8 ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಕ್ಕೆ
ದೊಡ್ಡಬಳ್ಳಾಪುರ: ಕಳೆದ 8 ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಭೇದಿಸಿರುವ ಪೊಲೀಸರು ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಲೇಔಟ್ ಒಂದರಲ್ಲಿ ಕೊಲೆ ಮಾಡಿ ಹೂತು ಹಾಕಿದ್ದ ಶವವನ್ನು ಹೊರತೆಗೆದು ಪರಿಶೀಲಿಸಿದ್ದಾರೆ. ಸಣ್ಣಪತ್ರಿಕೆ (ಪತ್ರಿಕಾ ಲೋಕ)
ಯೊಂದರ ಸಂಪಾದಕ ರಾಜಾಜಿನಗರ ನಿವಾಸಿ ಶ್ರೀನಿವಾಸನಾಯಕ್(29) ಕೊಲೆಯಾಗಿದ್ದ ದುರ್ದೈವಿ. ಈ ಸಂಬಂಧ ಶ್ರೀನಿವಾಸನಾಯಕ್ ಹೆಂಡತಿ ತಮ್ಮಂದಿರಾದ ತಾಲೂಕಿನ ಕೆಳಗಿನನಾಯಕರಂಡಹಳ್ಳಿ ಗ್ರಾಮದ ರವಿನಾಯಕ್, ಸಂತೋಷ್‌ನಾಯಕ್ ಮತ್ತು ಸೋದರ ಸಂಬಂಧಿ ನಟರಾಜ್‌ನಾಯಕ್ ಅವರನ್ನು ಬಂಧಿಸಲಾಗಿದೆ. ತಹಸೀಲ್ದಾರ್ ಸಿದ್ದಲಿಂಗಯ್ಯ, ಡಿವೈಎಸ್ಪಿ ಕೋನಪ್ಪರೆಡ್ಡಿ, ವೃತ್ತ ಆರಕ್ಷಕ ನಿರೀಕ್ಷಕ ಶಿವಾರೆಡ್ಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ.
ಕಳೆದ ಐದಾರು ವರ್ಷಗಳ ಹಿಂದೆ ಕೊಲೆಯಾದ ಆತ, ದೊಡ್ಡಬಳ್ಳಾಪುರದ ನಾಯಕರಂಡಹಳ್ಳಿ ಗ್ರಾಮದ ಸೋದರ ಸಂಬಂಧಿ ಪದ್ಮಾವತಿಯನ್ನು ಮದುವೆಯಾಗಿದ್ದ. ಆದರೆ ರಾಜಾಜಿನಗರದಿಂದ ಹೆಂಡತಿ ಆಗಾಗ ಹೇಳದೆ, ಕೇಳದೆ ತವರು ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ಗಂಡನೇ ಬಂದು ಕರೆದುಕೊಂಡು ಹೋಗುತ್ತಿದ್ದ.
ಕಳೆದ 1ವರ್ಷದ ಹಿಂದೆ ಅದೇ ರೀತಿ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದಾಗ ಮೈದುನರು ಹಲ್ಲೆ ಮಾಡಿದ್ದರು. ಈ ಕುರಿತು ಶ್ರೀನಿವಾಸನಾಯಕ್ ಪ್ರಾಣರಕ್ಷಣೆ ಕೋರಿ ಎಸ್ಪಿ ಕಚೇರಿಗೆ ದೂರು ನೀಡಿದ್ದರು ಎನ್ನಲಾಗಿದೆ. ನಂತರ ಶ್ರೀನಿವಾಸ್‌ನಾಯಕ್, ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದ ವರದಿಯೊಂದು ಭಾವ-ಮೈದುನರ ನಡುವೆ ದ್ವೇಷಕ್ಕೆ ಕಾರಣವಾಗಿತ್ತು. ಸಮಯ ಕಾದು ಆತನನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿ ತಾಲೂಕಿನ ಮಾದಗೊಂಡನಹಳ್ಳಿ ಗ್ರಾಮದ ರಸ್ತೆ ಬಳಿ ಹೂತುಹಾಕಲಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಶ್ರೀನಿವಾಸನಾಯಕನ ತಾಯಿ, ಮಗ ಕಳೆದು ಹೋದ ಕುರಿತು ದೂರು ನೀಡಿದ್ದರು. 3 ತಿಂಗಳ ನಂತರ ಅಪಹರಣ ಪ್ರಕರಣ ದಾಖಲಾಗಿತ್ತು.
ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 8 ತಿಂಗಳ ನಂತರ ಪ್ರಕರಣ ಭೇದಿಸುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿರುವ ಡಿವೈಎಸ್ಪಿ ಕೋನಪ್ಪರೆಡ್ಡಿ, ಈ ಬಗ್ಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಲಾಗುವುದು. ನಂತರ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

