'ಸಹಕಾರ ಸಂಘಗಳು ಪಾರದರ್ಶಕವಾಗಿರಬೇಕು'
ಆನೇಕಲ್ಲು: ತಾಲೂಕು ಖಾದಿ ಗ್ರಾಮೋದ್ಯೋಗ ಕಸುಬುದಾರರ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ, ವಿಶಾಲ ಆವರಣ ಸೇರಿದಂತೆ ಸಂಪೂರ್ಣ ಆಸ್ತಿ ಸಂರಕ್ಷಣೆ ಮಾಡುವುದು ಹಾಗೂ ಆರ್ಥಿಕ ವ್ಯವಹಾರಗಳಿಗೆ ಚ್ಯುತಿಯಾಗದಂತೆ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಹಕಾರ ಸಂಘಗಳ ಜಿಲ್ಲಾ ನಿಬಂಧಕ ನರಸಿಂಹಮೂರ್ತಿ ಆದೇಶ ನೀಡಿದ್ದಾರೆ.
ಅವರು ಸದಸ್ಯ ಕೀರ್ತಿ ಕುಮಾರ್ ನೀಡಿದ ದೂರಿನ ಅನ್ವಯ ತನಿಖೆಗೆ ಸಹಾಯಕ ನಿರ್ದೇಶಕ ಟಿ. ಭಾಸ್ಕರ್ ಜತೆ ಬಂದು ಪರಿಶೀಲನೆ ನಡೆಸಿ ಮಾತನಾಡಿ, ಸಹಕಾರ ಸಂಸ್ಥೆಗೆ ಲಿಕ್ವಿಡೇಟರ್ ನೇಮಕ ನಂತರ ಕಾರ್ಯಕಾರಿ ಸಮಿತಿಗೆ ಹೆಚ್ಚು ಮಹತ್ವ ಇರುವುದಿಲ್ಲ.
ಪ್ರತಿ ವರ್ಷಕ್ಕೊಮ್ಮೆ ಮಹಾ ಸಭೆ ನಡೆಯಬೇಕು ಎಲ್ಲ ಸದಸ್ಯರಿಗೆ ಮಾಹಿತಿ ನೀಡಬೇಕು. ಚುನಾವಣೆ, ಬಯಲಾ ತಿದ್ದುಪಡಿ, ಷೇರು ಖಾತೆ, ವಹಿವಾಟು ಮುಂತಾದವುದಗಳನ್ನು ಆಗಿಂದ್ದಾಗ್ಗೆ ಪರಿಶೀಲಿಸಿ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕರ್ತವ್ಯ ನಿರತ ಅಧಿಕಾರಿಯಾಗಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಲ್ಲಿ ಲೋಪ ಕಂಡು ಬಂದಿದ್ದು ನಿಮ್ಮ ಮೇಲೆ ಯಾಕೆ ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿದರು.
ಸಂಘದ ಕಟ್ಟಡದ ಬಾಡಿಗೆಯನ್ನು ನೇರ ಖಾತೆಗೆ ಜಮಾ ಮಾಡಬೇಕು. ಪುರಸಭೆ ವತಿಯಿಂದ ಧಾರ್ಮಿಕ ಸಂಸ್ಥೆಗೆ ನೀಡಿದ ಭೂಮಿಯನ್ನು ಮರಳಿ ಪಡೆಯಲು ಪತ್ರ ವ್ಯವಹಾರ ಮಾಡಬೇಕು. ಮಾಸಿಕ ಸಭೆ ನಡೆಸಬೇಕು ಸೇರಿದಂತೆ ಸಹಕಾರ ತತ್ವದ ನಿಯಮಗಳ ಪಾಲನೆಗೆ ಉಪಯುಕ್ತ ಸೂಚನೆ ನೀಡಿದರು.
ಕೀರ್ತಿಕುಮಾರ್ ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಅವರು, ಮೇಲ್ನೋಟಕ್ಕೆ ಕೆಲವು ನ್ಯೂನತೆ ಕಂಡು ಬಂದಿದ್ದು, ಸಹಕಾರ ತತ್ವದಡಿ ಪರಿಹರಿಸಿಕೊಳ್ಳಲು ತಿಳಿಸಿದರು.
ಸಂಘದ ಅಧ್ಯಕ್ಷ ವೇಣುಗೋಪಾಲ್, ನಿರ್ದೇಶಕರಾದ ಸಿ.ಕೆ. ಜಗನ್ನಾಥ್, ಸದಸ್ಯರಾದ ಮಂಜುನಾಥ್, ಸತೀಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

