'ಸಹಕಾರ ತತ್ವ ಸರಿದಾರಿಯಲ್ಲಿದ್ದಾಗ ಯಶಸ್ಸು ಸಾಧ್ಯ'
ನೆಲಮಂಗಲ: ಸಹಕಾರ ತತ್ವ ಸರಿದಾರಿಯಲ್ಲಿದ್ದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸಿ. ಸೋಮಶೇಖರ್ ತಿಳಿಸಿದರು.
ಅವರು ಭಾನುವಾರ ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಯು ಉದ್ದೇಶಿತ ಶ್ರೀ ಕೂಡಲಸಂಗಮ ವಿವಿಧೋದ್ದೇಶ ಸಹಕಾರ ಸಂಘದ ಷೇರು ಸಂಗ್ರಹಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಷೇರು ಸಂಗ್ರಹಣೆಗೆ ಚಾಲನೆ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಡಿ. ಪಾಲಾಕ್ಷಯ್ಯ ಸಂಘದ ಪ್ರವರ್ತಕರ ನಂಬಿಕೆ ಪ್ರಗತಿಗೆ ಪೂರಕ ಎಂದು ಅಭಿಪ್ರಾಯ ಪಟ್ಟರು. ಸಹಕಾರ ಸಂಘಗಳ ಜಿಲ್ಲಾ ನಿಬಂಧಕ ಲಕ್ಷ್ಮೀಪತಯ್ಯ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಮುನಿರಾಜು, ಸಹಾಯಕ ನಿಬಂಧಕ ಮೂಡಲಗಿರಿಯಪ್ಪ, ಸಂಘದ ಉದ್ದೇಶಗಳನ್ನು ವಿವರಿಸಿದರು. ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ 50 ಸಾವಿರ ಠೇವಣಿ ನೀಡಿ ಆಶೀರ್ವದಿಸಿದರು. ವಿಶ್ರಾಂತ ಕೃಷಿ ಆಯುಕ್ತ ಡಾ.ವಿ.ಚಂದ್ರಶೇಖರ್, ಬೆಂಗಳೂರು ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ಸಂಬ್ರಾಣಿ, ತಾಲೂಕು ಅಧ್ಯಕ್ಷ ಎಂ.ವಿ. ನೆಗಳೂರ, ದಾಸರಹಳ್ಳಿ ಸಂಘದ ಅಧ್ಯಕ್ಷ ಸಂಗಪ್ಪ ಚಂದಾಪುರ್, ಡಾ.ರಾಘವೇಂದ್ರ ಜೋಶಿ, ನೆಲದನಿ ಬಾನುಲಿ ಕೇಂದ್ರದ ನಿರ್ದೇಶಕ ವೆಂಕಟೇಶ್ ಚೌತಾಯಿ, ಕಾರ್ಯದರ್ಶಿ ಎಸ್.ಎಸ್. ಬಿರಾದರ್, ಸಂಚಾಲಕ ಮಲ್ಲಿಕಾರ್ಜುನ್ ಚಿಂದಿ, ಪ್ರವರ್ತಕ ಎಂ.ಸಿ.ಪಾಟೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

