ಬೆಂಗಳೂರು ಗ್ರಾಮಾಂತರ

ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿ

Published On :

ಕನಕಪುರ: ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕು ಹಾಗೂ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಸಂಚಾರಿ ಕಾನೂನು ಸಾಕ್ಷರತಾ ರಥ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶೆ ಲತಾದೇವಿ ಹೇಳಿದ್ದಾರೆ.
ಅವರು ಕನಕಪುರದ ನ್ಯಾಯಾಲಯದ ಆವರಣದಲ್ಲಿ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ವಕೀಲರ ಸಂಘದ ಅಧ್ಯಕ್ಷ ಹೆಚ್.ಎಲ್. ಅಶೋಕ್ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನವಾದ ನ್ಯಾಯ ದೊರೆಯಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಹಿಂದಿನ ಕಾಲದಲ್ಲಿ ಹಳ್ಳಿಗಳ ಅರಳೀಕಟ್ಟೆಗಳೇ ಪಂಚಾಯ್ತಿಗಳಾಗಿ, ನ್ಯಾಯದಾನದ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಇಂದು ಸಣ್ಣಪುಟ್ಟ ವಿಚಾರಗಳಿಗೆ ಹತ್ತಾರು ವರ್ಷ ಕೋರ್ಟ್ ಅಲೆಯಬೇಕಾದ ಪರಿಸ್ಥಿತಿಯಿದೆ. ಪರಸ್ಪರ ಅರಿವು, ರಾಜೀಸಂಧಾನಗಳಿಂದ ಬಹಳಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದು, ಕಾನೂನಿನ ಪ್ರಾಥಮಿಕ ತಿಳುವಳಿಕೆ ಎಲ್ಲರ ಅಗತ್ಯವಾಗಿದೆ ಎಂದರು. ನ್ಯಾಯವಾದಿಗಳಾದ ದೇವದಾಸ್, ಅನಿತಾ,ಜೆ.ಮಹದೇವ್,ಎಸ್.ವಿ. ವೀರಪ್ಪ, ಜಗದೀಶ್, ಕಾಳಯ್ಯ, ನಂಜೇಗೌಡ, ಕೆ.ಸಿ.ಗೋಪಾಲಗೌಡ, ಶಿವರುದ್ರಯ್ಯ ಪಾಲ್ಗೊಂಡಿದ್ದರು. ಕಾನೂನು ಸಾಕ್ಷರತಾ ರಥವು ಇಂದಿನಿಂದ ಮೂರುದಿನಗಳ ಕಾಲ ಕನಕಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಕಾನೂನಿನ ಅರಿವು ಮೂಡಿಸಲಿದೆ.

ವ್ಯಾಪಾರಿ ಕೊಂದಿದ್ದ ಮೂವರ ಬಂಧನ
ಸೂಲಿಬೆಲೆ:  ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಏ.2 ರಂದು ನಡೆದಿದ್ದ ಚಿಲ್ಲರೆ ಅಂಗಡಿ ವ್ಯಾಪಾರಿಯೊಬ್ಬರ ಕೊಲೆ ಪ್ರಕರಣವನ್ನು ಬೇಧಿಸಿರುವ ನಂದಗುಡಿ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮ್ಮರಸನಹಳ್ಳಿ ಸೈಯಾದ್ ಜಬಿ(21), ನಂದಗುಡಿ ನಿವಾಸಿ ಶಂಕರ್ (20) ಹಾಗೂ ಪರ್ವಿಜಜ್ಪಾಷ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.