ಕ.ಪ್ರ.ವಾರ್ತೆ, ಬೆಂಗಳೂರು, ಡಿ.22-
ಲಾರಿ ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ನಡೆಸಿರುವದುಷ್ಕರ್ಮಿಗಳ ತಂಡವೊಂದು 440 ಸಿಮೆಂಟ್ ಮೂಟೆಗಳೊಂದಿಗೆ ಲಾರಿಯನ್ನು ಅಪಹರಿಸಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ ಆಂಧ್ರಪ್ರದೇಶ ಮೂಲದ ಚಾಲಕ ತ್ರಿಲೋಕ್ ಹಾಗೂ ಕ್ಲೀನರ್ ಮಹ್ಮದ್ ರಫಿ ಎಂಬುವರು 440 ಸಿಮೆಂಟ್ ಮೂಟೆಗಳನ್ನು ಹಾಕಿಕೊಂಡು ತಮಿಳುನಾಡಿನ ಹೊಸೂರಿಗೆ ಹೋಗುತ್ತಿದ್ದರು. ಕನ್ನಮಂಗಲ ಗೇಟ್ ಬಳಿ ಹೋಗುತ್ತಿದ್ದಾಗ ಇಂಡಿಕಾ ಕಾರೊಂದು ಸಿಮೆಂಟ್ ಲಾರಿಯನ್ನು ಅಡ್ಡಗಟ್ಟಿದೆ. ಕಾರಿನಿಂದ ಇಳಿದ 6 ಜನ ದುಷ್ಕರ್ಮಿಗಳು ಚಾಲಕ ಹಾಗೂ ಕ್ಲೀನರ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಲಾರಿಯನ್ನು ಅಪಹರಿಸಿದ್ದಾರೆ. ದುಷ್ಕರ್ಮಿಗಳ ಪೈಕಿ ಮೂವರು ಲಾರಿಯನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಉಳಿದ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಚಾಲಕ ಹಾಗೂ ಕ್ಲೀನರ್ನನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.