ಸುದ್ದಿ ಸಂಕ್ಷೇಪ
ಕೆರೆಗೆ ಬಿದ್ದು ವ್ಯಕ್ತಿ ಸಾವು
ಚನ್ನಪಟ್ಟಣ: ಕೆರೆಗೆ ಬಿದ್ದು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೆಂಚಯ್ಯನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಗ್ರಾಮದ ಹನುಮೇಶ್(29) ಮೃತ ವ್ಯಕ್ತಿಯಾಗಿದ್ದು, ಕೆರೆಯಲ್ಲಿ ತೇಲುತ್ತಿದ್ದ ಈತನ ಶವವನ್ನು ಕಂಡ ಸ್ಥಳೀಯರು ಗ್ರಾಮಾಂತರ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ್ದಾರೆ.
ರೇವಣಸಿದ್ದೇಶ್ವರಹುಂಡಿ ಕಳವು
ರಾಮನಗರ: ತಾಲೂಕಿನ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟದ ಭೀಮೇಶ್ವರಿ ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು 2 ಹುಂಡಿಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಈ ಎರಡೂ ಹುಂಡಿಗಳಲ್ಲಿ ರು.1 ಲಕ್ಷಕ್ಕೂ ಅಧಿಕ ನಗದು ಇದ್ದಿರಬುಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. 2 ಹುಂಡಿಗಳನ್ನು ಒಡೆದು, ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಗಳನ್ನು ಬೆಟ್ಟದ ಮೆಟ್ಟಿಲುಗಳ ಬಳಿ ಎಸೆದು ಹೋಗಿದ್ದಾರೆ. ಮುಂಜಾನೆ ದೇವಾಲಯದ ಅರ್ಚಕರು ಪೂಜೆ ಮಾಡಲು ಆಗಮಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮಕ ಪರಿಷತ್ನಿಂದ ಸಾಹಿತ್ಯ ಸೇವೆ: ಎಲ್ಲೇಗೌಡ ಬೆಸಗರಹಳ್ಳಿ
ಕನಕಪುರ: ವಿಶ್ವ ಸಾಹಿತ್ಯದಲ್ಲಿ ಮಹಾಕಾವ್ಯ ಪರಂಪರೆಯೇ ಮರೆಯಾಗಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಇಂದಿಗೂ ಹತ್ತಾರು ಮಹಾಕಾವ್ಯಗಳು ರಚನೆಯಾಗುತ್ತಿವೆ. ಅವುಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಕಾರ್ಯವನ್ನು ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ತಿಳಿಸಿದರು.
ಅವರು ಕನಕಪುರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿಯ ಶ್ರೀಕೃಷ್ಣ ರಾಘವೇಂದ್ರ ಮಠದಲ್ಲಿ ಸಾಹಿತಿ ಪ್ರದೀಪ್ಕುಮಾರ್ ಹೆಬ್ರಿ ವಿರಚಿತ ಮಧ್ವಾಚಾರ್ಯರ ಜೀವನ ಕುರಿತ ಪೂರ್ಣಪ್ರಜ್ಞಾ ಮಹಾಕಾವ್ಯದ ಸಮಗ್ರ ವಾಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉಪನ್ಯಾಸಕಿ ಕು.ಕೆ.ಸಿ.ಮಮತಾ ಕಾವ್ಯವಾಚನ ಹಾಗೂ ವ್ಯಾಖ್ಯಾನ ನೀಡಿದರು. ಸಂಘದ ಪದಾಧಿಕಾರಿ ಪಾರ್ವತಮ್ಮ ವಂದಿಸಿದರು.
ಮಾದರಿ ಗ್ರಾಮ ನಿರ್ಮಾಣಕ್ಕೆ ಒತ್ತು: ಡಾ. ಶ್ರೀನಿವಾಸಮೂರ್ತಿ
ನೆಲಮಂಗಲ: ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ಪರಿವರ್ತಿಸುವುದೇ ತಮ್ಮ ಉದ್ದೇಶ ಎಂದು ಶಾಸಕ ಡಾ. ಕೆ.ಶ್ರೀನಿವಾಸಮೂರ್ತಿ ತಿಳಿಸಿದರು. ಶುಕ್ರವಾರ ತಾಲೂಕಿನ ಎಲೆಕ್ಯಾತನಹಳ್ಳಿ ಗ್ರಾಮದಲ್ಲಿ ಹರಿಜನ ಗಿರಿಜನ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶುಕ್ರವಾರ ಅವರು ಮಾತನಾಡಿದರು. ಸೋಂಪುರ ಹೋಬಳಿಯಲ್ಲಿ ಎಲ್ಲಾ ಕಾಲೋನಿಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವೇ ಕಾಮಗಾರಿಗಳು ಬಾಕಿ ಉಳಿದಿವೆ. ಅವುಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಲಾಗುವುದು. ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಉತ್ತಮ ಗುಣ ಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ನಿರ್ಮಾಣ ಸಂದರ್ಭದಲ್ಲಿ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು ಕಾಮಗಾರಿಯಲ್ಲಿ ಯಾವುದೇ ರೀತಿಯ ರಾಜಿಗೆ ಒಳಪಡದೆ ಗ್ರಾಮಕ್ಕೆ ಉತ್ತಮ ಯೋಗ್ಯ ಮಟ್ಟದ ರಸ್ತೆ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು. ಮರಳಕುಂಟೆ ಗ್ರಾಪಂ ಮಾಜಿ ಅಧ್ಯಕ್ಷ ನಾಗಭೂಷಣ್, ಶ್ರೀನಿವಾಸಮೂರ್ತಿ, ಫಾಲಾಕ್ಷಯ್ಯ, ನಯಾಜ್, ಕೆ.ರಾಮಾನಂಜಯ್ಯ, ವಿ.ಎಸ್.ಎನ್.ಮಾಜಿ ಅಧ್ಯಕ್ಷ ಆನಂದ್ರಾವ್, ಎಲೆಕ್ಯಾತನಹಳ್ಳಿ ವೈ.ಪಿ.ಇಂದ್ರಕುಮಾರ್, ವೀರಮಲ್ಲಯ್ಯ, ರಮೇಶ್ಬಾಬು, ಪಿಡಿಒ ಶಿವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

