ಬೆಂಗಳೂರು ಗ್ರಾಮಾಂತರ

221 ಎಕರೆ ಜಮೀನು ವಶಕ್ಕೆ ರೈತರ ವಿರೋಧ

Published On :

ದೇವನಹಳ್ಳಿ : ತಾಲೂಕು ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಬೂದಿಗೆರೆ ಸಮೀಪವಿರುವ ಕೊಟ್ಟತೆವರು, ಕೊಂಡೇನಹಳ್ಳಿ ಹಾಗೂ ಗೊಲ್ಲಹಳ್ಳಿ ಗ್ರಾಮಗಳ 90 ಮಂದಿ ರೈತರ 221 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುವುದರ ವಿರುದ್ಧ ನೊಂದ ರೈತರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.   ಜಮೀನು ಕಳೆದುಕೊಳ್ಳಲಿರುವ ರೈತರಾದ ಮಂಚಪ್ಪನಹಳ್ಳಿ ಶಿವರಾಮಣ್ಣ, ಬೂದಿಗೆರೆಯ ಸೈಯದ್ ಅತಾಉಲ್ಲ, ಸುಬ್ಬಣ್ಣ, ಸುಧಾಕರ್ ಹಾಗೂ ಕಗ್ಗಲಹಳ್ಳಿಯ ಮುನೇಗೌಡ ಅಲ್ಲದೆ ಅನೇಕ ರೈತರು ದೇವನಹಳ್ಳಿಗೆ ಆಗಮಿಸಿ ಲ್ಯಾಂಡ್ ಮಾಫಿಯಾಗಳ ಉದ್ಧಾರಕ್ಕಾಗಿ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿಯವರು ಶಾಮೀಲಾಗಿರುವುದು ಖಂಡನೀಯ ಎಂದು ನೊಂದ ರೈತ ಶಿವರಾಮಣ್ಣ ತಿಳಿಸಿದರು.  ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟುಕೊಡುವುದಿಲ್ಲ. ನಮ್ಮ ಪ್ರಾಣವನ್ನಾದರೂ ಕೊಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಹೋರಾಟ ಸಮಿತಿ ಮುಖ್ಯ ಸಂಚಾಲಕ ಬಿ.ಕೆ.ಶಿವಪ್ಪ, ರೈತ ಮುಖಂಡರಾದ ವೆಂಕಟೇಶ್ ಉಪಸ್ಥಿತರಿದ್ದರು.

ದೇವನಹಳ್ಳಿ ಹಗಲು ಪರಿಷೆಗೆ ಸಾವಿರಾರು ಮಂದಿ ಭಕ್ತರು
ದೇವನಹಳ್ಳಿ: ಇಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಅಂಗವಾಗಿ ಭಾನುವಾರ ನಡೆದ ಹಗಲು ಪರಿಷೆಗೆ ಸುತ್ತ ಮುತ್ತ ಗ್ರಾಮಗಳ ಸಾವಿರಾರು ಮಂದಿ  ಆಗಮಿಸಿ ದೇವರ ದರ್ಶನ ಪಡೆದರು. ಇಲ್ಲಿನ ಜೇಸಿಐ ಸಂಸ್ಥೆಯವರು ಪರಿಷೆಗೆ ಆಗಮಿಸಿದವರಿಗೆ ಪ್ರತಿ ವರ್ಷದಂತೆ ಅನ್ನ ಸಂತರ್ಪಣೆ ಆಯೋಜಿಸಿದ್ದರು.    ಜಾತ್ರೆಯಲ್ಲಿ ಮಕ್ಕಳಿಗಾಗಿಯೇ ವಿಶೇಷವಾದ ಮನರಂಜನಾ ಕ್ರೀಡೆಗಳು ಗಮನ ಸೆಳೆಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.