ಕ್ಯಾನ್‌ಫಿನ್ ಹೋಮ್ಸ್ ಶಾಖೆ ಉದ್ಘಾಟನೆ
ದೇವನಹಳ್ಳಿ: ಕ್ಯಾನ್‌ಫಿನ್ ಹೋಮ್ಸ್ ಬ್ಯಾಂಕ್‌ನ 77 ನೇ ಶಾಖೆಯನ್ನು ಇಲ್ಲಿನ ಟಿಪ್ಪುಸುಲ್ತಾನ್ ರಸ್ತೆಯ ರಾಜಾರಾವ್ ಕಟ್ಟಡದಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೀನಿಯರ್ ಡೈರಕ್ಟರ್ ಭಾಸ್ಕರ್ ಬೋಡಪತಿ ನೂತನ ಶಾಯನ್ನು ಉದ್ಘಾಟಿಸಿ ದೇವನಹಳ್ಳಿ ತಾಲೂಕು ಮುಂದಿನ ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆಯಾಗಲಿದ್ದು, ವಸತಿ ಕಟ್ಟಡಗಳು ಮತ್ತು ಸಮುಚ್ಚಯಗಳು ಹೆಚ್ಚಾಗಲಿದೆ. ಬ್ಯಾಂಕಿನಿಂದ ಸಾರ್ವಜನಿಕರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ಸಾಲ ಸೌಲಭ್ಯ ನೀಡುವಂತೆ ತಿಳಿಸಿ, ಈ ಭಾಗದ ಜನರ ಪ್ರಗತಿಯೊಂದಿಗೆ ನಿಮ್ಮ ಬ್ಯಾಂಕ್ ಸಹ ಬೆಳೆಯಲಿ ಎಂದರು. ಬ್ಯಾಂಕಿನ ಮ್ಯಾನೇಜಿಂಗ್ ಡೈರಕ್ಟರ್ ಇಲಾಂಗೊ ಮಾತನಾಡಿ ಕೆನರಾ ಬ್ಯಾಂಕಿನ ಪ್ರಾಯೋಜಕದಲ್ಲಿ ನಡೆಯುತ್ತಿರುವ ಈ ಬ್ಯಾಂಕ್‌ನಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಇಚ್ಛಿಸುವವರಿಗೆ ಶೀಘ್ರ ಸಾಲ ಮಂಜೂರಾತಿ, 30 ವರ್ಷಗಳವರೆಗೆ ಹಣ ಮರುಪಾವತಿ, ಅಲ್ಲದೆ ಉತ್ತಮ ಸೇವೆ ನೀಡಲಿದೆ ಎಂದು ಹೇಳಿದರು. ಸಹಕಾರ ನಗರ ಶಾಖೆಯ ಸಂಜಯ್‌ಕುಮಾರ್, ಶಾಖಾ ವ್ಯವಸ್ಥಾಪಕ ಎಚ್.ಎನ್.ವಸಂತಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

