ಬೆಂಗಳೂರು ಗ್ರಾಮಾಂತರ

ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ

Published On :

ಕನಕಪುರ: ಹಾರೋಹಳ್ಳಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಹಾಗೂ ಜಾತ್ರೆಗಳು ಮಾ. 14 ರಿಂದ 20 ರ ವರೆಗೆ ನಡೆಯಲಿದೆ. ಮಾ.14 ರಂದು ಅಂಕುರಾರ್ಪಣ, ಪಾದಪೂಜೆ, ಕುಂಕುಮಾರ್ಚನೆ, ಮಾ.15ರಂದು ಆರತಿ ಮತ್ತು ಅಭಿಷೇಕ, ಮಾ.16 ರಂದು ಪಾದಪೂಜೆ, ರಥೋತ್ಸವ, ಹೂವಿನಪಲ್ಲಕಿ ಉತ್ಸವ, ಮಾ.17 ರಂದು ಜಾತ್ರೆ ಮತ್ತು ಹೂವಿನಪಲ್ಲಕಿ ಉತ್ಸವ, ಮಾ.18 ಮತ್ತು 19 ರಂದು ಜಾತ್ರಾಮಹೋತ್ಸವ ಹೂವಿನಪಲ್ಲಕಿ ಉತ್ಸವಗಳು ನಡೆಯಲಿವೆ.

'ಮಾನವೀಯ ಮೌಲ್ಯಗಳ ಮರೆ'
ಕನಕಪುರ: ಇಂದಿನ ಉದಾರೀಕರಣ, ಜಾಗತೀಕರಣದ ಯುಗದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಯುವಕರು ವಿದ್ಯಾರ್ಥಿ ದಿಸೆಯಲ್ಲಿಯೇ ಮಾನವೀಯ ಗುಣಗಳನ್ನು, ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಬೆಂವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ಜಾನಪದ ತಜ್ಞ ಡಾ.ಗಂಗಾಧರ್ ತಿಳಿಸಿದ್ದಾರೆ.

ಫ್ಲೆಕ್ಸ್ ತೆರವುಗೊಳಿಸದೆ ಜಾಣಕುರುಡು ಪ್ರದರ್ಶನ
ಕನಕಪುರ: ಲೋಕಸಭಾ ಚುನಾವಣಾ ದಿನಾಂಕಗಳು ಘೋಷಣೆಯಾಗಿ ನೀತಿಸಂಹಿತೆ ಜಾರಿಗೊಂಡಿದ್ದರೂ ತಾಲೂಕು ಆಡಳಿತ ಸರ್ಕಾರದ ಜಾಹಿರಾತುಗಳು ಹಾಗೂ ಸವಲತ್ತುಗಳನ್ನು ಪ್ರಚುರಪಡಿಸುವ, ನಾಯಕರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸದೆ ಜಾಣಕುರುಡು ಪ್ರದರ್ಶಿಸುತ್ತಿದೆ.  ಕನಕಪುರ ಪಟ್ಟಣ, ಗ್ರಾಮಾಂತರ ಪ್ರದೇಶದ ಅನೇಕ ಹಳ್ಳಿಗಳಲ್ಲಿ ಹಾಗೂ ಹೋಬಳಿ ಕೇಂದ್ರಗಳಾದ ಹಾರೋಹಳ್ಳಿ, ಮರಳವಾಡಿ, ಸಾತನೂರು ಮೊದಲಾದ ಕಡೆಗಳಲ್ಲಿ ಸರ್ಕಾರದ ಜಾಹೀರಾತು ಫಲಕಗಳು ಪ್ರದರ್ಶನಗೊಳ್ಳುತ್ತಿವೆ. ಅಧಿಕಾರಿಗಳು ನೀತಿಸಂಹಿತೆ ಪಾಲಿಸದೆ ನಿರ್ಲಕ್ಷ್ಯ ವ್ಯಕ್ತಪಡಿಸುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.