ರೇಲ್ವೆ ನಿಲ್ದಾಣ ರಸ್ತೆ ಅಗಲೀಕರಣಕ್ಕೆ ಆಗ್ರಹ
ಆನೇಕಲ್ಲು: ಆನೇಕಲ್ನಿಂದ ರೈಲು ನಿಲ್ದಾಣಕ್ಕೆ ಸಂಚರಿಸುವ ರಸ್ತೆ ಮಾರ್ಗ ಕಿರಿದಾಗಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಪ್ರಾಂತೀಯ ರೈಲ್ವೆ ವ್ಯವಸ್ಥಾಪಕ ಅಗರವಾಲ್ ಸ್ಥಳದಲ್ಲೇ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲು ಬೇಕಾದ ನೀಲ ನಕ್ಷೆ ಹಾಗೂ ಅಗತ್ಯ ವಸ್ತುಗಳ ಪಟ್ಟಿ ಮಂಡಿಸುವಂತೆ ತಿಳಿಸಿದರು.
ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಇನ್ನೊಂದು ಬದಿ ಹಳಿಗೆ ಪ್ರಯಾಣಿಕರು ಮತ್ತು ಲಗೇಜ್ ಸಾಗಿಸಲು ಅನುಕೂಲವಾಗುವಂತೆ ಕಬ್ಬಿಣ್ದ ಮೆಟ್ಟಿಲು ಅಳವಡಿಸಲು ಇಂಜನಿಯರ್ ಅವರಿಗೆ ನಕ್ಷೆ ತಯಾರಿಸಲು ತಿಳಿಸಿ ಫ್ಲಾಟ್ ಫಾರಂ ಎತ್ತರಿಸುವಿಕೆ ಮತ್ತು ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಕ್ಯಾಂಟಿನ್ ಮತ್ತು ಸ್ಟೇಷನರಿ ಅಂಗಡಿಗಾಗಿ ಒಂದು ಸ್ಟಾಲ್ ನಿರ್ಮಾಣಕ್ಕೆ ಕೂಡಲೇ ಅದೇಶ ನೀಡಿದರು.ಈ ಟಿಕೆಟ್ ಕೌಂಟರ್ ನಿರ್ಮಾಣಕ್ಕೆ ಸಂಸದರ ನಿಧಿ ಪಡೆಯಲು ಅವಕಾಶವಿದ್ದು, ಶಾಸಕರಿಗೆ ಮನವಿ ಮಾಡಲು ತಿಳಿಸಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಕೇಂದ್ರ ರೇಲ್ವೆ ಸಚಿವರನ್ನು ಮಾಡಿದ ಭೇಟಿ ಫಲಪ್ರದವಾಗಿದ್ದು ಕೂಡಲೇ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ ಬಹುತೇಕ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಕಾಮಗಾರಿ ಪೂರ್ಣವಾಗಿ ಜನತೆಗೆ ತಲುಪುವವರಿವಿಗೂ ಎಲ್ಲ ಅಧಿಕಾರಿಗಳೊಂದಿಗೆ ಸತತ ಸಂಪರ್ಕವಿಟ್ಟು ಕ್ರಮ ವಹಿಸುವುದಾಗಿ ಹೇಳಿದರು. ಮುಖಂಡರಾದ ಸೋಮಶೇಖರರೆಡ್ಡಿ, ಜಿ. ನಂಜುಂಡಪ್ಪ, ಜಿ. ಗೋಪಾಲ್, ಚೇತನ್ ಶೆಟ್ಟಿ ಪುರಸಭಾ ಸದಸ್ಯರು ಹಾಗೂ ಸ್ಥಳೀಯ ಪ್ರತಿನಿಧಿಗಳು ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

