹ ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಯೂನಿಯನ್ ಬ್ಯಾಂಕ್ ರಸ್ತೆ, ನಂ 1674, ಮಹದೇವಯ್ಯ ಬಿಲ್ಡಿಂಗ್, 1ನೇ ಮಹಡಿ, ಐಜೂರು ರಾಮನಗರ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇಲ್ಕಂಡ ವಿಳಾಸಕ್ಕೆ ಜೂನ್ 30ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂಣ080-27271029 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

