ಮೋದಿ ಅಲೆ ಎಫೆಕ್ಟ್... ನಡೆದು ಬಂತು ಯುವ ಸಮೂಹ...
ಸೂಲಿಬೆಲೆ: ಲೋಕಸಭಾ ಕ್ಷೇತ್ರದ ಚುನಾವಣೆಯ ಬಿಸಿ ಬೇಸಿಗೆಯ ಬಿಸಿಯಂತೆ ಏರುತ್ತಿದೆ. ಮೋದಿ ಅಲೆ ಯುವ ಸಮೂಹವನ್ನು ಎಲ್ಲೆಡೆ ಆಕರ್ಷಣೆ ಮಾಡುತ್ತಿದ್ದು, ಸೂಲಿಬೆಲೆಯಲ್ಲಿ ಭಾನುವಾರ ನಡೆದ ಹೋಬಳಿ ಮಟ್ಟದ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಸೂಲಿಬೆಲೆ ಹೋಬಳಿಯ 5 ಗ್ರಾಪಂಗಳಿಂದ ಹರಿದು ಬಂದ ಸುಮಾರು 3ಸಾವಿರಕ್ಕೂ ಹೆಚ್ಚು ಜನರ ಬಾಯಲ್ಲಿ ಮೋದಿಯ ಹೆಸರೇ ಪ್ರಧಾನವಾಗಿತ್ತು. ಮೋದಿ ಟೀ ಶರ್ಟ, ಮೋದಿ ಭಾವ ಚಿತ್ರದ ಸ್ಟಿಕರ್ ಎಲ್ಲರ ಮೊಬೈಲ್ಗಳ ಮೇಲೆ ಅಂಟಿಸಿಕೊಳ್ಳುತ್ತಿದ್ದು ಕಂಡು ಬಂತು. ಒಂದೇ ರೀತಿಯಲ್ಲಿ ಮೋದಿಯ ಭಾವ ಚಿತ್ರದ ಟೀ ಶರ್ಟ ಧರಿಸಿದ ಹತ್ತಾರು ಯುವಕರು ಬೈಕ್ ರ್ಯಾಲಿ ಮೂಲಕ ಜನರಲ್ಲಿ ಮೋದಿ ಪ್ರಭಾವ ಎದ್ದು ಕಂಡಿತು.ನಾಯಕರ ಭಾಷಣದಲ್ಲಿ ಮೋದಿ, ಬಚ್ಚೇಗೌಡರ ಹೆಸರು ಕೇಳುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಜೋರಾಗಿತ್ತು. ಕಾಂಗ್ರೆಸ್ ನಾಯಕರು ಕಿರುಕುಳ, ಅಧಿಕಾರ ದುರ್ಬಳಕೆ, ಜಿದ್ದು ಸಾಧಿಸಿ ಬೆಜಿಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಪಕ್ಷದವರು ವಿನಾಕಾರಣ ಕೇಸುಗಳನ್ನು ಹಾಕಿಸುತ್ತಿರುವುದು, ಕಾಂಗ್ರೆಸ್ ದುರಾಡಳಿತ, ವಾಜಪೇಯಿ ಸರ್ಕಾರದಲ್ಲಿ ಮಾಡಿದ ಉತ್ತಮ ಅಭಿವೃದ್ಧಿ ಕೆಲಸ, ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ ಎಂಬುದು ನಾಯಕರ ಭಾಷಣದ ಹೈಲೈಟ್ಸ್ ಆಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

