ಬೆಂಗಳೂರು ಗ್ರಾಮಾಂತರ

ಕಾವ್ಯಗಳಲ್ಲಿ ಜೀವಂತಿಕೆ ತುಂಬಬೇಕು

Published On :

ಆನೇಕಲ್ಲು: ಕಾವ್ಯಗಳು ಶಾಶ್ವತವಾಗಿ ಉಳಿಯಬೇಕೆಂದರೆ ಸ್ವಂತ ಅನುಭವದ ಜೊತೆಗೆ ಇತರ ಸಾಹಿತ್ಯದ ಆಳವನ್ನು ಅರಿಯುವ ಕೃಷಿ ಮಾಡಬೇಕೆಂದು ಚಿಂತಕ, ಲೇಖರ ಶೂದ್ರ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಆಶ್ರಮದಲ್ಲಿ ಏರ್ಪಡಿಸಿದ್ದ ಕಾವ್ಯ ಕಮ್ಮಟ ಹಾಗೂ ಕಾವ್ಯಾನು ಸಂಧಾನದಲ್ಲಿ ಯುವ ಕವಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಓದಿನ ಕ್ರಮ, ಆಲೋಚನೆಗಳು ಹಾಗೂ ಗ್ರಹಿಕಾ ಶಕ್ತಿಯನ್ನು ಒಂದೇ ಹಾದಿಯಲ್ಲಿ ಮೇಳೈಸಿ ರಚಿಸುವ ಕೃತಿಗಳು ಜೀವಂತಿಕೆಯ ಸನಿಹ ಸುಳಿಯುತ್ತವೆ. ಅದರಲ್ಲಿ ಪಕ್ವತೆ ಮೂಡಿ ಇತರರ ಮನದಾಳದಲ್ಲಿ ಬೇರೂರಲು ಜೀವನದ ಅನುಭವಗಳನ್ನು ಕಡಿಮೆ ಪದಗಳಲ್ಲಿ ಪ್ರಾಸಬದ್ಧವಾಗಿ ಪೋಣಿಸುವ ಕಲೆಯನ್ನು ಕರಗತ ಮಾಡಕೊಳ್ಳಬೇಕಿದೆ ಎಂಬ ಸಲಹೆ ನೀಡಿದರು.
ಕವಿಯತ್ರಿ ಪದ್ಮಿನಿ ನಾಗರಾಜು ತಮ್ಮ ಕೃತಿ ನಾನು ಮತ್ತು ನನ್ನೊಳಗಿನ ಕವಿತೆಗಳು ಬಗ್ಗೆ ಪ್ರಸ್ತಾಪ ಮಾಡಿ ನಮ್ಮೊಳಗಿನ ತಲ್ಲಣ, ಒಡನಾಟ ಹಾಗೂ ಆತಂಕಗಳು ನಮ್ಮನ್ನು ಓರೆಗೆ ಹಚ್ಚಿ ಕವನದ ಸಾಲುಗಳು ಮೂಡುತ್ತವೆ. ಪ್ರಾಮಾಣಿಕ ಬರವಣಿಗೆಯಿಂದ ಜೀವನದ ಎಲ್ಲ ಹಂತಗಳು ಘಟನೆಗಳನ್ನು ಕವನ ಗುಚ್ಛಗಳಾಗಿ ಸಿದ್ಧ ಪಡಿಸಬಹುದು ಎಂದರು. ರಮಣ ಮಹರ್ಷಿ ಟ್ರಸ್ಟಿ ಶ್ರೀನಿವಾಸರೆಡ್ಡಿ, ಸಂಯೋಜಕ ಮಹೇಶ್ ಊಗಿನಹಳ್ಳಿ, ಪತ್ರಕರ್ತ ಶಿವಣ್ಣ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.