ಬೆಂಗಳೂರು ಗ್ರಾಮಾಂತರ

ದೇವಾಂಗ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಲಿ

Published On :

ದೊಡ್ಡಬಳ್ಳಾಪುರ: ನಗರದ ಶಾಂತಿನಗರ, ದರ್ಗಾಜೋಗಿಹಳ್ಳಿ, ಕರೇನಹಳ್ಳಿ, ಸಂಜಯನಗರ, ಕೊಂಗಾಡಿಯಪ್ಪ ಮುಖ್ಯರಸ್ತೆ, ಕಾಲೇಜು ರಸ್ತೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಂತಿನಗರ 7ನೇ ಕ್ರಾಸ್ನಲ್ಲಿರುವ ಶ್ರೀದೇವರದಾಸಿಮಯ್ಯ ಮಿತ್ರ ಮಂಡಲಿ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ದೇವರ ದಾಸಿಮಯ್ಯ ಜಯಂತಿ ದೇವಾಂಗ ಸಮುದಾಯದ ಸಂಘಟನೆಗೆ ಮಾರ್ಗದರ್ಶಿಯಾಗಬೇಕು.
ಈ ವರ್ಷ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ದೇವಾಂಗ ನೇಕಾರರ ಸಮಾವೇಶ ಹಮ್ಮಿಕೊಳ್ಳಲು ಚಿಂತನೆ ನಡೆಯಬೇಕು. ಈ ನಿಟ್ಟಿನಲ್ಲಿ ಸಮುದಾಯ ಒಟ್ಟುಗೂಡಿ ಎಲ್ಲ ಬಗೆಯ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ದೇವರ ದಾಸಿಮಯ್ಯ ಮಿತ್ರ ಮಂಡಳಿ ಅಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ಎಚ್.ಪಿ.ಶಂಕರ್, ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ತೆಲುಗು ದೇವಾಂಗ ಸಂಘದ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ಗಾಯತ್ರಿ ಪೀಠ ಮಿತ್ರ ಬಳಗದ ಶಿವಾನಂದ, ನಗರಸಭಾ ಸದಸ್ಯ ಕೆ.ಜಿ.ರಘುರಾಂ, ಲೋಕೇಶ್ ಬಾಬು, ಡಿ.ಎಂ.ಚಂದ್ರಶೇಖರ್, ಮಾಜಿ ಸದಸ್ಯ ಬಿ.ಜಿ.ಹೇಮಂತರಾಜು, ಡಿ.ಎ.ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ರವಿಕಿರಣ್, ಮಿತ್ರ ಮಂಡಲಿ ಮುಖಂಡರಾದ ರಾಮಣ್ಣ, ರಾಮಚಂದ್ರ, ಬಾಬು, ರಾಮಕೃಷ್ಣಪ್ಪ, ಮಧುಚಂದ್ರ, ಭಾಸ್ಕರ್, ಲಕ್ಷ್ಮೀಕಾಂತ್, ವಿಜಯಕುಮಾರ್, ಕೃಷ್ಣಮೂರ್ತಿ, ಅನಿಲ್ಕುಮಾರ್, ಸೋಮಶೇಖರ್, ಅಶೋಕ್ ಇತರರು ಉಪಸ್ಥಿತರಿದ್ದರು.  ದೇವಲ ಮಹರ್ಷಿ ಮತ್ತು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಅದೇ ರೀತಿ ಕರೇನಹಳ್ಳಿಯ ವರಸಿದ್ಧಿ ವಿನಾಯಕ ಗೆಳಯರ ಸಾಂಸ್ಕೃತಿಕ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಂದ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು. ಅನೇಕ ಗಣ್ಯರು ಭಾಗವಹಿಸಿದ್ದರು.


ಆಭರಣ ಕದ್ದ ಕೆಲವೇ ಕ್ಷಣದಲ್ಲಿ ಆರೋಪಿ ಬಂಧನ
ಶಿಡ್ಲಘಟ್ಟ: ಪಟ್ಟಣದ ಟಿ.ಬಿ. ರಸ್ತೆಯಲ್ಲಿರುವ ಒಡವೆ ಅಂಗಡಿಗೆ ವ್ಯಾಪಾರಕ್ಕೆಂದು ಬಂದು ಒಡವೆ ಕದ್ದು ಪರಾರಿಯಾದ ಪ್ರಕರಣ ನಡೆದಿದೆ.
ಬಾಲ ವೆಂಕಟರಾವ್ ಅವರ ರೂಪ ಜ್ಯೂವೆಲರ್ಸ್ನಲ್ಲಿ ಅಪರಿಚಿತ 4 ಮಂದಿ ಹೆಂಗಸರು, ಒಬ್ಬ ಗಂಡಸು ವ್ಯಾಪಾರಕ್ಕೆಂದು ಬಂದು 2 ಉಂಗುರ, 2 ಜೊತೆ ಓಲೆ ಕದ್ದು ಪರಾರಿಯಾಗಿದ್ದು, ಸುಮಾರು 12 ಗ್ರಾಂ ತೂಕದ ಸುಮಾರು ರು. 24,000 ಬೆಲೆ ಬಾಳಬಹುದೆಂದು ಅಂದಾಜಿಸಲಾಗಿದ್ದು, ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಬೇಧಿಸಲು ಶಿಡ್ಲಘಟ್ಟ ಅಪರಾದ ವಿಭಾಗದ ಕೃಷ್ಣಪ್ಪ, ಸಿಬ್ಬಂದಿ ರಮೇಶ್, ಮಂಜುನಾಥಗುಪ್ತರನ್ನು ನೇಮಿಸಿದ್ದು, ವಿಜಯಪುರದಲ್ಲಿ 4 ಮಂದಿ ಹೆಂಗಸರನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಉಂಗುರ ಪತ್ತೆಯಾಗಿದೆ. ಜೊತೆಯಲ್ಲಿದ್ದ ಗಂಡಸು 2 ಜೊತೆ ಓಲೆ ಜೊತೆ ಪರಾರಿಯಾಗಿರಬಹುದೆಂದು ಊಹಿಸಲಾಗಿದೆ. ಕಮಲಮ್ಮ, ಸುಬ್ಬಮ್ಮ, ರಾಮನಗರದ ಮಂಚನ ಬೆಲೆಗೆ ಸೇರಿದವರಾಗಿದ್ದು, ಸರೋಜಮ್ಮ, ಲಕ್ಷೀ ಚಿತ್ರ ದುರ್ಗದ ಎಂಡ್ರಹಳ್ಳಿಗೆ ಸೇರಿದವರಾಗಿದ್ದಾರೆ. ಘಟನೆ ನಡೆದ ಕೆಲವೇ ಸಮಯದಲ್ಲಿ ಅಪರಾಧಿಗಳನ್ನು ಬಂಧಿಸಿದರುವುದು ವಿಶೇಷವಾಗಿದ್ದು, ಪರಾರಿಯಾಗಿರುವ ಗಂಡಸಿನ ಶೋಧನೆಯಲ್ಲಿ ಪೊಲೀಸರು ತೊಡಗಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.