ಆಫ್ರಿಕನ್ ಕ್ಯಾಟ್ಫಿಷ್ ಹೊಂಡ ತೆರವು ಕಾರ್ಯಾಚರಣೆ
ಸೂಲಿಬೆಲೆ: ಪಟ್ಟಣದ ಸುತ್ತಮುತ್ತ ಸಾಕಣೆ ಮಾಡುತ್ತಿರುವ ನಿಷೇಧಿತ ಆಫ್ರಿಕನ್ ಕ್ಯಾಟ್ಫಿಷ್ ಹೊಂಡಗಳ ತೆರೆವಿಗೆ ಶನಿವಾರ ದಿಢೀರೆಂದು ಆಗಮಿಸಿದ ತಹಸೀಲ್ದಾರ್ ಕುಮಾರಸ್ವಾಮಿ ನೇತೃತ್ವದ ರೆವಿನ್ಯೂ ಅಧಿಕಾರಗಳ ತಂಡ 7ಕ್ಕೂ ಹೆಚ್ಚು ಹೊಂಡಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿತು. ಈ ವೇಳೆ ತೆರೆವಿಗೆ ವಿರೋಧ ವ್ಯಕ್ತಪಡಿಸಿದ ಫಿಷ್ ಸಾಕಣೆದಾರರು ಅಧಿಕಾರಗಳ ಮೇಲೆ ಮುಗಿ ಬೀಳಲು ಯತ್ನಿಸಿದಾಗ ಮಾತಿನ ಚಕಮುಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಗತ್ಯ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಹೊಂಡದಲ್ಲಿರುವ ಮೀನು ತೆಗೆದುಕೊಳ್ಳಲು ಕಾಲಾವಕಾಶ ನೀಡಿ ಕಾರ್ಯಾಚರಣೆ ಮೊಟಕುಗೊಳಿಸಿ ವಾಪಸಾದರು. ಪಟ್ಟಣದ ಸುತ್ತ ನಿಷೇಧಿತ ಕ್ಯಾಟ್ಫಿಷ್ ಹೊಂಡಗಳನ್ನು ಕೆಲ ತಿಂಗಳ ಹಿಂದೇ ಜಿಲ್ಲಾಧಿಕಾರಿಗಳೇ ಮುಂದೆ ನಿಂತು ತೆರೆವು ಮಾಡಿ ಮುಂದಿನ ದಿನಗಳಲ್ಲಿ ಸಾಕಣೆ ಮಾಡದಂತೆ ಎಚ್ಚರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

