ಬೆಂಗಳೂರು ಗ್ರಾಮಾಂತರ

ಆಶ್ರಯ ಫಲಾನುಭವಿಗೆ ಹಕ್ಕುಪತ್ರ ನೀಡಿ: ಶಾಸಕ

Published On :

ಆನೇಕಲ್ಲು: ಸತತ 10 ವರ್ಷಗಳಿಂದ ವಾಸಿಸುತ್ತಿರುವ ಅರ್ಹ ನಿವಾಸಿಗಳಿಗೆ ಮನೆಯ ಹಕ್ಕು ಪತ್ರಗಳನ್ನು ನೀಡಬೇಕೆಂದು ವಂಪಲಘಟ್ಟ ತಿರುವಿನ ಬಳಿಯ ಆಶ್ರಯ ಮನೆಗಳ ಬಡ ಜನತೆ ಶಾಸಕ ಬಿ. ಶಿವಣ್ಣರವರಿಗೆ  ಮನವಿ ಮಾಡಿದರು.
ಅವರು ಆಶ್ರಯ ಕಾಲನಿಯಲ್ಲಿ ಪುರಸಭಾ ನಿಧಿಯಿಂದ ಅಳವಡಿಸಿದ ಹೈ ಮಾಸ್ ದೀಪದ ಬಟನ್ ಒತ್ತುವ ಮೂಲಕ ಚಾಲನೆ ನೀಡಿದಾಗ ಬಹುತೇಕ ಮಹಿಳೆಯರು ಶಾಸಕರನ್ನು ಸುತ್ತವರಿದು ಚುನಾವಣೆ ನಂತರ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದಿರಿ. ದಯಮಾಡಿ ಪುರಸಭೆಗೆ ಆದೇಶ ನೀಡಿ ಬಡ ಜನರ ಜೀವಿತ ಕಾಲದ ಆಸೆಯನ್ನು ನೆರವೇರಿಸಬೇಕೆಂದರು.
ಶಾಸಕ ಶಿವಣ್ಣ ಮಾತನಾಡಿ ಅಂದಾಜು ರು. 4 ಲಕ್ಷ ವೆಚ್ಚದಲ್ಲಿ ಹೈ ಮಾಸ್ ದೀಪ ಹಾಗೂ 4 ಬೀದಿಗೆ ಸೋಡಿಯಂ ದೀಪಗಳನ್ನು ಅಳವಡಿಸಲಾಗಿದೆ. 4 ರಸ್ತೆಗಳಿಗೆ ಡಾಂಬರೀಕರಣ ಮಾಡಿ ಡ್ರೈನೇಜ್ ಮಾಡಲಾಗಿದೆ. ದಿನ ಬಿಟ್ಟು ದಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸ್ವಲ್ಪ ದಿನದಲ್ಲೇ ಹಕ್ಕು ಪತ್ರ ನೀಡುವ ಏರ್ಪಾಡು ಮಾಡಲಾಗುವುದು ಎಂದರು.
ಬೇರ್ಪಡಿಸಿ: ಪುರಸಭಾ ಅಧ್ಯಕ್ಷ ಭದ್ರರೆಡ್ಡಿ ಮಾತನಾಡಿ ಆನೇಕಲ್ಲಿನ ಎಲ್ಲ ವಾರ್ಡುಗಳ ಕಸ ಸಂಗ್ರಹಣೆ ಮತ್ತು ವಿಲೆಗಾಗಿ ಎರಡು ಮಿನಿ ಆಟೋ ಟಿಪ್ಪರ್‌ಗಳನ್ನು ಖರೀದಿಸಿದ್ದು ಮನೆ ಮನೆ ಬಳಿ ಬರುತ್ತದೆ. ಜನತೆ ಮನೆಯಲ್ಲಿ ಕಸವನ್ನು ಹಸಿ ಕಸ ಹಾಗೂ ಒಣಗಿದ ಕಸ ಎಂದು ವಿಂಗಡಿಸಿ ವಾಹನಕ್ಕೆ ಹಾಕಬೇಕೆಂದು ಕೋರಿದರು. ಬಳಸಿದ ಪ್ಲಾಸ್ಟಿಕ್, ಡ್ರೈ ಬ್ಯಾಟರಿ, ಒಡೆದ ಗಾಜಿನ ಚೂರುಗಳು ಹಾಗೂ ಖಾಲಿ ಬಾಟಲ್‌ಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಕಸದ ಬುಟ್ಟಿಗೆ ಹಾಕಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ಮೋಹನ್ ಮಾತನಾಡಿ  ಒಳ ಚರಂಡಿ ಕಾಮಗಾರಿ ನಡೆಯುತ್ತಿರುವ ಕೆಲ ವಾರ್ಡಿನಲ್ಲಿ ಜನ ಸಾಮಾನ್ಯರು ಓಡಾಡಲು ತೊಂದರೆಯಾಗಿದ್ದು ಆದ್ಯತೆ ಮೇಲೆ ಸರಪಡಿಸಲಾಗುವುದು. ಪುರರಸಭೆಯ ಹಣ, ಶಾಸಕರ ನಿಧಿ ಹಾಗೂ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳ ನಿಧಿಯ ಸಮರ್ಪಕ ಬಳಕೆ ಮಾಡುವುದು ಪ್ರತಿ ವಾರ್ಡಿಗೊಂದರಂತೆ 23 ಬೋರ್‌ವೆಲ್ ಕೊರೆಸುವುದು ಹಾಗೂ ಬಂದ ನಿಧಿಯನ್ನು ಎಲ್ಲ ವಾರ್ಡುಗಳ ಅಭಿವೃದ್ಧಿಗೆ ಸಮನಾಗಿ ಹಂಚುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು ಎಂದರು.
ಪುರಸಭಾ ಮುಖ್ಯಾಧಿಕಾರಿ ಬಿ.ಎಸ್. ಸುಮಾ, ಅಧೀನ ಅಧಿಕಾರಿಗಳು, ಪುರಸಭಾ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.