ಕಾರ್ಮೆಲ್ ಆಂಗ್ಲಶಾಲೆಯಲ್ಲಿ ಅಂಚೆ ಚೀಟಿ ಪ್ರದರ್ಶನ
ದೇವನಹಳ್ಳಿ: ಭಾರತೀಯ ಅಂಚೆ ಇಲಾಖೆ, ಮೇಲೂರಿನ ಅಂಚೆ ಚೀಟಿ ಸಂಗ್ರಾಹಕರಾದ ಪ್ರಭಾಕರ್ ಸಹಕಾರದೊಂದಿಗೆ ಇಲ್ಲಿನ ಕಾರ್ಮೆಲ್ ಆಂಗ್ಲ ಶಾಲೆ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗಾಗಿ ವಿಶ್ವ ಅಂಚೆ ಚೀಟಿ ಪ್ರದರ್ಶನ ಅಂಗವಾಗಿ ಸ್ಟಾಂಪ್ಗಳ ಪ್ರದರ್ಶನ ಆಯೋಜಿಸಿದ್ದರು.
ಶಿಢ್ಲಘಟ್ಟ ತಾಲೂಕು ಮೇಲೂರಿನ ಅಂಚೆ ಚೀಟಿ ಸಂಗ್ರಾಹಕ ಪ್ರಭಾಕರ್ ಕಳೆದ 30 ವರ್ಷಗಳಿಂದ ಅಂಚೆ ಚೀಟಿಗಳ ಸಂಗ್ರಹಣೆ ಮಾಡುತ್ತಿದ್ದು ರಾಜ್ಯದಲ್ಲಷ್ಟೆ ಅಲ್ಲದೆ ಇತರ ರಾಜ್ಯಗಳಲ್ಲೂ ಅಂಚೆ ಚೀಟಿಗಳ ಪ್ರದರ್ಶನ ಆಯೋಜಿಸಿದ್ದಾರೆ. ಈ ಪ್ರದರ್ಶನದಲ್ಲಿ ವ್ಯವಸಾಯ, ಪರಿಸರ, ವಿಜ್ಞಾನ, ಭಾರತದ ಸಾಂಸ್ಕೃತಿಕ ಪರಂಪರೆ, ಹೂವುಗಳು, ಭಾರತದ ಇತಿಹಾಸ ಪುರುಷರು, ವಚನಕಾರರು, ದಾರ್ಶನಿಕರು ಅಲ್ಲದೆ ದೇವನಹಳ್ಳಿಯಲ್ಲಿ ಜನಿಸಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್, ಸರ್. ಎಂ.ವಿಶ್ವೇಶ್ವರಯ್ಯ, ಡಾ.ರಾಜಕುಮಾರ್ ಅಲ್ಲದೆ ಇತರ ಸಾವಿರಾರು ಅಂಚೆ ಚೀಟಿಗಳು ವಿದ್ಯಾರ್ಥಿಗಳ ಗಮನ ಸೆಳೆದವು.
ಪ್ರತಿ ವರ್ಷ ಮೂರ್ನಾಲ್ಕು ಶಾಲೆಗಳಲ್ಲಿ ಅಂಚೆ ಚೀಟಿ ಪ್ರದರ್ಶನ ಇಲಾಖೆಯಿಂದ ಆಯೋಜಿಸುತ್ತಿದೆ ಎಂದು ಅಂಚೆ ಇಲಾಖೆಯ ಇನ್ಸ್ಪೆಕ್ಟ್ ಶ್ರೀನಿವಾಸ್ ತಿಳಿಸಿ ಪ್ರತಿ ಅಂಚೆ ಚೀಟಿಯ ಹಿಂದೆ ಒಂದು ಇತಿಹಾಸ
ಇರುತ್ತದೆ. ವಿದ್ಯಾರ್ಥಿಗಳು ಕೇವಲ ವೀಕ್ಷಣೆ ಮಾಡಿದರೆ ಸಾಲದು ಅವರಲ್ಲಿ ಪ್ರತಿಯೊಂದು ಸ್ಟಾಂಪಿನ ಬಗ್ಗೆ ಕುತೂಹಲ ಬರಬೇಕು ಮತ್ತು ಅದರ ಇತಿಹಾಸವನ್ನೂ ತಿಳಿಯಲು ಪ್ರಯತ್ನಿಸಬೇಕು ಎಂದರಲ್ಲದೆ ಸ್ಟಾಂಪ್ ಕಲೆಹಾಕುವ ಅಭ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಅಂಚೆ ಕಚೇರಿಯಲ್ಲಿ ಸಂಗ್ರಹಣಾ ಖಾತೆ ಪ್ರಾರಂಭಿಸಿದರೆ ಹೊಸದಾಗಿ ಬಿಡುಗಡೆಯಾಗುವ ಅಂಚೆ ಚೀಟಿಗಳು ಲಭ್ಯವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಅಂಚೆ ಇಲಾಖೆಯ ಅಧಿಕಾರಿ ಡಿ.ರಾಮಕೃಷ್ಣ, ಶಾಲೆಯ ಆಡಳಿತಾಧಿಕಾರಿ ಕೆ.ಎಂ.ಸುಬ್ಬಯ್ಯ ಮುಖ್ಯ ಶಿಕ್ಷಕಿ ಛಾಯ ಬಿ.ಪವಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

