ಚಕ್ಕೆರೆ ವಿದ್ಯಾರ್ಥಿನಿ ಅಪಹರಣ ವಿಫಲ ಯತ್ನ
ಚನ್ನಪಟ್ಟಣ: ಪೋಷಕರು ಕರೆಯುತ್ತಿದ್ದಾರೆಂದು ಶಾಲೆಯಿಂದ ವಿದ್ಯಾರ್ಥಿನಿಯನ್ನು ಕರೆತಂದ ಯುವಕ ಆಕೆಯನ್ನು ಅಪಹರಣ ಮಾಡಲು ಯತ್ನಿಸಿ ವಿಫಲಗೊಂಡಿರುವ ಘಟನೆ ತಾಲೂಕಿನ ಚಕ್ಕೆರೆ ಗ್ರಾಮದ ನವೋದಯ ಶಾಲೆಯಲ್ಲಿ ನಡೆದಿದೆ.
ಈ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ 12 ವರ್ಷದ ಬಾಲಕಿಯನ್ನು ಮಂಗಳವಾರ ಸಂಜೆ ನಿಮ್ಮ ಮನೆಯವರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಸುಳ್ಳು ಹೇಳಿ ಹೊರಗೆ ಕರೆತಂದ ಹರಿಸಂದ್ರ ಗ್ರಾಮದ ಪ್ರದೀಪ್ ಆಕೆಯನ್ನು ರಾತ್ರಿಯಿಡೀ ಅಜ್ಞಾತ ಸ್ಥಳದಲ್ಲಿರಿಸಿದ್ದಾನೆ.
ಬುಧವಾರ ಮುಂಜಾನೆ ಬೆಂಗಳೂರಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿರುವಾಗ ಚನ್ನಪಟ್ಟಣ ಬಸ್ ನಿಲ್ದಾಣದ ಬಳಿ ಬಾಲಕಿಯ ಪರಿಚಿತರು ನೋಡಿ ಹತ್ತಿರ ಬಂದಾಗ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅವರ ಸಹಾಯದಿಂದ ನವೋದಯ ವಸತಿ ಶಾಲೆಗೆ ತೆರಳಿದ ಬಾಲಕಿ ಅಲ್ಲಿನ ನಿಲಯ ಪಾಲಕರಿಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ತಕ್ಷಣ ಪೋಷಕರಿಗೆ ಸುದ್ದಿ ಮುಟ್ಟಿಸಿದ ನಿಲಯ ಪಾಲಕರು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಡಿಸುವಲ್ಲಿ ಸಫಲಗೊಂಡಿದ್ದಾರೆ.
ಒಂದೇ ಗ್ರಾಮದವನಾಗಿದ್ದರಿಂದ ನಾನು ಆತನ ಮಾತನ್ನು ನಂಬಿ ಜತೆಯಲ್ಲಿ ಹೋದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಸೂಲಿಬೆಲೆ; ವಿವಿಧೆಡೆ ಕನಕದಾಸ ಜಯಂತಿ
ಸೂಲಿಬೆಲೆ: ಸೂಲಿಬೆಲೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಉಪನ್ಯಾಸಕ ಹನುಮಂತರಾಯಪ್ಪ ಮಾತನಾಡಿದರು. ತಾಪಂ ಮಾಜಿ ಸದಸ್ಯ ಚನ್ನಪ್ಪ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿದರು. ಗ್ರಾಪಂ ಅಧ್ಯಕ್ಷ ಕೆ. ನಾರಾಯಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಅಧ್ಯಕ್ಷರಾದ ಅಸ್ಜಾದ್, ವೆಂಕಟೇಗೌಡ, ಮುಖಂಡ ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.
ಜನತಾ ಕಾಲೊನಿಯಲ್ಲಿ: ಪಟ್ಟಣದ ಜನತಾ ಕಾಲೊನಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಕನಕದಾಸರ ಜಯಂತಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಇದೇ ವೇಳೆ ಶಾಲಾ ಮೈದಾನ ಅಭಿವೃದ್ಧಿ ಕಾಮಗಾರಿಗೆ ಪೂಜೆ ನಡೆಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಬಾಬಾಜಾನ್, ಮೌಲ, ಮುಖ್ಯ ಶಿಕ್ಷಕ ರಾಮನಗೌಡ, ಎಸ್ಡಿಎಂಸಿ ಉಪಾಧ್ಯಕ್ಷೆ ದೀಪಾ ಹಾಜರಿದ್ದರು.
ಟೌನ್ ಶಾಲೆಯಲ್ಲಿ: ಪಟ್ಟಣದ ಟೌನ್ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ವೈ. ನಾಗರಾಜ್ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಕನಕದಾಸರ ಜೀವನ ಚರಿತ್ರೆಯ ಹಲವಾರು ವಿಷಯಗಳನ್ನು ಕಾರ್ಯಕ್ರಮದಲ್ಲಿ ಪ್ರಸುತ್ತಪಡಿಸಿದರು. ಮುಖ್ಯ ಶಿಕ್ಷಕಿ ಓಂಕಾರಮ್ಮ, ಮುಖಂಡರಾದ ಸಿದ್ದರಾಮು, ನಾಗೇದ್ರ, ಶಾಂತಪ್ಪ, ರಮೇಶ್, ಶ್ರೀನಿವಾಸ ಇನ್ನು ಹಲವರು ಹಾಜರಿದ್ದರು.
ಮುತ್ಸಂದ್ರದಲ್ಲಿ: ಹೋಬಳಿಯ ಮುತ್ಸಂದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ನಡೆಸಲಾಯಿತು. ಮುಖ್ಯ ಶಿಕ್ಷಕ ಹನುಮಂತರಾಯಪ್ಪ ಮಾತನಾಡಿದರು. ಮುಖಂಡರಾದ ಮುನಿವೆಂಕಟಪ್ಪ, ಶಿವಣ್ಣ, ರಾಜಣ್ಣ, ಸಾದಿಕ್ ಪಾಷ,ಬಸವರಾಜ್, ವೆಂಕಟರಾಮ್, ಪೀರುಸಾಬ್, ವೆಂಕಟಪ್ಪ, ಆನಂದ್, ಮರುಳಿ, ನಾಗರಾಜ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

