ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳ
ವಿಜಯಪುರ: ಇಂದಿನ ಅರ್ಥಿಕ ಮುಗ್ಗಟ್ಟಿನಲ್ಲಿ ಎಷ್ಟು ಹಣಗಳಿಸಿದರೂ ಕೂಡ ಬದುಕಲು ಮತ್ತಷ್ಟು ಅವಶ್ಯಕತೆ ಎದುರು ನೋಡುತ್ತದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ದಂಪತಿಗಳಿಬ್ಬರೂ ದುಡಿಯುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪುಷ್ಪಜಿರಾಯ್ ತಿಳಿಸಿದರು.ಇವರು ಪಟ್ಟಣದ
ಪುರಭವನದಲ್ಲಿ ಕೌಶಲ್ಯ ದರ್ಶಿನಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸ್ವ-ಸಹಾಯ ಸಂಘಗಳಿಂದ ತಯಾರಿಸಲ್ಪಟ್ಟ ಆಕರ್ಷಕ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟಕರಾಗಿ ಮಾತನಾಡುತ್ತಿದ್ದರು. ಮಹಿಳೆಯರು ಮನೆಯಲ್ಲಿನ ದೈನಂದಿನ ಚಟುವಟಿಕೆಗಳೊಂದಿಗೆ ತಮ್ಮಲ್ಲಿರುವ ಕೌಶಲ್ಯತೆಯಿಂದ ಕರಕುಶಲ ವಸ್ತುಗಳನ್ನು ನಿರ್ಮಿಸಿ ಮಾರಾಟ ಮಾಡುವುದರಿಂದ ಒಂದಿಷ್ಟು ಹಣ ಸಂಪಾದನೆ ಮಾಡಬಹುದು ಎನ್ನುವ ದೃಷ್ಟಿಯಿಂದ ಸರ್ಕಾರವು ಮಹಿಳೆಯರಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ನಿರೀಕ್ಷಕಿ ಪದ್ಮಿನಿ ಮಾತನಾಡಿ 1987ರಲ್ಲಿ ಪ್ರಾರಂಭವಾದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ನಿಗಮವು ಮಹಿಳೆಯರ ಶ್ರೇಯಾಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಅಶ್ವತ್ಥಮ್ಮ ಮಾತನಾಡಿ 2001ರಲ್ಲಿ ಪ್ರಾರಂಭವಾದ ಸ್ತ್ರೀ ಶಕ್ತಿ ಗುಂಪುಗಳಲ್ಲಿ ಇತ್ತೀಚೆಗೆ ಚಟುವಟಿಕೆಯಲ್ಲಿ ಪ್ರೋತ್ಸಾಹ ಎದ್ದು ತೋರುತ್ತಿದೆ. ಸರ್ಕಾರ ಮಹಿಳಾ ಸ್ವಉದ್ಯೋಗಕೋಸ್ಕರ ಸಾಕಷ್ಟು ಮಹಿಳಾ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದೆ. ತರಬೇತಿ ಹೊಂದಿ ಸಣ್ಣ ಉದ್ಯಮ ಪ್ರಾರಂಭಿಸುವವರಿಗೆ ಬ್ಯಾಂಕ್ಗಳಿಂದ 1 ಲಕ್ಷದವರೆಗೆ ಸಾಲ ಹಾಗೂ ಇಲಾಖೆ ವತಿಯಿಂದ ಸಬ್ಸಿಡಿ ಸಿಗುತ್ತಿದೆ. ಇದರೊಂದಿಗೆ ಈ ಕರಕುಶಲ ವಸ್ತುಗಳ ವ್ಯಾಪಾರಕ್ಕೆಂದು ಇಲ್ಲಿಯತನಕ ಜಿಲ್ಲಾ ಮೇಳಗಳು ನಡೆಯುತ್ತಿದ್ದುವು. ಇನ್ನು ಮುಂದೆ ತಾಲೂಕು ಮಟ್ಟದಲ್ಲಿ ಮೇಳಗಳನ್ನು ನಡೆಸಲಾಗುವುದು. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಪುರಸಭಾ ಸದಸ್ಯೆ ಭಾರತಿ ಮುನಿಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗಶಿಕ್ಷಣದ ಶಿಕ್ಷಕಿ ಭಾರತಿ ಪ್ರಭುದೇವ್ ಮಾತನಾಡಿದರು. ಪುರಸಭೆಯ ಆರೋಗ್ಯಾಧಿಕಾರಿ ಮಂಜುಳಾ, ಕಾಂಗ್ರೆಸ್ ಮಹಿಳಾ ಬ್ಲಾಕ್ ವಿಜಯಪುರ ಟೌನ್ ಅಧ್ಯಕ್ಷೆ ಶೀಲಾ ಬಸವರಾಜು, ಸ್ತ್ರೀ ಶಕ್ತಿ ಗುಂಪು, ಅಂಗನವಾಡಿ ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

