ಬೆಂಗಳೂರು ನಗರ

ಇಂದು ರಕ್ತದಾನ ಆಂದೋಲನ

Published On :

ಬೆಂಗಳೂರು: ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಿಲಾಯನ್ಸ್ ರಿಟೇಲ್ ಲಿಮಿಟೆಡ್ ದೇಶಾದ್ಯಂತ ಫೆ.28ರಂದು ರಕ್ತದಾನ ಆಂದೋಲನ ಆಯೋಜಿಸಿದೆ. ಫೆ.28 ರಂದು ಬೆಳಗ್ಗೆ 10.30ರಿಂದ ಸಂಜೆ 4.30ರವರೆಗೆ ದೇಶದ 35 ನಗರಗಳಲ್ಲಿರುವ 50ಕ್ಕೂ ಹೆಚ್ಚು ರಿಲಾಯನ್ಸ್ ರಿಟೇಲ್ ಮಳಿಗೆಗಳಲ್ಲಿ ರಕ್ತದಾನ ಆಯೋಜಿಸಲಾಗಿದೆ. ರೆಡ್ ಕ್ರಾಸ್, ರೋಟರಿ ಕ್ಲಬ್, ಸ್ವಾಸ್ಥ್ಯ ಕಲ್ಯಾಣ ರಕ್ತ ನಿಧಿಯಂತಹ ಅನೇಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಂದೋಲನ ನಡೆಸಿ ರಕ್ತದ ಅಗತ್ಯವಿರುವವರಿಗೆ ತಲುಪುವ ಕಾರ್ಯ ಮಾಡಲಾಗುತ್ತದೆ ಎಂದು ರಿಲಾಯನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಭಾಷಾಂತರ ತರಬೇತಿ
ಭಾಷಾಂತರ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು 60 ದಿನಗಳ ಭಾಷಾಂತರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಗೃಹಿಣಿಯರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ವಕೀಲರಿಗೆ ದೂರಶಿಕ್ಷಣದ ಮೂಲಕ ಈ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಮೊಬೈಲ್- 9902276578.

ಇಂದು ನೀರಿನ     ಅದಾಲತ್
ಜಲಮಂಡಳಿಯ ಪೂರ್ವ 2ನೇ ಉಪವಿಭಾಗದ ನೀರಿನ ಅದಾಲತ್ ಫೆ. 28 ರಂದು ಎಇಸಿಎಸ್ ಬಡಾವಣೆ ಸಹಾಯಕ ಎಂಜಿನಿಯರ್ ಕಚೇರಿಯಲ್ಲಿ ನಡೆಯಲಿದೆ. ಭುವನೇಶ್ವರ ನಗರ ಸೇವಾಠಾಣೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು, ನೀರಿನ ಕುರಿತಾದ ಸಮಸ್ಯೆಗಳನ್ನು ದೂರು ನೀಡುವುದರ ಮೂಲಕ ಬಗೆಹರಿಸಿಕೊಳ್ಳಬಹುದು. ಮಾಹಿತಿಗೆ 22945115.

'ಕಲೆ ಉಳಿವಿಗಾಗಿ 13 ಅಕಾಡೆಮಿ ರಚನೆ'
ರಾಮನಗರ: ನಶಿಸಿ ಹೋಗುತ್ತಿರುವ ಕಲೆ ಮತ್ತು ಕಲಾ ಸಂಸ್ಥೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆ ರೂಪಿಸಿ, ಅನುದಾನ ನೀಡುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ತಿಳಿಸಿದ್ದಾರೆ.  ನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶಾಂತಲಾ ಚಾರಿಟ್ರಬಲ್ ಟ್ರಸ್ಟ್ ವತಿಯಿಂದ ಬುಧವಾರ ನಡೆದ ಶಾಂತಲಾ ಅಂತಾರಾಜ್ಯ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಲೆಗಳ ಉಳಿವಿಗೆ ಸರ್ಕಾರ 13 ಅಕಾಡೆಮಿ ಸ್ಥಾಪಿಸಿದೆ ಎಂದು ಪ್ರತಿಪಾದಿಸಿದರು.ಇಂದಿನ ಸಾಕಷ್ಟು ಮಕ್ಕಳಲ್ಲಿ ಸುಪ್ತ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ತರಬೇತಿ ಜತೆಗೆ ಪ್ರೋತ್ಸಾಹ ನೀಡುವ ಮತ್ತಷ್ಟು ಕಾರ್ಯಕ್ರಮ ರೂಪಿಸಲು ಸರ್ಕಾರ ಮುಂದಾಗಬೇಕಿದೆ. ಈ ಮೂಲಕ ಕಲೆಗಳ ಪುನರುತ್ಥಾನಕ್ಕೆ ಅಗತ್ಯ ಎಂದು ತಿಳಿಸಿದರು.   ಇದೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಶಾಸ್ತ್ರೀಯ ಸಂಗಿತ ಕಲಾವಿದೆ ನಾಗಮಣಿ ಶ್ರೀನಾಥ್, ಕಲಾವಿದೆ ಉಷಾದಾತಾರ್, ಮಣಿಪುರ ಕಲಾವಿದ ಜಿತಿಯೊ ಚೀಫಿ, ಅಸ್ಸಾಂನ ಮಹಾನಂದ ಗೊಗಾಯಿ ಅವರಿಗೆ ಶಾಂತಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.