ಬೆಂಗಳೂರು ಗ್ರಾಮಾಂತರ

ದೃಶ್ಯ ಮಾಧ್ಯಮಗಳಿಂದ ರಂಗ ಕಲೆ ನಶಿಸುತ್ತಿದೆ

Published On :

ನೆಲಮಂಗಲ: ರಾಜರ ಕಾಲದಿಂದಲೂ ರಾಜಾಶ್ರಯ ಪಡೆದು ಕಲೆ ಮತ್ತು ಸಂಸ್ಕೃತಿ ಉತ್ತುಂಗ ಸ್ಥಿತಿಯಲ್ಲಿತ್ತು. ಆದರೆ ಇಂದು ದೃಶ್ಯ ಮಾಧ್ಯಮಗಳಿಂದ ರಂಗ ಕಲೆ ಮತ್ತು ಜನಪದ ಕಲೆಗಳು ನಶಿಸುತ್ತಿವೆ. ಇದರಿಂದ ಈ ಕಲೆಯನ್ನೆ ನಂಬಿದ್ದ ಸಾಕಷ್ಟು ಕುಟುಂಬಗಳು ಸಂಕಷ್ಟದ ಹಾದಿಯಲ್ಲಿವೆ ಎಂದು ಛಾಯತ್ಮಜ ಕಲಾವೃಂದ ಟ್ರಸ್ಟ್‌ನ ಕಾರ್ಯದರ್ಶಿ ನರಸಿಂಹಮೂರ್ತಿ ತಿಳಿಸಿದರು.
ಅವರು ಭಾನುವಾರ ತಾಲೂಕಿನ ಸೋಂಪುರ ಹೋಬಳಿಯ ನರಸೀಪುರದಲ್ಲಿ ನಡೆದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಆತ್ಮರಾಮ ನಾಟಕ ಮಂಡಲಿ ಮತ್ತು ಛಾಯತ್ಮಜ ಕಲಾವೃಂದ ಟ್ರಸ್ಟ್ ಅವರು ಸಮಾಜ ಸೇವಕ ಕಂಬಾಳು ನಾಗೇಶ್‌ಕುಮಾರ್ ಅವರಿಗೆ ಕಲಾ ಪೋಷಕರತ್ನ ಬಿರುದು ಪ್ರದಾನ ಮತ್ತು ಭಿನ್ನವತ್ತಳೆ ನೀಡಿ ಗೌರವಿಸಿ ಮಾತನಾಡಿದರು.
ನಶಿಸುತ್ತಿರುವ ಜನಪದ ಸಾಹಿತ್ಯ ಮತ್ತು ಕಲೆ ಹಾಗೂ ರಂಗ ಕಲೆಗಳು ಸಹ ಸರ್ಕಾರದ ಪ್ರೋತ್ಸಾಹವಿಲ್ಲದೆ ವೃತ್ತಿ ಕಲಾವಿದರು ಕಂಗಾಲಾಗಿದ್ದು ಕುಟುಂಬ ನಿರ್ವಹಣೆಯನ್ನು ನಡೆಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಿಗಳು ಈ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಕೆಲವು ಭಾಗಗಳಲ್ಲಿ ನಾಟಕ ಕಲಾವಿದರು ಇನ್ನು ತಮ್ಮ ಕಲೆಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ ಎಂದರು.
ರಾಜ್ಯ ಸರ್ಕಾರ ವೃತ್ತಿ ಕಲಾವಿದರನ್ನು ಮತ್ತು ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಶ್ವತ ಯೋಜನೆ ರೂಪಿಸಿ ಕರ್ನಾಟಕದ ಹೆಸರಾಂತ ಕಲೆಗಳನ್ನು ಹಾಗೂ ಜನಪದ ಕಲೆಗಳನ್ನು ರಕ್ಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಕಲಾ ಪೋಷಕರತ್ನ ಬಿರುದು ಸ್ವೀಕರಿಸಿ ಮಾತನಾಡಿದ ಕಂಬಾಳು ನಾಗೇಶ್‌ಕುಮಾರ್ ಪ್ರತಿ ಮನುಷ್ಯರಲ್ಲಿಯೂ ಒಂದಲ್ಲ ಒಂದು ಕಲೆ ಇರುತ್ತದೆ. ಈ ಕಲೆಯನ್ನು ಪ್ರದರ್ಶಿಸುವುದರಿಂದ ಮನಸ್ಸಿನ ಉಲ್ಲಾಸ ಸಂತೋಷವು ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ. ಅದಕ್ಕಾಗಿ ಕಲಾವಿದರು ಸಮಸ್ಯೆಗಳಿದ್ದರೂ ತಮಗಾಗಿಯಲ್ಲದಿದ್ದರೂ ಇತರರ ಸಂತೋಷಕ್ಕಾಗಿಯಾದರೂ ಕಲೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು. ಮುಂದೆ ಕಲಾವಿದರಿಗೂ ಉತ್ತಮ ಕಾಲ ಬರುತ್ತದೆ. ಅಷ್ಟು ಕಾಲವಾದರೂ ತಮ್ಮಲ್ಲಿಯ ಕಲೆಯನ್ನು ಕುಟುಂಬ ಸದಸ್ಯರಿಗೆ ಧಾರೆಯೆರೆದು ಕಾಪಾಡಿಕೊಂಡು ಬರುವಂತೆ ತಿಳಿಸಿದರು.
 ಟ್ರಸ್ಟ್‌ನ ಅಧ್ಯಕ್ಷ ಬಸವರಾಜು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪುಟ್ಟರುದ್ರಾರಾಧ್ಯ, ಹೊನ್ನಸ್ವಾಮಿ, ರಾಜಣ್ಣ, ಮುಖಂಡರಾದ ಚನ್ನಿಗಪ್ಪ, ಹೊನ್ನರಾಜು, ರವಿಕುಮಾರ್, ನಾಗರಾಜಮೂರ್ತಿ, ಪ್ರಧಾನ ಕಾರ್ಯದರ್ಶಿ ಸುರೇಶ್, ಸಿದ್ದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.