ಲಿಫ್ಟ್ ಅವಘಡ: ನಾಲ್ವರಿಗೆ ಗಾಯ
ಬೆಂಗಳೂರು: ಮಲ್ಲೇಶ್ವರ 15ನೇ ತಿರುವಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಲಿಫ್ಟ್ ಅನಾಹುತ ಸಂಭವಿಸಿದ್ದು, ಪ್ರಾಣಹಾನಿ ಸಂಭವಿಸಿಲ್ಲ.
ಲಕ್ಷ್ಮಿ ಮೆಟರ್ನಿಟಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಈ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಗರ್ಭಿಣಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯ ಮಹೇಶ್ ರಾವ್ ತಿಳಿಸಿದ್ದಾರೆ.
ಗರ್ಭಿಣಿ ವಂದನಾ ಮಿಶ್ರಾ(32), ಆಕೆಯ ಪತಿ ಶಂಕರ್ನಾದ ಮಿಶ್ರಾ(36), ಲಿಫ್ಟ್ ನಿರ್ವಾಹಕ ಪುಟ್ಟರಾಜು, ಆಸ್ಪತ್ರೆಯ ಆಯ ಜಯಾ ಗಾಯಗೊಂಡವರು.
ಜಯಾ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ ಎನ್ನಲಾಗಿದೆ. ಈ ಆಸ್ಪತ್ರೆಯ ಮತ್ತೊಂದು ಕಟ್ಟಡ ನಿರ್ಮಾಣವಾಗುತ್ತಿದೆ. ಹಾಗಾಗಿ ರೋಗಿಗಳಿಗೆ ಮಾತ್ರ ಅನುಕೂಲವಾಗಲೆಂದು 2012ರ ಏಪ್ರಿಲ್ನಲ್ಲಿ ತಾತ್ಕಾಲಿಕವಾಗಿ ಲಿಫ್ಟ್ ಅಳವಡಿಸಲಾಗಿತ್ತು. ಭಾಸ್ಕರ್ ಅಡ್ವಾನ್ಸ್ ಅಟೋಮೇಷನ್ ಕಂಪನಿಯವರು ಇದರ ಉಸ್ತುವಾರಿ ವಹಿಸಿದ್ದರು.
ಕಂಪನಿ ಸಿಬ್ಬಂದಿ ತಿಂಗಳಿಗೊಮ್ಮೆ ಬಂದು ಲಿಫ್ಟ್ ಪರಿಶೀಲಿಸುತ್ತಿದ್ದರು. ಆದರೂ 2012ರ ಜೂನ್ನಲ್ಲಿ ಇಂತಹುದೇ ಅನಾಹುತ ಸಂಭವಿಸಿತ್ತು.
ನಂತರ ಯಾವುದೇ ಅನಾಹುತ ಸಂಭವಿಸಿರಲಿಲ್ಲ ಎಂದು ಅಲ್ಲಿನ ಹಿರಿಯ ವೈದ್ಯರು ತಿಳಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ: ತಪಾಸಣೆಗೆಂದು ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದ ವಂದನಾ ಮತ್ತು ಆಕೆಯ ಪತಿ ಮಹಡಿಗೆ ಹೋಗಲು ಲಿಫ್ಟ್ ಹತ್ತಿದ್ದಾರೆ.
ಲಿಫ್ಟ್ನಲ್ಲಿ ಪುಟ್ಟರಾಜು, ಜಯಾ ಸಹ ತೆರಳಿದರು. ಅದು ಮೇಲಕ್ಕೆ ಹೋದ ಕೆಲವೇ ಸೆಕೆಂಡ್ಗಳಲ್ಲಿ ಮುರಿದು ಬಿದ್ದಿದೆ. ಸುದ್ದಿ ತಿಳಿದ ಆಸ್ಪತ್ರೆಯ ಆಂಬ್ಯುಲೆನ್ಸ್ ಸಿಬ್ಬಂದಿ ಬಂದು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

