ಕಾಂಗ್ರೆಸ್, ಬಿಜೆಪಿ ಸಂಭ್ರಮ
ಕುಣಿಗಲ್: ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಜಯಭೇರಿ ಬಾರಿಸಿದ ಪರಿಣಾಮ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರೆ, ಬಿಜೆಪಿ ಕಾರ್ಯಕರ್ತರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿವಿತರಿಸಿ ಖುಷಿಪಟ್ಟರು.
ಬೆಳಗಿನಿಂದಲೇ ಕಾರ್ಯಕರ್ತರುಗಳು ಟಿವಿಗಳ ಮುಂದೆ ಆಸೀನರಾಗಿ ಚುನಾವಣೆ ಫಲಿತಾಂಶಗಳನ್ನು ಕುತೂಹಲದಿಂದ ಗಮನಿಸತ್ತಿದ್ದು, ಈ ಮಧ್ಯೆ ಹಲವು ಬಾರಿ ವಿದ್ಯುತ್ ಕಡಿತ ಉಂಟಾಗಿ ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕಿದರು. ಮೊದಲು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾಗಿರುವುದು ಘೋಷಣೆಯಾಗುತ್ತಿದ್ದಂತೆ ಪುರಸಭೆ ಸದಸ್ಯ ರಂಗಸ್ವಾಮಿ, ಚಂದ್ರಶೇಖರ್ ಇತರರು ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಪುರಸಭೆ ಬಸ್ ನಿಲ್ಜಾಣದಲ್ಲಿ ಸಂಚರಿಸುವವರಿಗೆಲ್ಲಾ ಸಿಹಿ ವಿತರಿಸಿ ಸಂಭ್ರಮಿಸಿದರು.
ನಂತರ ತುಮಕೂರು ಕ್ಷೇತ್ರದ ಫಲಿತಾಂಶ ಘೋಷಣೆಯಾಗಿ ತಾಲೂಕಿನವರೆ ಆದ ಎಸ್.ಪಿ.ಮುದ್ದಹನುಮೇಗೌಡರು ವಿಜಯಿಯಾದ ಹಿನ್ನೆಲೆಯವಲ್ಲಿ ಕಾರ್ಯಕರ್ತರು ಕೋಟೆ ಪ್ರದೇಶ, ಕೆ.ಅರ್.ಎಸ್ ಅಗ್ರಹಾರ ಸೇರಿದಂತೆ ವಿವಿಧೆಡೆಯಲ್ಲಿ ಪಟಾಕಿ ಸಿಡಿಸಿ, ಸಿಹಿವಿತರಿಸಿದರೆ ಗುಜ್ಜಾರಿ ಮೊಹಲ್ಲಾದಲ್ಲಿ ಮುಖಂಡ ಎಲೈಸಿ ಬಾಬು ನೇತೃತ್ವದಲ್ಲಿ ಭರ್ಜರಿ ವಿಜಯೋತ್ಸವ ಅಚರಿಸಿದ್ದು ವಿಜಯೋತ್ಸವದಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇತ್ತ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಲುಂಡರೆ, ಅತ್ತ ಕೇಂದ್ರದಲ್ಲಿ ನಮೋ ನೇತೃತ್ವದ ಬಿಜೆಪಿ ನೇತೃತ್ವದ ಎನ್‌ಡಿಎ ನಿರೀಕ್ಷೆಗೂ ಮೀರಿ ಅತ್ಯಧಿಕ ಸ್ಥಾನ ಗಳಿಸಿ, ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾದ್ದರಿಂದ ಸಂತಸಗೊಂಡ ಬಿಜೆಪಿ ಕಾರ್ಯಕರ್ತರಾದ ರಂಗನಾಥ, ರಮೇಶ್, ನಾಗರಾಜು, ಗೋಪಿ, ನರಸಿಂಹ ಇತರರು ಪಟಾಕಿ ಸಿಡಿಸಿ, ಸಿಹಿ ವಿತರಿಸಿದರಲ್ಲದೆ ನಮೋ ಪ್ರಮಾಣವಚನ ಸ್ವೀಕರಿಸುವ ದಿನದಂದು ಐದು ಸಾವಿರ ಲಾಡುಗಳನ್ನು ಉಚಿತವಾಗಿ ಹಂಚಲಾಗುವುದೆಂದು ಘೋಷಿಸಿದರು. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷ ಸ್ಥಳೀಯವಾಗಿ ಗೆದ್ದ ಖುಷಿಯಲ್ಲಿದ್ದರೆ, ಬಿಜೆಪಿ ಕಾರ್ಯಕರ್ತರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಖುಷಿಯಲ್ಲಿ ತೇಲುತ್ತಿದುದು ವಿಶೇಷವಾಗಿತ್ತು.
ತುಮಕೂರು ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಎಸ್.ಪಿ. ಮುದ್ದಹನುಮೇಗೌಡರ ಸ್ವಗ್ರಾಮವಾದ ತಾಲೂಕಿನ ಸೋಬಗಾನಹಳ್ಳಿಯಲ್ಲಿ ಗ್ರಾಮದ ಜನತೆ ತಮ್ಮೂರಿನವರೊಬ್ಬರು ಸಂಸದರಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಿಜಯೋತ್ಸವ ಅಚರಿಸಿ, ಗ್ರಾಮದೇವತೆಯಾದ ಅಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

