ಬೆಂವಿವಿಯಲ್ಲಿ ಜಪಾನ್ ಹಬ್ಬ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಇಂದು ಸಂಪೂರ್ಣ ಜಪಾನ್ ಮಯವಾಗಿತ್ತು. ಎಲ್ಲೆಲ್ಲೂ ಜಪಾನ್ ಶೈಲಿಯ ಆಟಿಕೆಗಳು, ಜಪಾನ್ ದೇಶದ ಮಾಹಿತಿ ಹೊಂದಿದ ಬಿತ್ತಿ ಪತ್ರಗಳು ರಾರಾಜಿಸುತ್ತಿದ್ದವು.
ಈ ದೃಶ್ಯ ಕಂಡು ಬಂದಿದ್ದು ಬೆಂಗಳೂರು ವಿಶ್ವವಿದ್ಯಾಲಯ, ಜಪಾನೀಸ್ ಕಾನ್ಸುಲೇಟ್(ರಾಯಭಾರಿ) ಕಚೇರಿ ಸಹಯೋಗದೊಂದಿಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 'ಜಪಾನ್ ಹಬ್ಬ'ದಲ್ಲಿ.
ಈ ಹಬ್ಬ ಕುರಿತು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಮಾತನಾಡಿ, ಶೈಕ್ಷಣಿಕ ಸಂಶೋಧನೆಗಾಗಿ ಜಪಾನ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಸದ್ಯದಲ್ಲೇ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ನಮ್ಮ ವಿದ್ಯಾರ್ಥಿಗಳು ಜಪಾನ್ಗೆ ಹೋಗಿ ಅಭ್ಯಾಸ ನಡೆಸುವುದರಿಂದ ಹೆಚ್ಚಿನ ಸಂಶೋಧನೆ ಮಾಡಲು ಸಹಾಯವಾಗುತ್ತದೆ. ಇದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ಕ್ಕೆ ಪತ್ರ ಬರೆದು ಧನ ಸಹಾಯ ಕೋರುತ್ತೇನೆ ಎಂದರು. ಟೋಯಾಟಾ ಕಿರ್ಲೋಸ್ಕರ್ ಕಂಪನಿ ನಮ್ಮ
ವಿಶ್ವವಿದ್ಯಾಲಯದಲ್ಲಿ ಜಪಾನ್ ಭಾಷೆ ಬೋಧಿಸಲು ಶಿಕ್ಷಕರ ಖರ್ಚು ವೆಚ್ಚ ಭರಿಸುತ್ತಿದೆ. ಜಪಾನ್ ಭಾಷೆಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತಿದೆ ಎಂದರು. ಜಪಾನೀಸ್ಗಳು ಮಾತನಾಡುವುದಕ್ಕಿಂತ ಕೆಲಸ ಮಾಡುವುದು ಹೆಚ್ಚು. ಜಪಾನ್ ಮತ್ತು ಜರ್ಮನಿಯಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತದೆ. ವಿಶ್ವವಿದ್ಯಾಲಯ ಆವರಣದಲ್ಲಿ ಈ ಹಬ್ಬ ಆಚರಿಸಲು ಖುಷಿಯಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಪಾನ್ ರಾಯಭಾರ ಕೇಂದ್ರದ ಮುಖ್ಯಸ್ಥ ನೋಬುಕೈ ಯಮಮೋಟೋ ಮಾತನಾಡಿ, ನಗರದಲ್ಲಿ ಜಪಾನ್ ಶಾಲೆಗಳನ್ನು ಪ್ರಾರಂಭಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಜಪಾನಿಗರು ಹೆಚ್ಚಾಗುತ್ತಿರುವುದರಿಂದ ಅವರಿಗಾಗಿ ವರ್ಷಕೊಮ್ಮೆ ಈ ಹಬ್ಬ ನಡೆಸುತ್ತಿರುವುದು ಒಳ್ಳೆಯ ಸಂಗತಿ. ಜಪಾನ್ ಭಾಷೆ ಕಲಿಕೆಗಾಗಿ ನಗರದ ಸಾಕಷ್ಟು ಖಾಸಗಿ ಕಂಪನಿಗಳು ಸಹಾಯ ಹಸ್ತ ನೀಡುತ್ತಿರುವುದು ಜಪಾನ್ ಭಾಷೆ ಬೆಳವಣಿಗೆಗೆ ಸಹಾಯಕಾರಿಯಾಗಿದೆ ಎಂದರು. ಈ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವಿದೇಶಿ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಈರೇಶಿ, ಶ್ರೀವಿದ್ಯಾ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

