ಬೆಂಗಳೂರು ಗ್ರಾಮಾಂತರ

ದೇಶೀಯ ಕ್ರೀಡೆಗಳಿಗೆ ಆದ್ಯತೆ ಇರಲಿ: ಶಿವಣ್ಣ

Published On :

ಕ.ಪ್ರ. ವಾರ್ತೆ ಆನೇಕಲ್ಲು ನ.16
ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.  ನರೇಗ ಯೋಜನೆಯ ಈ ಕಾಮಗಾರಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದ ಕೃಷಿ ಕೂಲಿ ಕಾರ್ಮಿಕರು ಶ್ರಮದಾನದ ಮೂಲಕ ಪೂರ್ಣಗೊಳಿಸಬೇಕೆಂದು ಶಾಸಕ ಬಿ. ಶಿವಣ್ಣ ಮನವಿ ಮಾಡಿದ್ದಾರೆ.
ಅವರು ತಾಲೂಕಿನ ಗಡಿ ಭಾಗ ಸಮಂದೂರು-ಗಾಂಧಿ ನಗರದಲ್ಲಿನ 4 ಎಕರೆ ಪ್ರದೇಶದ ಆಟದ ಮೈದಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಮುಖ್ಯಮಂತ್ರಿಯವರು ಇತ್ತೀಚೆಗೆ ಜಾರಿಗೆ ತಂದ 15 ಕಾರ್ಯಕ್ರಮಗಳಡಿ ಶಾಲಾ ಮೈದಾನ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗುವ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡು ಕ್ರಿಯಾ ಯೋಜನೆ ರೂಪಿಸಿ ಕಳಿಸಿದಲ್ಲಿ ಪೂರ್ಣ ಪ್ರಮಾಣ ವೆಚ್ಚವನ್ನು ಭರಿಸಿ ಅನುದಾನ ನೀಡಲಾಗುವುದು ಎಂದರು. ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ,  ಖೋಖೋ, ಕುಸ್ತಿ, ಕೋಲು ವರೆಸೆ, ಕೋಲಾಟ, ಮಲ್ಲಗಂಭ ಏರುವುದು ಮುಂತಾದ ಕಸರತ್ತಿನ ಕ್ರೀಡೆಗಳಿಂದ ದೇಹದಾರ್ಢ್ಯತೆ ಹೆಚ್ಚಿ ಆರೋಗ್ಯವಂತರಾಗುತ್ತಿದ್ದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಯುವ ಜನತೆಗೆ ಅವಶ್ಯಕತೆ ಇರುವ ಕ್ರೀಡೆಗಳನ್ನು ಮುಂದುವರಿಸಬೇಕೆಂದು ತಿಳಿಸಿದರು. ಗುಡ್ಡನಹಳ್ಳಿ ಗ್ರಾಪಂ ಅಧ್ಯಕ್ಷ ಸೋಮಶೇಖರರೆಡ್ಡಿ ಮಾತನಾಡಿ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಭೂಮಿ, ಗೋಮಾಳ ಮುಂತಾದವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಯ ಉಪಯೋಗಕ್ಕೆ ಮೀಸಲಿಡಲಾಗಿದೆ. ಶಾಲಾ ಕಟ್ಟಡ, ಆಸ್ಪತ್ರೆ, ಬಸ್ ತಂಗುದಾಣ ಹಾಗೂ ನಿಲ್ದಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಸಾಕಷ್ಟು ಭೂಮಿ ಒದಗಿಸಲಾಗುವುದು. ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಣಾ ನಾರಾಯಣಸ್ವಾಮಿ, ಮುಖಂಡರಾದ ವೀರಭದ್ರಾಚಾರಿ, ಶ್ರೀನಿವಾಸ್, ಗವಿರಂಗಯ್ಯ, ಅಧಿಕಾರಿಗಳಾದ ಇಒ ಡಾ. ವೀರಭದ್ರಪ್ಪ, ಇಇ ಪ್ರಸನ್ನ ಕುಮಾರ್, ಸಿಇಒ ಬೆಟ್ಟಸ್ವಾಮಿಗೌಡ ಇದ್ದರು.

ದೊಡ್ಡಬಳ್ಳಾಪುರದ ವಿವಿಧೆಡೆ ಮೊಹರಂ ಸಂಭ್ರಮ
ದೊಡ್ಡಬಳ್ಳಾಪುರ: ಪಟ್ಟಣದ ವಿವಿಧ ಪ್ರದೇಶಗಳು, ತಾಲೂಕಿನ ಹೋಬಳಿ ಕೇಂದ್ರಗಳೂ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಪಟ್ಟಣದ ಮುಕ್ತಾಂಭಿಕಾ ರಸ್ತೆಯ ಮಸೀದಿ, ಚಿಕ್ಕಪೇಟೆ, ಇಸ್ಲಾಂಪುರ, ಕೋಟೆರಸ್ತೆಯ ಮಸೀದಿಗಳಲ್ಲಿ ವಿಶೇಷವಾಗಿ ಮೊಹರಂ ಆಚರಣೆಗೊಂಡಿದೆ. ಅದೇ ರೀತಿ ತಾಲೂಕಿನ ದೊಡ್ಡಬೆಳವಂಗಲ, ತೂಬಗೆರೆ, ಕಾಡನೂರು, ಪುಟ್ಟಯ್ಯನ ಅಗ್ರಹಾರ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಆಚರಣೆ ಸಡಗರದಿಂದ ನಡೆದಿದೆ. ಹಿಂದು-ಮುಸಲ್ಮಾನ ಭಾವೈಕ್ಯತೆ ಬಿಂಬಿಸುವ ಹಬ್ಬವಾಗಿಯೂ ಈ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು. 10 ದಿನಗಳ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಭಾಗದ ಜನರು ವಿವಿಧ ಹೆಸರುಗಳಲ್ಲಿ ಈ ಆಚರಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.