'ಹೊಂಬಾಳಮ್ಮನಪೇಟೆ ಕಲಾವಿದರ ತವರೂರು'
ಮಾಗಡಿ: ಹೊಂಬಾಳಮ್ಮನಪೇಟೆ ಕಲಾವಿದರ ತವರೂರು ಇದ್ದಂತೆ. ಪೌರಾಣಿಕ, ಸಾಮಾಜಿಕವಾಗಿಯೂ ಸಹ ಕಲೆಯನ್ನು ಇಲ್ಲಿನ ಕಲಾವಿದರು ಅನಾವರಣಗೊಳಿಸುವ ಮೂಲಕ ಜನರಲ್ಲಿ ಕಲಾ ಜಾಗೃತಿ ಮೂಡಿಸಿಕೊಂಡು ಬರುತ್ತಿದ್ದಾರೆ ಎಂದು ಯಜಮಾನ್ ರಂಗಯ್ಯ ನುಡಿದರು.
ಅವರು ಹೊಂಬಾಳಮ್ಮನಪೇಟೆಯಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕಲೆ ಕಲಾವಿದರ ಸ್ವತ್ತು, ಕಲೆಯನ್ನು ಯಾರು ಆರಾಧಿಸುತ್ತಾರೋ, ನಂತರದ ದಿನಗಳಲ್ಲಿ ಕಲೆಯೇ ಅವರನ್ನು ಗುರುತಿಸಿ ಗೌರವಿಸುತ್ತದೆ. ಹೊಂಬಾಳಮ್ಮನಪೇಟೆಯಲ್ಲಿ ನಿಜಕ್ಕೂ ಪ್ರತಿಯೊಂದು ಕುಟುಂಬದಲ್ಲೂ ಒಬ್ಬಬ್ಬ ಕಲಾವಿದರಿದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಕಾರಣ ಈ ಊರು ಕಲಾವಿದರ ತವರೂರು ಇದ್ದಂತೆ. ಪ್ರತಿ ವರ್ಷವೂ ರಾಜ್ಯೋತ್ಸವ ಆಚರಣೆ ವೇಳೆ ತಮ್ಮಲ್ಲಿನ ಕಲೆಯನ್ನು ಪ್ರದರ್ಶಸುವುದು ಇಲ್ಲಿನ ಕಲಾವಿದರ ಸಂಪ್ರದಾಯವಾಗಿದ್ದು, ಅರ್ಥಪೂರ್ಣ ರಾಜ್ಯೋತ್ಸವ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಬಡ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ ಎಂದು ತಿಳಿಸಿದರು.
ಹುಲಿವೇಷ, ವೀರಗಾಸೆ, ಪೈಲ್ವಾನ್, ಡಿಗಂಬರಿ ವೇಷ, ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ವೀರಬಾಹು, ಕಾಡಿನ ರಾಜ, ಮಹಿಷಾಸುರ ಮರ್ದಿನಿ ವೇಷ, ಜವಳಿ ಕುಣಿತ, ಕೋಲಾಟ, ಪಟದ ಕುಣಿತ,ಬೊಂಬೆ ಕುಣಿತ, ಸೋಮನ ಕುಣಿತ, ಕೀಲು ಕುದುರೆ, ಕಾಡು ಕುದುರೆ, ರಾಮಾಯಾಣ, ಕುರುಕ್ಷೇತ್ರದ ವಿವಿಧ ಪಾತ್ರಧಾರಿಗಳ ವೇಷಭೂಷಣಗಳ ಮೆರವಣಿಗೆ ಪಟ್ಟಣದ ರಾಜ ಬೀದಿಯಲ್ಲಿ ದಿನಪೂರ್ತಿ ನಡೆಯಿತು. ಆಕರ್ಷಣೀಯ ಕಲಾ ವೇಷಧಾರಿಗಳ ಪ್ರದರ್ಶನ ನಿಜಕ್ಕೂ ಪ್ರೇಕ್ಷಕರ ಮನಸೂರೆಗೊಂಡಿತ್ತು.
ಪದಾಧಿಕಾರಿಗಳ ಆಯ್ಕೆ
ಹೊಸಕೋಟೆ: ತಾಲೂಕು ದಲಿತ ಹಕ್ಕುಗಳ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಎಂ. ವೆಂಕಟರಾಜು(ಅಧ್ಯಕ್ಷ), ಎಂ. ಮುನಿರಾಜು(ಪ್ರಧಾನ ಕಾರ್ಯದರ್ಶಿ), ಎಂ. ಮಂಜುನಾಥ್, ಶಿವರಾಜ್, ಟಿ. ಶಶಿಕುಮಾರ್, ರಾಜೇಶ್(ಉಪಾಧ್ಯಕ್ಷರು), ಮಂಜುನಾಥ್, ವೈ. ಆನಂದ್, ಶ್ರೀನಿವಾಸ್, ನಾಗೇಶ್, ಶಂಕರ್(ಸಹ ಕಾರ್ಯದರ್ಶಿಗಳು), ನರಸಿಂಹಮೂರ್ತಿ(ಖಜಾಂಚಿ), ಪುರುಷೋತ್ತಮ್, ಈಶ್ವರ್, ವಿ. ಮಂಜುನಾಥ್, ಸತೀಶ್, ಬಿ.ವಿ. ಪ್ರಕಾಶ್, ಲಕ್ಷ್ಮಣ್, ಗುರುಮೂರ್ತಿ, ಮುನಿರಾಜು, ಮುರಳಿ, ಮುನಿಕೃಷ್ಣ, ಮಂಜುನಾಥ್(ಸದಸ್ಯರು).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

