ಹೆಲಿಕಾಪ್ಟರ್ ಆಯ್ತು, ಹೈಟೆಕ್ ವಾಹನ ಬಂತು

ಕ.ಪ್ರ. ವಾರ್ತೆ ಬೆಳಗಾವಿ ಮಾ.22-
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಚಾರಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸಿ ಹೈಟೆಕ್ ವಾಹನ ತಯಾರಿಸಿಕೊಂಡಂತೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ ಜಾರಕಿಹೊಳಿಯೂ ಪ್ರಚಾರಕ್ಕಾಗಿ ಸುಮಾರು ಅರ್ಧ ಕೋಟಿ ವ್ಯಯಿಸಿ ಹೈಟೆಕ್ ವಾಹನವೊಂದನ್ನು ಸಜ್ಜುಗೊಳಿಸಿಕೊಂಡಿದ್ದಾರೆ.
ಈಗಾಗಲೇ ಪ್ರಚಾರಕ್ಕಾಗಿ ಹಾಗೂ ನಾಯಕರ ತಿರುಗಾಟಕ್ಕಾಗಿ ಹೆಲಿಕಾಪ್ಟರ್ ಒಂದನ್ನು ಬಾಡಿಗೆಗೆ ಪಡೆದಿದ್ದು, ಅದರ ಬೆನ್ನಿಗೆ ಹೈಟೆಕ್ ವಾಹನವೂ ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಟ್ರಾವೆಲರ್ ಟೆಂಪೋ ವಾಹನ ಪ್ರಚಾರಕ್ಕಾಗಿ ಗೋಕಾಕದ ಹಿಲ್ ಗಾರ್ಡ್ನ ಆವರಣದಲ್ಲಿ ಸಜ್ಜಾಗಿ ನಿಂತಿದೆ. 30 ಲಕ್ಷ ವೆಚ್ಚದ ಈ ವಿಶೇಷ ವಾಹನವನ್ನು ಕೊಚ್ಚಿನ್ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಟಿವಿ, ಡೈನಿಂಗ್ ಟೇಬಲ್, ಸುಖಾಸನಗಳು, ಹವಾನಿಯಂತ್ರಣ ವ್ಯವಸ್ಥೆ, ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆ ಮತ್ತಿತರ ಸೌಲಭ್ಯವಿದೆ. ವಾಹನದ ಒಳಾಂಗಣವೂ ವಿಶೇಷವಾಗಿದೆ. ಸ್ನಾನಗೃಹ ಮತ್ತು ಶೌಚಾಲಯ ವ್ಯವಸ್ಥೆಯೂ ಇದೆ.
ಮೊದಲ ಹಂತದ ಪ್ರಚಾರ ಅಂತ್ಯ: ಹೆಲಿಕಾಪ್ಟರ್ ಬಳಸಿ ಈಗಾಗಲೇ ಮೊದಲ ಹಂತದ ಪ್ರಚಾರ ಕಾರ್ಯ ಮುಗಿದಿದೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂಬ ಏಕೈಕ ಉದ್ದೇಶದಿಂದ ನಾವೆಲ್ಲ ಶ್ರಮಿಸುತ್ತಿದ್ದೇವೆ. ಕಡಿಮೆ ಅವಧಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ಹೆಲಿಕಾಪ್ಟರ್ ಮತ್ತು ಹೈಟೆಕ್ ವಾಹನ ಅನುಕೂಲವಾಗಿದೆ ಎಂದು ಜಾರಕಿಹೊಳಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
- ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಪ್ರಚಾರಕ್ಕೆ ಹೈಟೆಕ್ ಲುಕ್ ಮೋದಿ ಬಳಸಿದ ಕಾಪ್ಟರ್
- ಜಾರಕಿಹೊಳಿ ಅವರು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿರುವ ದಿಲ್ಲಿ ಮೂಲದ ಅಗಸ್ಟಾ ಕಂಪನಿಯ ಹೆಲಿಕಾಪ್ಟರ್ ಅನ್ನು ಈ ಹಿಂದೆ ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಳಸಿದ್ದರು.
-ಶ್ರೀಶೈಲ ಮಠದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


