ಬೆಂಗಳೂರು ಗ್ರಾಮಾಂತರ

'ವಿವೇಕಾನಂದರ ಬದುಕು ಎಲ್ಲರಿಗೂ ಪ್ರೇರಣೆ'

Published On :

ಕನಕಪುರ: ವೀರಸನ್ಯಾಸಿ ವಿವೇಕಾನಂದರು ಜಗತ್ತಿಗೆ ಭಾರತದ ಹಿರಿಮೆ, ಮಹತ್ವಗಳನ್ನು ಸಾರಿದವರು. ನಾಡಿನ ಉದಾತ್ತ ಸಂಸ್ಕೃತಿ ಪರಂಪರೆ, ಇತಿಹಾಸಗಳ ಬಗ್ಗೆ ಪಾಶ್ಚಾತ್ಯರಿಗೆ ಕಣ್ತೆರೆಸಿದವರು. ಅವರ ಬದುಕು, ಸಾಧನೆಗಳು ಇಂದಿಗೂ ಯುವಜನರಿಗೆ ಪ್ರೇರಣೆ ಮಾರ್ಗದರ್ಶಕವಾಗಿವೆ ಎಂದು ರಾಮಕೃಷ್ಣ ಮಿಷನ್‌ನ ಶ್ರೀ ಸ್ವಾಮಿ ಹೇಳಿದರು.
ಅವರು ಕನಕಪುರ ತಾಲೂಕು ಮರಳವಾಡಿ ಶಿವಮಠದ ಬಸವಗುರುಕುಲದ ಆವರಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತ್ಯುತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಋಷಿ ತಪೋಕ್ಷೇತ್ರದ ಶ್ರೀ ದಿವಾಕರ ಆಚಾರ್ಯ ಹಾಗೂ ಮರಳವಾಡಿ ಶಿವಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಬಿಸ್ಲಳ್ಳಿ ವೀರಭದ್ರಪ್ಪ ಮಾತನಾಡಿ, ಇಂದಿನ ವಿದ್ಯಾರ್ಥಿ ಸಮುದಾಯ ಸಮರ್ಥ ಮಾರ್ಗದರ್ಶನವಿಲ್ಲದೆ ಹಾದಿ ತಪ್ಪುತ್ತಿದ್ದಾರೆ. ಉದಾರೀಕರಣ ಜಾಗತೀಕರಣಗಳೂ ವಿದ್ಯಾರ್ಥಿಗಳ ಅವನತಿಗೆ ಪರೋಕ್ಷ ಕಾರಣವಾಗಿದೆ. ಇಂತಹಾ ಪರ್ವ ಕಾಲದಲ್ಲಿ ವಿವೇಕಾನಂದರ ಸೂಕ್ತಿ ಉಪನ್ಯಾಸಗಳು, ಮಾರ್ಗದರ್ಶನಗಳು ಯುವಸಮೂಹವನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಎಂ.ವಿ.ಕೃಷ್ಣಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ್‌ಪಾಷ, ನಾಡಕಚೇರಿ ಉಪತಹಸೀಲ್ದಾರ್ ಹನುಮಂತಪ್ಪ ಇತರರು ಪಾಲ್ಗೊಂಡಿದ್ದರು.

ಲಯನ್ಸ್‌ನಿಂದ ಉಚಿತ ನೇತ್ರ ಶಿಬಿರ
ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 192ನೇ ಮಾಸಿಕ ಉಚಿತ ಕಣ್ಣಿನ ತಪಾಸಣೆ ಮತ್ತು ಆಧುನಿಕ ಶಸ್ತ್ರಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರ ಸೋಮವಾರ ಲಯನ್ಸ್ ಭವನದಲ್ಲಿ ನಡೆಯಿತು. ಪಿಎಂಜೆಎಫ್ ಕೆ.ರಮೇಶ್‌ಕುಮಾರ್ ಶಿಬಿರ ಉದ್ಘಾಟಿಸಿದರು. ಬಿಎಂಎಸ್ ಕಾಲೇಜಿನ ಉಪನ್ಯಾಸಕ ಎ.ಆರ್.ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲಯನ್ಸ್ ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.