ಶಾಲಾ ವಾಹನ ಅಪಘಾತ ತಡೆಗೆ ಉಚಿತ ತರಬೇತಿ
ಬೆಂಗಳೂರು: ಶಾಲಾ ವಾಹನಗಳು ಇತ್ತೀಚೆಗೆ ಹೆಚ್ಚು ಅಪಘಾತಕ್ಕೀಡಾಗುತ್ತಿದ್ದು, ಇದನ್ನು ತಡೆಗಟ್ಟುವ ಕುರಿತು ಉಚಿತ ತರಬೇತಿ ನೀಡಲಾಗುವುದು ಎಂದು ಗ್ರಾಮೀಣ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ. ನಟರಾಜು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುರಕ್ಷತೆಗೆ ಸಂಬಂಧಿಸಿ ವಾಹನಗಳಲ್ಲಿ ಅಳವಡಿಸುವ ಉಪಕರಣಗಳನ್ನು ಪೂರೈಸಲಾಗುವುದು. ಶಾಲಾ ವಾಹನಗಳ ಅಪಘಾತ ಪೋಷಕರಿಗೆ ಹಾಗೂ ಶಾಲಾ ಆಡಳಿತ ಮಂಡಳಿಗೆ ಆತಂಕಕ್ಕೀಡು ಮಾಡಿದೆ. ಇಂಥ ಅವಘಡಗಳನ್ನು ತಪ್ಪಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಉಚಿತ ತರಬೇತಿ ನೀಡಲಾಗುವುದು. ವಾಹನ ಸುರಕ್ಷತೆಗೆ ಸಂಬಂಧಿಸಿ ಸರ್ಕಾರ ಸೂಚಿಸಿದ ಉಪಕರಣಗಳ ಅಳವಡಿಕೆ ವ್ಯವಸ್ಥೆಗೆ ಪ್ರತಿಷ್ಠಾನ ಮುಂದಾಗಿದೆ ಎಂದು ಅವರು ಹೇಳಿದರು.ಸರ್ಕಾರದ ಆದೇಶದಂತೆ ಶಾಲಾ ವಾಹನಗಳಿಗೆ ಹಳದಿ ಬಣ್ಣ, ಶಾಲಾ ಚಿಹ್ನೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅಗ್ನಿಶಾಮಕ ಪೆಟ್ಟಿಗೆ, ಜಿಪಿಆರ್ಎಸ್, ಸ್ಪೀಡ್ ಗೌವರ್ನರ್ ಹಾಗೂ ಲಾಲಿಪಪ್ ಸಮವಸ್ತ್ರ ಸೇರಿದಂತೆ ಸಿ.ಸಿ. ಕ್ಯಾಮೆರಾ ಉಪಕರಣಗಳು ಇರಬೇಕೆಂದು ನಿಯಮವಿದೆ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ. ಸರ್ಕಾರದ ಆದೇಶದಂತೆ 10 ಉಪಕರಣಗಳ ಕಿಟ್ ಅನ್ನು ಪ್ರತಿಷ್ಠಾನದಿಂದ ಕಡಿಮೆ ವೆಚ್ಚದಲ್ಲಿ ವಾಹನಗಳಿಗೆ ಅಳವಡಿಸುವ ವ್ಯವಸ್ಥೆಯಿದೆ ಎಂದರು.ಮಾಹಿತಿ ಮತ್ತು ತರಬೇತಿಗಾಗಿ ಮೊ. 99801 26594.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

