ಬೆಂಗಳೂರು ಗ್ರಾಮಾಂತರ

ಸುದ್ದಿ ಸಂಕ್ಷೇಪ

Published On :

ಡಾ.ರಾಜ್ ಕುಟುಂಬ ರಾಜಕೀಯ ಪ್ರವೇಶ ಬೇಡ
ಚನ್ನಪಟ್ಟಣ: ಡಾ.ರಾಜ್‌ಕುಮಾರ್ ಕುಟುಂಬ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಪ್ರವೇಶಿಸಬಾರದೆಂದು ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಗಚಗೆರೆ ನಾಗೇಶ್ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ ಕುಟುಂಬದ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಡಾ.ರಾಜ್‌ಕುಮಾರ್ ಅವರು ಎಂದಿಗೂ ರಾಜಕಾರಣ ಮಾಡಿದವರಲ್ಲ ಈ ಹಿನ್ನಲೆಯಲ್ಲಿ ರಾಜ್ ಕುಟುಂಬ ರಾಜಕೀಯವನ್ನು ಬಿಟ್ಟು ಸಿನಿಮಾ ಕ್ಷೇತ್ರದಲ್ಲೆ ಒಳ್ಳೆಯ ಹೆಸರು ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಸೆಂಟ್ರಿಂಗ್ ಮಳಿಗೆಗೆ ಬೆಂಕಿ: ಹಾನಿ
ಆನೇಕಲ್ಲು: ಅತ್ತಿಬೆಲೆ ಸಮೀಪದ ಕನ್ಲಾಲಿಡೇಟೆಡ್ ಕನ್‌ಸ್ಟ್ರಕ್ಷನ್ ಕಂಪನಿಗೆ ಸೇರಿದೆ ಸೆಂಟ್ರಿಂಗ್ ಮಳಿಗೆ ಇರುವ ಗೋದಾಮಿಗೆ ಬೆಂಕಿ ಬಿದ್ದು ಲಕ್ಷಾಂತರ ರು. ಬೆಲೆ ಬಾಳುವ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಹೊಗೆ ಕಟ್ಟಡವನ್ನು ಆವರಿಸುತ್ತಿದ್ದಂತೆ ನೆರೆ ಹೊರೆಯವರು ಬೆಂಕಿ ನಂದಿಸಲು ಪ್ರಯತ್ನ ಮಾಡಿ ಅಗ್ನಿಶಾಮಕ ಸಂಸ್ಥೆಗೆ ಕರೆ ಮಾಡಿದರು. ಆಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಬಹುತೇಕ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದವು. ಭಾನುವಾರ ರಜೆ ಕಾರಣ ಯಾವುದೇ ಕಾರ್ಮಿಕರು ಇರಲಿಲ್ಲ. ಅತ್ತಿಬೆಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ.
ದತ್ತಿ ಉಪನ್ಯಾಸ
ಚನ್ನಪಟ್ಟಣ:  ತಾಲೂಕು ಕಸಾಪ ವತಿಯಿಂದ ಮಾ.20 ರಂದು ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವೈಚಾರಿಕ ಚಿಂತನೆಗಳು ಕುರಿತಾದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.
ಅಮ್ಮನವರ ಹಬ್ಬ
ಚನ್ನಪಟ್ಟಣ ತಾಲೂಕಿನ ಚಕ್ಕೆರೆಯ ಚೌಡೇಶ್ವರಿ ಅಮ್ಮನವರ ಹಬ್ಬ ಕಾರ್ಯಕ್ರಮ ಮಾ.18 ಹಾಗೂ 19 ರಂದು ನಡೆಯಲಿದೆ.
ಜಾತ್ರಾಮಹೋತ್ಸವ  
ಚನ್ನಪಟ್ಟಣ: ತಾಲೂಕಿನ ಸುಳ್ಳೇರಿ ಗ್ರಾಮದ ಪಟ್ಟಲದಮ್ಮ ದೇವರ ಜಾತ್ರಾಮಹೋತ್ಸವ ಮಾ.21 ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ನಾಟಕ ಪ್ರದರ್ಶನ
ಚನ್ನಪಟ್ಟಣ: ತಾಲೂಕಿನ  ಮೆಂಗಹಳ್ಳಿ ಗ್ರಾಮದ ಸಿದ್ದೇಶ್ವರ ಕೃಪಾ ಪೋಷಿತ ನಾಟಕ ಮಂಡಲಿ ವತಿಯಿಂದ ಗ್ರಾಮದ ಸಿದ್ದೇಶ್ವರ ದೇವರ ಹಬ್ಬದ ಪ್ರಯುಕ್ತ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಮಾ.18 ರಂದು ಪ್ರದರ್ಶಿಸಲಾಗುವುದು.
ತೋಪಿನಲ್ಲಿ ಜೂಜು ಆಡುತ್ತಿದ್ದವರ ಬಂಧನ
ಆನೇಕಲ್ಲು: ನೀಲಗಿರಿ ತೋಪಿನಲ್ಲಿ ಜೂಜೂ ಆಡುತ್ತಿದ್ದ 6 ಜನರನ್ನು ಬಂಧಿಸಿದ ಆನೇಕಲ್ ಪೊಲೀಸರು 8100 ರು.ನಗದು ಮತ್ತು 2 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ತೋಪನ್ನು ಸುತ್ತುವರಿದು ಬಂಧಿಸಿದರು. ಯುವ ಸಮೂಹ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ತಿಳಿಸಿದ ಅವರು ಜೂಜು ಆಡುವುದು ಕಂಡು ಬಂದಲ್ಲಿ ತೀವ್ರ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಕಾರು-ದ್ವಿಚಕ್ರ ವಾಹನ ಡಿಕ್ಕಿ
ಆನೇಕಲ್ಲು: ನೇಕಲ್ ಠಾಣಾ ವ್ಯಾಪ್ತಿಯ ಬ್ಯಾಗಡದೇನಹಳ್ಳಿಯ ಬಳಿ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ತೀವ್ರ ಗಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗ್ರಾಮಸ್ಥರು ವಾಹನವನ್ನು ಅಡ್ಡಗಟ್ಟಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಬೇಕೆಂದರು. ಆನೇಕಲ್ ಪಿಎಸ್‌ಐ ದೂರು ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.