ಸುದ್ದಿ ಸಂಕ್ಷೇಪ
ಪ್ರೌಢಶಾಲೆಯಲ್ಲಿ ಉಪನ್ಯಾಸ
ದೊಡ್ಡಬಳ್ಳಾಪುರ: ತೇಜಸ್ವಿ ಕನ್ನಡ ಓದುಗ ಜಗತ್ತಿಗೆ ಪಕ್ಷಿ-ಪ್ರಾಣಿ ಪ್ರಪಂಚದ ಒಳಹುಗಳನ್ನು ತೆರೆದಿಟ್ಟ ಮಹತ್ವದ ಲೇಖಕ ಎಂದು ಪತ್ರಕರ್ತ ಎನ್.ಎಂ.ನಟರಾಜ್ ಹೇಳಿದರು. ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತುಗಳ ಸಹಯೋಗದಲ್ಲಿ ಮಂಗಳವಾರ ನಡೆದ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ ಕಾರ್ಯಕ್ರಮ ಮಾಲಿಕೆಯ 2ನೇ ಕಾರ್ಯಕ್ರಮದಲ್ಲಿ ತೇಜಸ್ವಿ ಕೃತಿಗಳಲ್ಲಿ ಪರಿಸರ ಕುರಿತ ಕಳಕಳಿ ವಿಷಯದ ಬಗ್ಗೆ ಮಾತನಾಡಿದರು. ಪ್ರಕೃತಿ, ಪ್ರಾಣಿ, ಪಕ್ಷಿಗಳಿಲ್ಲದ ತೇಜಸ್ವಿ ಅವರ ಕೃತಿಗಳನ್ನು ಊಹಿಸುವುದೂ ಕಷ್ಟ. ಅಷ್ಟರ ಮಟ್ಟಿಗೆ ಪರಿಸರದ ಕಾಳಜಿ ಹೊಂದಿದ್ದ ಅವರು, ಕೈಗಾರಿಕೀಕರಣದ ಪ್ರಭಾವಕ್ಕೊಳಗಾದ ಮಲೆನಾಡಿನ ಆತಂಕಗಳನ್ನೂ ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಕನ್ನಡ ನಾಡಿನ ಅನೇಕ ಪಕ್ಷಿಗಳ ಬಗ್ಗೆ ಅವರ ಅಧ್ಯಯನ ಮತ್ತು ಬರೆಹಗಳು ಗಣನೀಯ ಎಂದರು. ಮುಖ್ಯಅತಿಥಿಯಾಗಿ ಮಾತನಾಡಿದ ಪತ್ರಕರ್ತ ಎಸ್.ಜಿ.ರಾಜೇಶ್, ಸಂಸ್ಕೃತಿ ಒಂದು ಆಲೋಚನಾ ಲಹರಿಯನ್ನು ಜನಸಾಮಾನ್ಯರ ಬೇಕು-ಬೇಡಗಳಿಗೆ ಪೂರಕವಾಗಿ ಸ್ಪಂದಿಸುವ ಪರಿಕ್ರಮ. ಅದು ಜೀವನ ಶೈಲಿಯೂ ಹೌದು. ವೈಚಾರಿಕತೆ ಸಂಸ್ಕೃತಿಯ ನೈಜ ಕಾಳಜಿ ಎಂದರು.ಶಾಲೆಯ ಮುಖ್ಯಶಿಕ್ಷಕಿ ಜಿ.ನಾಗರತ್ನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ.ಕಸಾಪ ಅಧ್ಯಕ್ಷ ರವಿಕಿರಣ್, ಕೋಶಾಧ್ಯಕ್ಷ ಎಂ.ಚಿಕ್ಕಣ್ಣ, ಸದಸ್ಯ ಜಿ.ಸಿ.ಶಿವಕುಮಾರ್, ಶಾಲಾ ಅಧ್ಯಾಪಕರಾದ ಮುನಿರಾಜು, ರುದ್ರೇಶ್, ನಾರಾಯಣ್, ಸದಾಶಿವರೆಡ್ಡಿ, ಗೋವಿಂದರಾಜು, ಪ್ರಭಾ ಉಪಾಧ್ಯಾಯ, ರೂಪ, ನಾಗಲಕ್ಷ್ಮಮ್ಮ, ಶಿವಶಂಕರ್ ಮತ್ತಿತರರು ಭಾಗವಹಿಸಿದ್ದರು.
ಗ್ರಾಪಂ ನೂತನ ಉಪಾಧ್ಯಕ್ಷ ಅಂಜನಮೂರ್ತಿ
ನೆಲಮಂಗಲ: ತಾಲೂಕಿನ ಅರಿಶಿನಕುಂಟೆ ಗ್ರಾಮ ಪಂಚಾಯ್ತಿಗೆ ನೂತನ ಉಪಾಧ್ಯಕ್ಷರಾಗಿ ವಾಜರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಅಂಜನಮೂರ್ತಿ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿದ್ದ ಕೆಂಪರಾಜು ರವರ ರಾಜೀನಾಮೆಯಿಂದ ತೆರವು ಆಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪಂಚಾಯ್ತಿ ಅಧ್ಯಕ್ಷ ಟಿ.ರಾಜಣ್ಣ, ಮಾಜಿ ಅಧ್ಯಕ್ಷರುಗಳಾದ ತಿಮ್ಮರಾಯಪ್ಪ, ಶುಭಲಕ್ಷ್ಮೀಕಾಂತ್, ಸದಸ್ಯರಾದ ಕೆಂಪರಾಜು, ಹುಚ್ಚಪ್ಪ, ರಾಜಣ್ಣ, ರಾಮಣ್ಣ, ಲಕ್ಷ್ಮಮ್ಮ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

