ಕಸ ವಿಲೇವಾರಿಗೆ ಸೂಕ್ತ ನಿವೇಶನ ಗುರುತಿಸಿ
ಕನಕಪುರ: ಕನಕಪುರ ತಾಲೂಕಿನ ಎಲ್ಲಾ 43 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸೂಕ್ತ ನಿವೇಶನವನ್ನು ಗುರುತಿಸಿ ವೈಜ್ಞಾನಿಕವಾಗಿ ಕಸವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಮನಗರ ಜಿಪಂ ಸಿಇಓ ಡಾ.ವೆಂಕಟೇಶ್ ಹೇಳಿದ್ದಾರೆ. ಅವರು ಕನಕಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಪಂ ಪಿಡಿಓ ಹಾಗೂ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಸ ವಿಲೇವಾರಿ ಇಂದು ಜ್ವಲಂತ ಸಮಸ್ಯೆಯಾಗಿ ಬಾಧಿಸುತ್ತಿದ್ದು ಬೆಂಗಳೂರಿನಲ್ಲಿ ಕಸವಿಲೇವಾರಿ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದ್ದು, ಹೈಕೋರ್ಟ್ ಕೂಡಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶವಿತ್ತಿದೆ. ಸಮಸ್ಯೆಯನ್ನು ಬೇರುಮಟ್ಟದಿಂದಲೇ ನಿರ್ಮೂಲನ ಮಾಡಲು ತೀರ್ಮಾನಿಸಿ ಗ್ರಾಪಂ ವ್ಯಾಪ್ತಿಯಿಂದಲೇ ವಿಲೇವಾರಿಗೆ ಚಾಲನೆ ನೀಡಲಾಗುತ್ತಿದೆ.
ಸತ್ಸಂಗ ಕಾರ್ಯಕ್ರಮ
ಮಾಗಡಿ: ಅನುಕ್ಷಣವೂ ಧರ್ಮ ಅನುಷ್ಠಾನಗೊಂಡು, ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಸದಾ ಜಾಗೃತಗೊಳ್ಳಬೇಕು ಎಂದು ಪೋಲೋಹಳ್ಳಿಯ ಭವತಾರಿಣಿ ಆಶ್ರಮದ ಮಾತಾ ವಿವೇಕಮಯಿ ನುಡಿದರು. ಅವರು ಪಟ್ಟಣದಲ್ಲಿ ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕೀರ್ತನೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಬಿ.ಎಸ್. ಗೋಪಾಲ್, ಯೋಗ ರಮೇಶ್, ಕೆ.ಎಸ್. ಹರೀಶ್, ಶಾಂತಿ ಹರೀಶ್, ಕಾಂತರಾಜಪ್ಪ, ಹನುಮಂತಪ್ಪ, ಬಸವರಾಜು, ಭರತ್.ಎನ್. ಕೇಶಮೂರ್ತಿ, ಮೂರ್ತಿ, ನಾಗರಾಜು, ಸಿದ್ದಲಿಂಗೇಶ್ವರ್, ಶಂಕರ್, ಶ್ರೀನಿವಾಸ್, ಪ್ರಸನ್ನಕುಮಾರ್ ಇತರರು ಭಾಗವಹಿಸಿದ್ದರು.
ಡಿಕ್ಕಿ: ಆಟೋ ಚಾಲಕ ಸಾವು
ಚನ್ನಪಟ್ಟಣ: ಆಟೋಗೆ ಬೈಕ್ ಡಿಕ್ಕಿ ಹೊಡೆದ ಆಟೋಚಾಲಕ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಗಿರೀಗೌಡ (60) ಮೃತ ದುರ್ದೈವಿಯಾಗಿದ್ದು ,ಚನ್ನಪಟ್ಟಣಕ್ಕೆ ಕೆಲಸ ನಿಮಿತ್ತ ತಮ್ಮ ಲಗೇಜ್ ಆಟೋದಲ್ಲಿ ತೆರಳಿದ್ದ ಇವರು ತಮ್ಮ ಗ್ರಾಮಕ್ಕೆ ಹಿಂದಿರುಗುವಾಗ ಚಕ್ಕೇರೆ ಗೇಟ್ ಬಳಿ ವೇಗವಾಗಿ ಬಂದ ದ್ವಿಚಕ್ರವಾಹನ ಡಿಕ್ಕಿ ಹೊಡಿದಿದೆ. ತೀವ್ರ ಗಾಯ ಗೊಂಡಿದ್ದ ಗಿರೀಗೌಡ ಸ್ಥಳದಲ್ಲೇ ಸಾವಿಗೀಡಾಗಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತಾಪ: ತಾ.ಪಂ ಸದಸ್ಯ ರಮೇಶ್ ತಂದೆಯಾಗಿರುವ ಗಿರೀಗೌಡ ಸಾವಿಗೆ ಶಾಸಕ ಸಿ.ಪಿ.ಯೋಗೇಶ್ವರ್, ತಾ.ಪಂ ಸದಸ್ಯ ಕಾಂತರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಲಿಂಗೇಶ್ ಕುಮಾರ್ ಸೇರಿದಂತೆ ಅಪಾರ ಮಂದಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

