'ಜಾನಪದ ಸಂಸ್ಕೃತಿ ಜೀವಂತಿಕೆಯ ಸಂಕೇತ'
ದೊಡ್ಡಬಳ್ಳಾಪುರ: ಜಾನಪದದ ಜೀವಂತಿಕೆ ಹಳ್ಳಿಗಾಡಿನಲ್ಲಿ ಉಳಿದಿದೆಯೇ ಹೊರತು ನಗರದಲ್ಲಿ ಅಲ್ಲ. ಜಾನಪದ ಸಂಸ್ಕೃತಿಯ ಜೀವಂತಿಕೆಯ ಪ್ರತೀಕ ಎಂದರೆ ಜನಪದ ಮಾತ್ರ ಎಂದು ಕನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಎನ್.ಸುಶೀಲ ಹೇಳಿದರು.
ತಾಲೂಕಿನ ಕನಸವಾಡಿ ಕ್ಷೇತ್ರದಲ್ಲಿ ಶ್ರೀಪ್ರತಿಭಾ ಜಾನಪದ ಕಲಾ ವೃಂದ, ಕನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಕಲಾ ಮಹೋತ್ಸವ 2013-14ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಬದುಕಿನ ಹಲವು ಸಂವೇದನೆಗಳು ಜನಪದದ ಜೀವಾಳ.
ಜಾತ್ರೆ, ಹಬ್ಬ-ಹರಿದಿನಗಳ ಮಹತ್ವವನು ಸಾರುವ ಮತ್ತು ಬದುಕಿನ ನಿಜವಾದ ಅರ್ಥವಂತಿಕೆಯನು
ಬೆಸೆಯುವ ಶಕ್ತಿ ಜಾನಪದಕ್ಕೆ ಮಾತ್ರ ಇದೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಜನಪದದ ಸೊಗಡು ಮರೆಯಾಗುತ್ತಿದೆ. ಜನಪದ ಕೇವಲ ಮನರಂಜನೆಯ ವಸ್ತುವಾಗುತ್ತಿರುವುದು ವಿಷಾದನೀಯ. ಜಾನಪದದ ಬಗ್ಗೆ ಸಂಶೋಧಿಸುತ್ತಿರುವವರು ಅತ್ಯಂತ ಜಾಗರೂಕತೆಯಿಂದ ಮೂಲ ಭಾವನೆಗಳಿಗೆ ಪೆಟ್ಟಾಗದಂತೆ ಕಲಾವಂತಿಕೆಯನು ಹಿಡಿದಿಡುವ ಪ್ರಯತ ಮಾಡಬೇಕಿದೆ ಎಂದರು.
ಮಧುರೆ ಶ್ರೀಶನಿದೇವರ ದೇವಾಲಯ ಅಧ್ಯಕ್ಷ ಜಿ.ಗೋಪಿನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಗುಡ್ಡದ ಆದಿಶಕ್ತಿ ಕ್ಷೇತ್ರದ ಶ್ರೀನರಸಿಂಹಮೂರ್ತಿ ಸ್ವಾಮೀಜಿ, ಡಾ.ಸಿದ್ಧರಾಜು ಸ್ವಾಮೀಜಿ, ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ, ಕಲಾವಿದ ರಾಮಚಂದ್ರ ಶ್ಯಾಕಲದೇವನಪುರ, ಪ್ರತಿಭಾ ಜಾನಪದ ಕಲಾ ವೃಂದ ಅಧ್ಯಕ್ಷ ಎಸ್.ಬಿ. ಹನುಮಂತರಾಯಪ್ಪ, ಆರ್.ಸಿ. ರಾಮಲಿಂಗಯ್ಯ, ಎಚ್.ರತಮ್ಮ, ಸಿ.ಮಹದೇವಸ್ವಾಮಿ, ಶಶಿಕುಮಾರ್, ಕಲಾವಿದೆ ಸುಶೀಲಮ್ಮ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಮೆರವಣಿಗೆ: ಗೊರವರ ಕುಣಿತ, ಹಗಲು ವೇಷ, ಪಟ ಕುಣಿತ, ಡ್ರಮ್ಸ್ ವಾದನ, ಕೀಲು ಕುದುರೆ, ಡೊಳ್ಳುಕುಣಿತ, ಸೋಮನ ಕುಣಿತ, ತಮಟೆ ವಾದನ, ಗಾರುಡಿ ಗೊಂಬೆ, ಅರೆವಾದನ, ಪೂಜಾ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಹಲವಾರು ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

