ಬೆಂಗಳೂರು ಗ್ರಾಮಾಂತರ

ತಾಲೂಕು ಮಟ್ಟದ ಭೂಚೇತನ ತರಬೇತಿ ಕಾರ್ಯಾಗಾರ

Published On :

ದೇವನಹಳ್ಳಿ: ಇಲ್ಲಿನ ಕೃಷಿ ಇಲಾಖೆ ವತಿಯಿಂದ 2014-15 ನೇ ಸಾಲಿನಲ್ಲಿ ರೈತರಿಗಾಗಿ ತಾಲೂಕು ಮಟ್ಟದ ಭೂಚೇತನ ತರಬೇತಿ ಕಾರ್ಯಕ್ರಮ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
   ಮುಖ್ಯ ಅತಿಥಿಗಳಾಗಿ ಶಾಸಕ ಪಿಳ್ಳಮುನಿಶಾಮಪ್ಪ ಆಗಮಿಸಿ ರೈತಬಾಂಧವರಿಗೆ ಉಪಯೋಗವಾಗುವಂತಹ ಕೃಷಿ ಇಲಾಖೆಯಿಂದ ಕಾಲಕಾಲಕ್ಕೆ ಆಯೋಜಿಸುವ ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಣ್ಣಿನ ಫಲವತ್ತತೆ ಜೊತೆಗೆ ಬೆಳೆಗಳ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
    ಕೃಷಿ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯಬೇಕಾದಲ್ಲಿ ರೈತರು ತಮ್ಮ ಜಮೀನಿಗೆ ಸಂಬಂಧ ಪಟ್ಟ ಪಹಣಿಯನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
   ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್. ರವಿಕುಮಾರ್ ನೆರವೇರಿಸಿ ರೈತರಿಗೆ ಅಗತ್ಯವಾಗಿರುವ ಇಂತಹ ತರಬೇತಿ ಕಾರ್ಯಕ್ರಮಗಳು ಕೆಲವೇ ರೈತರಿಗಾಗಿ ಮಾಡದೆ ತಾಲೂಕು ಮಟ್ಟದ ಪ್ರಜಾಪ್ರನಿಧಿಗಳ ಸಹಕಾರದೊಂದಿಗೆ ಹೆಚ್ಚು ರೈತರು ಭಾಗವಹಿಸುವಂತೆ ಅಧಿಕಾರಿಗಳು ಗಮನ ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ. ಶಿವಪ್ಪ ಮಾತನಾಡಿ ರೈತರ ತರಬೇತಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಆಗಬಾರದು. ಅಲ್ಲದೆ ರೈತರ ಜಮೀನು ಬರಡಾಗುವುದಕ್ಕೆ ಅವಕಾಶ ನೀಡಬಾರದು.
   ಯಾವುದೇ ಬೆಳೆಗಳನ್ನು ಬೆಳೆಯಲು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಪ್ರೇರೇಪಣೆ ನೀಡಬೇಕು ಎಂದರು.
   ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪಟಾಲಪ್ಪ ಮಾತನಾಡಿದರು.   ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಸದಸ್ಯರುಗಳಾದ ಬಿ.ವಿ. ಲಕ್ಷ್ಮೀನರಸಿಂಹಸ್ವಾಮಿ, ನಟರಾಜು, ದೇವರಾಜ್, ಆನಂದ, ರಾಕೇಶ್, ಬಿಸೇಗೌಡ, ಹೆಚ್.ಎಂ. ರವಿಕುಮಾರ್ ನಾರಾಯಣಸ್ವಾಮಿ ಹಾಗೂ ತಾಲೂಕು ಪಂಚಾಯಿತಿ ಇಒ ಕೃಷ್ಣಪ್ಪ ಲೋಹಾರ್ ಉಪಸ್ಥಿತರಿದ್ದರು.
   ಸಹಾಯಕ ಕೃಷಿ ನಿರ್ದೇಶಕರಾದ ವಿನೋದಮ್ಮ ಭೂ ಚೇತನ ಯೋಜನೆಯ ಪರಿಚಯ ಮಾಡಿದರು. ಹಾಡೋನಹಳ್ಳಿಯ ಜಿಲ್ಲಾ ಕೃಷಿ ಸಂಶೋಧನ ಕೇಂದ್ರದ ನವೀನ್ ಮಣ್ಣಿನ ಫಲವತ್ತತೆ ಕಾಪಾಡುವುದರ ಬಗ್ಗೆ ಹಾಗೂ ಪೋಷಕಾಂಶಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.   ಕೃಷಿ ಅಧಿಕಾರಿ ವೆಂಕಟೇಶಯ್ಯ ಸ್ವಾಗತ ಕೋರಿದರು. ಸಹಾಯಕ ಕೃಷಿ ಅಧಿಕಾರಿ ಮೈತ್ರಿ ನಿರೂಪಣೆ ಮಾಡಿದರು, ಸಿದ್ದಲಿಂಗಯ್ಯ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.